ಮಾರುತಿ ಸುಜುಕಿ ಸ್ವಿಫ್ಟ್ ನಂಬರ್ 1.. ಬಲೆನೊ ನಂಬರ್ 2.. ಟಾಟಾ ಆಲ್ಟ್ರೋಜ್ ಲಾಸ್ಟ್!
ಭಾರತದ ಮಾರುಕಟ್ಟೆಯಲ್ಲಿ 2-3 ವರ್ಷಗಳಿಂದ ಎಸ್‌ಯುವಿಗಳು (ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇವುಗಳಿಗೆ ಖರೀದಿದಾರರು ಕೂಡ ಮನಸೋತಿದ್ದಾರೆ. ಇದರಿಂದಾಗಿ ಹ್ಯಾಚ್‌ಬ್ಯಾಕ್ (ಸಣ್ಣ ಕಾರು) ಮಾರಾಟ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಆದರೂ, ಕೆಲವೊಂದು ಹ್ಯಾಚ್‌ಬ್ಯಾಕ್‌ಗಳು ಎಸ್‌ಯುವಿಗಳಿಗೆ ಸವಾಲೆಸೆಯುವ ರೀತಿಯಲ್ಲಿ ಮಾರಾಟವಾಗುತ್ತಿವೆ. ಇತ್ತೀಚೆಗೆ ಪ್ರಮಖ ವಾಹನ ತಯಾರಕ ಕಂಪನಿಗಳು ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದ್ದು, ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದರೆ, ಟಾಟಾ ಆಲ್ಟ್ರೋಜ್ (Tata Altroz) ಮಾರಾಟ ಮಾತ್ರ ತೀವ್ರತರವಾಗಿ ಕುಸಿತವಾಗಿದೆ.
ಮೊದಲಿಗೆ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ನಂಬರ್ 1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಮಾರಾಟದ ಅಂಕಿಅಂಶಗಳ ಬಗ್ಗೆ ಗಮನ ಹರಿಸೋಣ. ಕಳೆದ ತಿಂಗಳು (ಸೆಪ್ಟೆಂಬರ್ 2024) 16,241 ಯುನಿಟ್ ಸ್ವಿಫ್ಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 14,703 ಯುನಿಟ್‌ಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 10% ಬೆಳವಣಿಗೆಯಾಗಿದೆ.

ಎರಡನೇ ಸ್ಥಾನದಲ್ಲಿ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಇದೆ. ಆದರೂ ಹತ್ತಾರು ಕಾರಣಗಳಿಗೆ ಮಾರಾಟ ಪ್ರಮಾಣ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ಸೆಪ್ಟೆಂಬರ್‌ನಲ್ಲಿ (2024) 14,292 ಯುನಿಟ್ ಬಲೆನೊ ಕಾರುಗಳನ್ನು ಮಾರಾಟಗೊಳಿಸಲಾಗಿದೆ. 2023ರ ಸೆಪ್ಟೆಂಬರ್‌ನ 18,417 ಯುನಿಟ್‌ಗೆ ಹೋಲಿಸಿದರೆ, ಶೇಕಡ -22% ಕುಸಿತವಾಗಿದೆ.
ಮೂರನೇ ಸ್ಥಾನವನ್ನು ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಭದ್ರಪಡಿಸಿಕೊಂಡಿದೆ. ಸೆಪ್ಟೆಂಬರ್‌ನಲ್ಲಿ 13,339 ಯುನಿಟ್ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 16,250 ಯುನಿಟ್‌ಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಮಾರಾಟ ಪ್ರಮಾಣ ಶೇಕಡ -18% ಇಳಿದಿದೆ.

ನಾಲ್ಕನೇ ಸ್ಥಾನದಲ್ಲಿ ಅತಿಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಮಾರುತಿ ಸುಜುಕಿ ಆಲ್ಟೊ (Maruti Suzuki Alto) ಇದ್ದು, ಹೋದ ತಿಂಗಳು (ಸೆಪ್ಟೆಂಬರ್ 2024) 8,655 ಯುನಿಟ್ ಆಲ್ಟೊ ಕಾರುಗಳನ್ನು ಮಾರಾಟಗೊಳಿಸಲಾಗಿದೆ. 2023ರ ಸೆಪ್ಟೆಂಬರ್‌ನಲ್ಲಿ ಮಾರಾಟ ಮಾಡಿದ 7,791 ಯುನಿಟ್‌ಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 11% ಅಭಿವೃದ್ಧಿ ಸಾಧಿಸಲಾಗಿದೆ.
ಐದನೇ ಸ್ಥಾನದಲ್ಲಿರುವ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ (Hyundai Grand i10 Nios) ಹ್ಯಾಚ್‌ಬ್ಯಾಕ್ ಮಾರಾಟ ಕೊಂಚ ಮಾತ್ರವೇ ಕುಸಿತವಾಗಿದೆ. ಸೆಪ್ಟೆಂಬರ್‌ನಲ್ಲಿ 5,103 ಯುನಿಟ್ ಗ್ರ್ಯಾಂಡ್ ಐ10 ಕಾರುಗಳನ್ನು ಮಾರಾಟ ಮಾಡಲಾಗಿದೆ. ಅದೇ 2023ರ ಸೆಪ್ಟೆಂಬರ್‌ನಲ್ಲಿ ಮಾರಲಾಗಿದ್ದ 5,223 ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ -2% ಇಳಿಕೆಯಾಗಿದೆ.
ಆರನೇ ಸ್ಥಾನದಲ್ಲಿ ಹ್ಯುಂಡೈ ಐ20 (Hyundai i20) ಕಾರಿದ್ದು, 4,428 ಯುನಿಟ್ ಮಾರಾಟ ಮಾಡಲಾಗಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಟಾಟಾ ಟಿಯಾಗೊ (4,225 ಯುನಿಟ್), ಟೊಯೊಟಾ ಗ್ಲಾನ್ಜಾ (3,246), ಮಾರುತಿ ಸುಜುಕಿ ಸೆಲೆರಿಯೊ (3,241 ಯುನಿಟ್) ಹಾಗೂ ಟಾಟಾ ಆಲ್ಟ್ರೋಜ್ (2,758) ಹ್ಯಾಚ್‌ಬ್ಯಾಕ್‌ಗಳಿವೆ.
ಒಟ್ಟಾರೆಯಾಗಿ ಹ್ಯಾಚ್‌ಬ್ಯಾಕ್‌ಗಳು ಅತ್ಯಂತ ಕೈಗೆಟುಕುವ ಬೆಲೆ ಹಾಗೂ ಆಕರ್ಷಕ ವೈಶಿಷ್ಟ್ಯದೊಂದಿಗೆ ಖರೀದಿಗೆ ದೊರೆಯುವುದರಿಂದ ಈಗಲೂ ಬಹುತೇಕರ ಆಯ್ಕೆಯ ವಾಹನವಾಗಿ ಹೊರಹೊಮ್ಮುತ್ತಿವೆ. ಈ ಅಕ್ಟೋಬರ್‌ನಲ್ಲಿ ಮಾರಾಟ ಪ್ರಮಾಣ ಸಾಕಷ್ಟು ಸುಧಾರಿಸಿರುವ ನಿರೀಕ್ಷೆಯಿದೆ. ಇದರಿಂದ ಮುಂಬರುವ ತಿಂಗಳಲ್ಲಿ ಹೊಚ್ಚ ಹೊಸ ಹ್ಯಾಚ್‌ಬ್ಯಾಕ್‌ಗಳು ಮಾರಾಟಕ್ಕೆ ಬರಲು ದಾರಿಯೂ ಆಗಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications