ಶೀಘ್ರದಲ್ಲೆ ಬಿಡುಗಡೆಯಾಗಲಿವೆ 5 ಪುಟ್ಟ ಎಸ್‌ಯುವಿಗಳು: ಕಡಿಮೆ ಬೆಲೆ, ಭರ್ಜರಿ ವೈಶಿಷ್ಟ್ಯಗಳು!

ಭಾರತೀಯ ಕಾರು ಉದ್ಯಮದಲ್ಲಿ ಎಲ್ಲಾ ವರ್ಗದ ಜನರಿಗೂ ಇಷ್ಟವಾದ ಒಂದೇ ಒಂದು ಸೆಗ್ಮೆಂಟ್ ಎಂದರೇ ಅದು ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್ ಆಗಿದೆ. ಇದರಲ್ಲಿ ಕೈಗೆಟುಕುವ ಬೆಲೆ, ಅತ್ಯುತ್ತಮ ಬೆಲೆ, ಉತ್ತಮ ಮೈಲೇಜ್ ಹಾಗೂ ಒಂದು ಪುಟ್ಟ ಕುಟುಂಬ ಪ್ರಯಾಣಿಸಬಹುದಾದ ಸೌಕರ್ಯವನ್ನು ಕಾಂಪಾಕ್ಟ್ ಎಸ್‌ಯುವಿಗಳು ಹೊಂದಿರುತ್ತವೆ. ಇಂತಹ ಸೆಗ್ಮೆಂಟಿನಲ್ಲಿ 2025 ರಲ್ಲಿ ಕೆಲವು ಪ್ರಮುಖ ಬ್ರಾಂಡ್‌ಗಳು ಬಿಡುಗಡೆಗೆ ಸಜ್ಜಾಗುತ್ತಿವೆ, ಹ್ಯುಂಡೈ, ಸ್ಕೋಡಾ, ಕಿಯಾ, ಮಹೀಂದ್ರಾ ಮತ್ತು ಕಿಯಾದಂತಹ ವಾಹನ ತಯಾರಕರು ಹೊಸ ಕಾರುಗಳನ್ನು ಪರಿಚಯಿಸುತ್ತಿದ್ದಾರೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಐದು ಸಬ್-4 ಮೀ. ಎಸ್‌ಯುವಿಗಳನ್ನು ಇಲ್ಲಿ ನೋಡೋಣ..

ಕಿಯಾ ಸೈರಸ್: ಕಿಯಾ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯಾದ ಸೈರಸ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ, ಇದು ಸೊನೆಟ್ ಮತ್ತು ಸೆಲ್ಟೋಸ್ ನಡುವೆ ಇರಲಿದೆ. 2025 ರ ಆರಂಭದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದ್ದು, ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುವ ಸಾಧ್ಯತೆಯಿದೆ, ಇದು ಕೇವಲ ಪೆಟ್ರೋಲ್ ಪವರ್‌ಟ್ರೇನ್‌ಗಳನ್ನು ಹೊಂದಿತ್ತದೆ.

top-5-upcoming-sub-4-meter-suvs-in-2025

ಇದು ಪ್ರತಿ ಲೀಟರ್‌ಗೆ 18 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಮೂಲಗಳು ಹೇಳಿವೆ. ಸೈರಸ್ ಈಗಾಗಲೇ ಪರೀಕ್ಷೆಗೆ ಒಳಗಾಗುತ್ತಿರುವುದನ್ನು ಹಲವು ಬಾರಿ ಗುರುತಿಸಲಾಗಿದೆ. ಇದು ನಗರ ಖರೀದಿದಾರರನ್ನು ಗುರಿಯಾಗಿಸಿಕೊಂಡು ಡಿಸೈನ್, ಪ್ರಾಯೋಗಿಕತೆ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ನೀಡಲಿದ್ದಾರೆ. ಒಟ್ಟಾರೆ ಕಿಯಾದ ಎಂಟ್ರಿ ಲೆವಲ್ ಕಾರಾಗಿ ಬಿಡುಗಡೆಯಾಗಲಿದೆ.

ಹೊಸ ತಲೆಮಾರಿನ ಕಿಯಾ ಸೊನೆಟ್: ಕಿಯಾ ಕಂಪನಿಯ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಯಾದ ಸೊನೆಟ್ ಹೊಸ ನವೀಕರಣಕ್ಕೆ ಸಜ್ಜಾಗಿದೆ. ಹೊಸ ತಲೆಮಾರಿನ ಸೊನೆಟ್ ಸುಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ADAS ನಂತಹ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳು ಸೇರಿದಂತೆ ವಿನ್ಯಾಸ ವರ್ಧನೆಗಳು ಮತ್ತು ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದುವ ನಿರೀಕ್ಷೆಯಿದೆ.

top-5-upcoming-sub-4-meter-suvs-in-2025

ಇದು ಅಸ್ತಿತ್ವದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹೊಸ ಸೊನೆಟ್ 2025 ರ ಕೊನೆಯಲ್ಲಿ ಬಿಡುಗಡೆಯಾಗಲಿದ್ದು, ಸ್ಪರ್ಧಾತ್ಮಕ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನ ಭದ್ರಕೋಟೆಯನ್ನು ಮುಂದುವರಿಸುವ ನಿರೀಕ್ಷೆಯಿದೆ. ಸದ್ಯ ಈ ವಿಭಾಗದಲ್ಲಿ ಕಂಪನಿಗೆ ಸೋನೆಟ್ ಉತ್ತಮ ಮಾರಾಟವನ್ನು ತಂದುಕೊಡುತ್ತಿದೆ.

ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ: ಹ್ಯುಂಡೈ ಎರಡನೇ ತಲೆಮಾರಿನ ವೆನ್ಯೂವನ್ನು 2025 ರಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ವೆನ್ಯೂ ತನ್ನ ಅಣ್ಣನಾದ ಕ್ರೆಟಾದಿಂದ ಗಮನಾರ್ಹ ವಿನ್ಯಾಸ ಅಂಶಗಳನ್ನು ಪಡೆಯಲಿದೆ. ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳು ಸೇರಿದಂತೆ ಅದೇ ಎಂಜಿನ್ ಆಯ್ಕೆಗಳನ್ನು ವರ್ಧಿತ ವೈಶಿಷ್ಟ್ಯಗಳು ಮತ್ತು ಹೆಚ್ಚು ಪ್ರೀಮಿಯಂ ಕ್ಯಾಬಿನ್‌ನೊಂದಿಗೆ ಬಿಡುಗಡೆ ಮಾಡಲಾಗುವುದು.

top-5-upcoming-sub-4-meter-suvs-in-2025

ಸ್ಕೋಡಾ ಕೈಲಾಕ್: ಸ್ಕೋಡಾ ಕಂಪನಿಯು ಕೈಲಾಕ್ ಎಂಬ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ. ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಇದನ್ನು ಕುಶಾಕ್ ಮತ್ತು ಸ್ಲಾವಿಯಾ ಡಿಸೈನ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಕೈಲಾಕ್ 1.0-ಲೀಟರ್, ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ, ಇದನ್ನು ಸಿಟಿ ಡ್ರೈವಿಂಗ್‌ಗಾಗಿ ನಿರ್ಮಿಸುತ್ತಿದ್ದಾರೆ.

ಮಹೀಂದ್ರಾ 3ಒಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ: ಮಹೀಂದ್ರಾ ಮುಂಬರುವ 3 ಒಎಕ್ಸ್ ಆಧಾರಿತ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಸಬ್ -4 ಮೀ ಜಾಗದಲ್ಲಿ ಗೇಮ್ ಚೇಂಜರ್ ಆಗಲಿದೆ. 2025ರ ಕೊನೆಯಲ್ಲಿ ಬಿಡುಗಡೆಯಾಗಲಿರುವ ಈ ಎಲೆಕ್ಟ್ರಿಕ್ ಎಸ್‌ಯುವಿ ಸುಧಾರಿತ ಸಂಪರ್ಕ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ನಗರ ಖರೀದಿದಾರರಿಗೆ ಕೈಗೆಟುಕುವ ಬೆಲೆಗೆ ಈ 3ಒಎಕ್ಸ್ ಇವಿಯನ್ನು ನೀಡುವ ಗುರಿಯನ್ನು ಮಹೀಂದ್ರಾ ಹೊಂದಿದೆ.

Article Published On: Tuesday, October 8, 2024, 11:31 [IST]
English summary
Top 5 upcoming sub 4 meter suvs in 2025
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+