Top 10 Cars: ರೂ.11 ಲಕ್ಷ ಬೆಲೆ.. ಹ್ಯುಂಡೈನ ಈ ಪ್ರಖ್ಯಾತ ಕಾರು ನಂಬರ್ 1, ಟಾಟಾ, ಮಾರುತಿ ಕಾರುಗಳನ್ನು ಹಿಂದಿಕ್ಕಿ ಬಿಡ್ತು!

ವಿಶ್ವದಲ್ಲಿ ಭಾರತ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಇತ್ತೀಚೆಗೆ ಪ್ರಮುಖ ವಾಹನ ತಯಾರಕ ಕಂಪನಿಗಳು ಜುಲೈ ತಿಂಗಳ (2024) ಕಾರು ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿವೆ. ಮಾರುತಿ ಸುಜುಕಿ 6 ಕಾರುಗಳೊಂದಿಗೆ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಆ ನಂತರ ಸ್ಥಾನದಲ್ಲಿ 2 ಕಾರುಗಳೊಂದಿಗೆ ಟಾಟಾ ಇದ್ದು, ಹ್ಯುಂಡೈ ಮೋಟಾರ್ ಮತ್ತು ಮಹೀಂದ್ರಾ ಕಂಪನಿಯ ಒಂದೊಂದು ಕಾರುಗಳು ಕೂಡ ಮಾರಾಟದ ಪಟ್ಟಿಯಲ್ಲಿವೆ. ಆದಾಗ್ಯೂ ಹ್ಯುಂಡೈ ಕಂಪನಿಯ ಈ ಕಾರು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ನಂಬರ್ 1 ಸ್ಥಾನಕ್ಕೆ ಬಂದಿದೆ.

ಕಳೆದ ತಿಂಗಳು (ಜುಲೈ 2024) ಹ್ಯುಂಡೈ ಕ್ರೆಟಾ (Hyundai Creta) ಎಸ್‌ಯುವಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಮೊದಲ ಸ್ಥಾನದಲ್ಲಿದೆ. ಒಟ್ಟು 17,350 ಯುನಿಟ್‌ ಕ್ರೆಟಾ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಿದ 14,062 ಯುನಿಟ್‌ಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 23.38% ಪ್ರಗತಿಯಾಗಿದೆ. ಈ ಕಾರು ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Top 10 Cars sales July 2024 Hyundai Creta Become Number 1 Maruti Swift 2nd Full List

ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಹ್ಯಾಚ್‌ಬ್ಯಾಕ್‌ ಮುಂದುವರಿದಿದೆ. ಜುಲೈನಲ್ಲಿ 16,854 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಜುಲೈನಲ್ಲಿ ಮಾರಾಟ ಮಾಡಿದ 17,896 ಯುನಿಟ್‌ಗೆ ಹೋಲಿಸಿದರೆ ಶೇಕಡ 5.82% ಮಾರಾಟ ಪ್ರಮಾಣ ಕುಸಿತ ಕಂಡಿದೆ. ಈ ಕಾರು, ರೂ.6.49 ಲಕ್ಷದಿಂದ ರೂ.9.60 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಒಳಗೊಂಡಿದೆ.

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಹ್ಯಾಚ್‌ಬ್ಯಾಕ್ ಮೂರನೇ ಸ್ಥಾನದಲ್ಲಿದೆ. ಜುಲೈ ತಿಂಗಳು 16,191 ಯುನಿಟ್ ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಿದ 12,970 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 24.83% ಬೆಳವಣಿಗೆಯಾಗಿದೆ. ಈ ಕಾರು ರೂ.5.54 ಲಕ್ಷದಿಂದ ರೂ.7.33 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ದೊರೆಯುತ್ತದೆ.

Top 10 Cars sales July 2024 Hyundai Creta Become Number 1 Maruti Swift 2nd Full List

ನಾಲ್ಕನೇ ಸ್ಥಾನದಲ್ಲಿ ಟಾಟಾ ಪಂಚ್ (Tata Punch) ಇದ್ದು, ಇಂಧನ ಹಾಗೂ ಎಲೆಕ್ಟ್ರಿಕ್ ಕಾರನ್ನು ಒಟ್ಟಿಗೆ ಸೇರಿಸಿ 16,121 ಯುನಿಟ್ ಮಾರಾಟ ಮಾಡಲಾಗಿದೆ. 2023ರ ಜುಲೈನಲ್ಲಿ ಮಾರಾಟ ಮಾಡಿದ 12,019ಗೆ ಹೋಲಿಸಿದರೆ, ಶೇಕಡ 34.13% ಪ್ರಗತಿಯಾಗಿದೆ. ಈ ಕಾರಿನ ಇಂಧನ ಚಾಲಿತ ರೂಪಾಂತರ ರೂ.6.13 ಲಕ್ಷದಿಂದ ರೂ.10.20 ಲಕ್ಷ ಹಾಗೂ ಎಲೆಕ್ಟ್ರಿಕ್ ಚಾಲಿತ ರೂಪಾಂತರ ರೂ.10.99 ಲಕ್ಷದಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಐದನೇ ಸ್ಥಾನದಲ್ಲಿದ್ದು, ಮಾರಾಟ ಪ್ರಮಾಣ ಕೊಂಚ ಸುಧಾರಿಸಿದ್ದು, 15,701 ಯುನಿಟ್ ಮಾರಲಾಗಿದೆ. ಈ ಕಾರು ರೂ.8.69 ರಿಂದ ರೂ.13.03 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 1.5-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಒಳಗೊಂಡಿದ್ದು, 20.3 ರಿಂದ 26.11 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Top 10 Cars sales July 2024 Hyundai Creta Become Number 1 Maruti Swift 2nd Full List

ಆರನೇ ಸ್ಥಾನದಲ್ಲಿ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಇದ್ದು, 14676 ಯುನಿಟ್ ಕಾರುಗಳನ್ನು ಮಾರಾಟ ಮಾಡಲಿದೆ. ಈ ಕಾರು ರೂ.8.34 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಟಾಟಾ ನೆಕ್ಸಾನ್ (13,902 ಯುನಿಟ್), ಮಹೀಂದ್ರಾ ಸ್ಕಾರ್ಪಿಯೋ (12237ಯುನಿಟ್), ಮಾರುತಿ ಇಕೋ (11,916 ಯುನಿಟ್) ಹಾಗೂ ಮಾರುತಿ ಡಿಜೈರ್ (11,647 ಯುನಿಟ್) ಕಾರುಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, August 6, 2024, 20:50 [IST]
English summary
Top 10 cars sales july 2024 hyundai creta become number 1 maruti swift 2nd full list
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+