ಬಜೆಟ್‌ ಕಮ್ಮಿಯಿದೆ ಎಂದು ಚಿಂತೆ ಮಾಡಬೇಡಿ: ಕಡಿಮೆ ಬೆಲೆಗೆ ಸೆಕೆಂಡ್‌ ಹ್ಯಾಂಡ್ ಅಲ್ಲ, ಈ ಕಾರುಗಳನ್ನು ಖರೀದಿಸಿ

ನೀವೇನಾದರೂ ಕಡಿಮೆ ಬೆಲೆಗೆ ಉತ್ತಮ ಕಾರನ್ನೇನಾದರೂ ಖರೀದಿಸಬೇಕು ಎಂದುಕೊಂಡಿದ್ದೀರಾ? ಮೊದಲ ಬಾರಿಗೆ ಒಂದು ಸಾಧಾರಣ ಭಾರತೀಯ ಕುಟುಂಬ ಕಡಿಮೆ ಬೆಲೆಯ ಕಾರನ್ನು ಖರೀದಿಸಬೇಕು ಎಂದುಕೊಂಡಿದ್ದರೆ, ಹೆಚ್ಚೇನು ಆಯ್ಕೆಗಳು ಉಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಕಾರುಗಳು ಸಾಕಷ್ಟು ದುಬಾರಿಯಾಗುತ್ತಿದ್ದರೂ, ಈ ಬಜೆಟ್‌ನಲ್ಲಿ ಮೂರು ಕಾರುಗಳು ನಿಮ್ಮ ಖರೀದಿಗೆ ಲಭ್ಯವಾಗಲಿದೆ. ಬಜೆಟ್‌ ಕಡಿಮೆಯಾದರೂ ನಿಮಗೆ ಈ ಕಾರುಗಳಲ್ಲಿ ಅಗತ್ಯಕ್ಕೆ ತಕ್ಕ ಫೀಚರ್ ಮತ್ತು ಉತ್ತಮ ಮೈಲೇಜ್‌ಗಳು ಲಭ್ಯವಾಗಲಿದೆ. ಈ ಕಾರುಗಳ ಕುರಿತಾಗಿ ನಾವಿಂದು ನೋಡೋಣ.

ಮಾರುತಿ ಸುಜುಕಿ ಆಲ್ಟೊ ಕೆ10: ಆಲ್ಟೊ ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ಮಾರಾಟವಾದ ಕಾರು ಕೂಡ ಆಗಿದೆ. ಕಳೆದ ವರ್ಷ ಆಲ್ಟೊ 800 ಸ್ಥಗಿತಗೊಂಡಿದ್ದರೂ, ನೀವು ಈಗ ಆಲ್ಟೊ ಕೆ10 ಭಾರತೀಯ ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದಾಗಿದೆ.

Top Cars For First Time Car Buyers In India Alto K10 Renault Kwid Hyundai Exter And Hyundai i10

ಆಲ್ಟೊ ಕೆ10 ರೂ 3.99 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಇದು 1.0-ಲೀಟರ್ K10C ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು 67PS ಗರಿಷ್ಠ ಶಕ್ತಿ ಮತ್ತು 89Nm ಗರಿಷ್ಠ ಟಾರ್ಕ್ ಅನ್ನು ನೀಡುತ್ತದೆ. ಇದರ ಬೆಲೆಯನ್ನು ನೋಡುವುದಾದರೆ (5-ಸ್ಪೀಡ್ MT) ರೂ. 5 ಲಕ್ಷದೊಳಗೆ (ಎಕ್ಸ್ ಶೋ ರೂಂ) ಲಭ್ಯವಿದೆ.

ರೆನಾಲ್ಟ್ ಕ್ವಿಡ್: ಕ್ವಿಡ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 0.8-ಲೀಟರ್ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಗ್ರಾಹಕರು ಯಾವುದನ್ನು ಬೇಕಾದರೂ ಖರೀದಿ ಮಾಡಬಹುದಾಗಿದೆ. ಕ್ವಿಡ್ ಆರಂಭಿಕ ಬೆಲೆ ರೂ 4.69 ಲಕ್ಷ (ಎಕ್ಸ್ ಶೋ ರೂಂ).

Top Cars For First Time Car Buyers In India Alto K10 Renault Kwid Hyundai Exter And Hyundai i10

ಕ್ವಿಡ್ 1.0-ಲೀಟರ್ SCe ಪೆಟ್ರೋಲ್ ಎಂಜಿನ್ ಅನ್ನು ಬಳಸಿಕೊಳ್ಳುತ್ತದೆ, ಇದು 68PS ಗರಿಷ್ಠ ಶಕ್ತಿ ಮತ್ತು 91Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 5 ಲಕ್ಷ ಬೆಲೆಗೆ (ಎಕ್ಸ್ ಶೋರೂಂ), ನೀವು ಕೇವಲ 5-ಸ್ಪೀಡ್ MT ಆಯ್ಕೆಯನ್ನು ಪಡೆಯಬಹುದಾಗಿದೆ.

ಹ್ಯುಂಡೈ ಎಕ್ಸ್‌ಟರ್‌: ಈ ಎಸ್‌ಯುವಿ, 1.2-ಲೀಟರ್, 4 ಸಿಲಿಂಡರ್ (ಪೆಟ್ರೋಲ್) ಎಂಜಿನ್ ಹೊಂದಿದ್ದು, 81.8 bhp ಗರಿಷ್ಠ ಪವರ್ ಹಾಗೂ 113.8 Nm ಪಿಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಮೋಡ್ ನಲ್ಲಿ 67.7 bhp ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಆವೃತ್ತಿಯು ಮ್ಯಾನ್ಯುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

Top Cars For First Time Car Buyers In India Alto K10 Renault Kwid Hyundai Exter And Hyundai i10

ದಕ್ಷಿಣ ಕೊರಿಯಾದ ಹ್ಯುಂಡೈನ ಎಕ್ಸ್‌ಟರ್ ಟಾಟಾ ಪಂಚ್‌ಗೆ ಭಾರೀ ಪೈಪೋಟಿ ನೀಡಲಿದ್ದು, ಬಜೆಟ್‌ನಲ್ಲಿ ಕೊಂಚ ರಾಜಿ ಮಾಡಿಕೊಳ್ಳುವುದಾದರೆ ಇದು ಉತ್ತಮ ಆಯ್ಕೆ. ಭಾರತದ ಮಾರುಕಟ್ಟೆಯಲ್ಲಿ ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರಿನ ಒಂದಷ್ಟು ಡಿಸೈನ್ ಹಾಗೂ ಫೀಚರ್ಸ್ ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಹಾಗೂ ಔರಾ ಸೆಡಾನ್‌ಗೆ ಹೋಲಿಕೆಯಾಗುತ್ತದೆ.

ಹ್ಯುಂಡೈ ಗ್ರ್ಯಾಂಡ್‌ i10: ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ (Hyundai Grand i10 Nios) ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಹೊಸ ಆವೃತ್ತಿಯು ನವೀನ ಅಮೆಜಾನ್ ಗ್ರೇ ಬಣ್ಣದೊಂದಿಗೆ ಲಭ್ಯವಿದ್ದು, ಟೈಲ್‌ಗೇಟ್‌ನಲ್ಲಿ 'ಕಾರ್ಪೊರೇಟ್' ಲೋಗೋವನ್ನು ಹೊಂದಿದೆ.

1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಹೊಂದಿದ್ದು, 82 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 112 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 5-ಸ್ವೀಡ್ ಮ್ಯಾನುವಲ್ ಮತ್ತು 4-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಪಡೆದಿದೆ. ಇದು 19 ಕೆಎಂಪಿಎಲ್ ಗಿಂತ ಹೆಚ್ಚಿನ ಮೈಲೇಜ್ ಕೊಡುತ್ತದೆ ಎಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 1, 2024, 13:11 [IST]
English summary
Top cars for first time car buyers in india maruti alto k10 renault kwid hyundai exter
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+