ಈ ಎಸ್‌ಯುವಿಗಳು ಬರೀ ಪರ್ಫಾಮೆನ್ಸ್‌ ಮಾತ್ರವಲ್ಲ, ಮೈಲೇಜ್‌ಗಳಿಗೂ ಬಾಪ್‌: ನಿಮ್ಮ ಆಯ್ಕೆ ಇದಾಗಿರಲಿ!

ಭಾರತದಲ್ಲಿ ಕಾರು ಕೊಳ್ಳುವ ಬಹುತೇಕರು ಮೊದಲು ಆದ್ಯತೆ ನೀಡುವುದು ಈ ಕಾರುಗಳ ಮೈಲೇಜ್‌ಗೆ. ಕಾರಿನ ಮೈಲೇಜ್‌ಗಳನ್ನು ಅಧಿಕಗೊಳಿಸುವುದಕ್ಕಾಗಿಯೇ ಕಾರು ನಿರ್ಮಾಣ ಕಂಪನಿಗಳು ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಇದರಲ್ಲಿ ಅತೀ ಸುಲಭವಾದ ಮತ್ತು ಎಲ್ಲರೂ ಇಷ್ಟಪಡುವ ಇಂಧನ ಮಾದರಿಯೆಂದರೆ ಅದು ಸಿಎನ್‌ಜಿ. ಪೆಟ್ರೋಲ್‌ಗಿಂತಲೂ ಕಡಿಮೆ ಬೆಲೆಯಿರುವ ಈ ಸಿಎನ್‌ಜಿ ಆಯ್ಕೆಯನ್ನು ಇತ್ತೀಚಿನ ಕಾರು ನಿರ್ಮಾಣ ಕಂಪನಿಗಳು ತಮ್ಮ ಕೆಲವು ಕಾರು ಮಾದರಿಗೆ ಅಳವಡಿಸುತ್ತಿದ್ದಾರೆ. ಇಂದಿನ ಈ ಲೇಖನದಲ್ಲು ಹೆಚ್ಚು ಮೈಲೇಜ್‌ ಕೊಡುವ ಸಿಎನ್‌ಜಿ ಕಾರುಗಳು ಯಾವುದು ಎಂದು ನೋಡೋಣ.

ಮಾರುತಿ ಸುಜುಕಿ ಫ್ರಾಂಕ್ಸ್‌: ಮಾರುತಿ ಸುಜುಕಿ ತನ್ನ ಫ್ರಾಂಕ್ಸ್ (Maruti Fronx) ಎಸ್‍ಯುವಿಯನ್ನು S-CNG ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ S-CNG (Maruti Suzuki Fronx CNG) ಎಸ್‍ಯುವಿಯ ಬೆಲೆಯು ರೂ.8.41 ಲಕ್ಷವಾಗಿದೆ. ಈ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯು ಸಿಗ್ಮಾ ಮತ್ತು ಡೆಲ್ಟಾ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

Top 3 CNG SUV s With Great Mileage On Indian Roads Maruti Fronx Brezza And Toyota Hyryder

ಸುಜುಕಿ ಫ್ರಾಂಕ್ಸ್ ಎಸ್‍ಯುವಿಯ ಸಿಗ್ಮಾ ರೂಪಾಂತರದ ಬೆಲೆಯು ರೂ.8.41 ಲಕ್ಷವಾದರೆ, ಡೆಲ್ಟಾ ರೂಪಾಂತರದ ಬೆಲೆಯು ರೂ.9.27 ಲಕ್ಷವಾಗಿದೆ. ಮಾರುತಿ ಸುಜುಕಿ ಫ್ರಾಂಕ್ಸ್ S-CNG ಎಸ್‍ಯುವಿಯ 28.51 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಮಾರುತಿ ಸುಜುಕಿ ಫ್ರಾಂಕ್ಸ್ S-CNG ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ ಮಾದರಿಗೆ ಪೈಪೋಟಿ ನೀಡುತ್ತದೆ.

ಮಾರುತಿ ಸುಜುಕಿ ಬ್ರೆಝಾ: ಇನ್ನು ಮಾರುತಿ ಸುಜುಕಿಯ ಮತ್ತೊಂದು ಪ್ರಮುಖ ಕಾರು ಮಾದರಿಯಾದ ಬ್ರೇಝಾ ಕುರಿತಾಗಿ ನೊಡುವುದಾದರೆ, ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.5 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 PS ಗರಿಷ್ಠ ಪವರ್, 137 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

Top 3 CNG SUV s With Great Mileage On Indian Roads Maruti Fronx Brezza And Toyota Hyryder

ಸಿಎನ್‌ಜಿ ಚಾಲಿತ ಕಾರು ಸಹ ಇದೇ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಆದರೆ, 88 PS ಪವರ್, 121.5 Nm ಪೀಕ್ ಟಾರ್ಕ್ ಉತ್ಪಾದಿಸಲಷ್ಟೇ ಶಕ್ತವಾಗಿದೆ. ಕೇವಲ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಯಲ್ಲಿ ಸಿಗುತ್ತದೆ. ಪೆಟ್ರೋಲ್ ರೂಪಾಂತರಗಳು 17.38 kmpl - 19.8 kmpl, ಸಿಎನ್‌ಜಿ ರೂಪಾಂತರಗಳು 25.51 km/kg ಮೈಲೇಜ್ ನೀಡುತ್ತವೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್: ಕೇವಲ ಮೈಲೇಜ್ ಮಾತ್ರವಲ್ಲದೆ, ಈ ಎಸ್‌ಯುವಿಯು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ಎಸ್‌ಯುವಿಯು ರೂ.11.14 ಲಕ್ಷದಿಂದ ರೂ.20.19 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಮಾರುತಿಯೊಂದಿಗೆ ಹಂಚಿಕೊಂಡು ಕಳೆದ ವರ್ಷ ಮಾರುತಿ ಗ್ರಾಂಡ್‌ ವಿಟಾರಾದ ರೀಬ್ಯಾಡ್ಜ್ ಆವೃತ್ತಿಯಾಗಿ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್(Urban Cruiser Hyryder) ಅನ್ನು ಪರಿಚಯಿಸಿತು. ಇದು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಲೀ.ಗೆ ಬರೋಬ್ಬರಿ 27.97 ಕೆಎಂಪಿಎಲ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 1, 2024, 18:13 [IST]
English summary
Top 3 cng suvs with great mileage on indian roads maruti fronx brezza and toyota hyryder
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+