ಮಾರುಕಟ್ಟೆಗೆ ಕಾಲಿಟ್ಟ ಬಡವರ ಸೆಡಾನ್ ಟಿಗೋರ್ iCNG AMT: ಅದ್ಭುತ ಮೈಲೇಜ್, ಭರಪೂರ ಫೀಚರ್
ಭಾರತದ ಮೊತ್ತ ಮೊದಲ ಸಿಎನ್‌ಜಿ ಚಾಲಿತ ಆಟೋಮ್ಯಾಟಿಕ್ ಕಾರಾದ ಟಿಗೋರ್ iCNG AMT ಟಾಟಾ ಮೋಟಾರ್ಸ್ ಇದೀಗ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಬಹಳ ದಿನಗಳಿಂದ ಜನರ ಮನಸ್ಸಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಕಾರು ಇದೀಗ ಕೊನೆಗೂ ಲಾಂಚ್ ಆಗಿದ್ದು, ಇದರ ಸಂಪೂರ್ಣ ವಿವರ ಇಲ್ಲಿದೆ.
ಹೊಸ ಟಾಟಾ ಟಿಗೋರ್ iCNG AMT (TATA Tigor iCNG AMT) ಕಾರನ್ನು ನಾವು ರಿವ್ಯೂ ಮಾಡಿದ್ದು ಇದರ ಸಂಪೂರ್ನ ಮಾಹಿತಿಯನ್ನು ನಾವು ನೀಡಿದ್ದೇವೆ. ಆ ವಿಡಿಯೋವನ್ನು ನಾವಿಲ್ಲಿ ನೀಡಿದ್ದು, ನಾವು ಇದರಲ್ಲಿ ಈ ಕಾರಿನ ಡಿಸೈನ್, ಇಂಟೀರಿಯರ್, ಎಂಜಿನ್, ಡ್ರೈವಿಂಗ್ ಇಂಪ್ರೆಷನ್ ಕುರಿತಾಗಿ ಮಾತನಾಡಿದ್ದೇವೆ. ನೀವೇನಾದರೂ ಈ ಕಾರನ್ನು ಕೊಳ್ಳಬೇಕು ಎಂದುಕೊಂಡರೆ ನಿಮಗಿದು ಖಂಡಿತಾ ಉಪಯೋಗವಾಗುತ್ತವೆ.

ಡಿಸೈನ್: ಹೊಸ ಟಾಟಾ ಟಿಗೋರ್ iCNG ವಾಹನದ ವಿನ್ಯಾಸವನ್ನು ನೊಡುವುದಾದರೆ, ಕಳೆದ ಬಾರಿಯ ಟಿಗೋರ್‌ನ ಅದೇ ವಿನ್ಯಾಸವನ್ನು ಇದಕ್ಕೂ ನೀಡಿದ್ದಾರೆ. ಅದೇ ಎಲ್‌ಇಡಿ ಡಿಆರ್‌ಎಲ್ ಮತ್ತು ಇದರ ಜೊತೆಗೆ ಹಳೇಯ ಟಿಗೋರ್‌ನಲ್ಲಿದ್ದ ಅದೇ ಹೆಡ್‌ಲೈಟ್‌ಗಳನ್ನು ಸಹ ನೀಡಿದ್ದಾರೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ. ಇದರ ಜೊತೆಗೆ ಕಾರಿನ ಮುಂಭಾಗದಲ್ಲಿ ಕ್ರೋಮ್ ಮತ್ತು ಪಿಯಾನೋ ಬ್ಲಾಕ್ ಫಿನಿಶ್ ಸಿಕ್ಕಿರುವುದರಿಂದ ಈ ಕಾರಿನ ನೋಟ ಮತ್ತಷ್ಟು ಪ್ರೀಮಿಯಂ ಆಗಿದೆ.
ಈ ಕಾರಿನ ಸೈಡ್ ಆ್ಯಂಗಲ್ ಅನ್ನು ನೋಡಿದಾಗ ನಮಗೆ ಕಾಣುವುದು ಇದರ 14 ಇಂಚ್‌ನ ಅಲಾಯ್ ವ್ಹೀಲ್‌ಗಳು. ಡ್ಯುಯಲ್ ಟೋನ್ ಫಿನಿಶಿಂಗ್‌ನಲ್ಲಿ ಬಂದಿರುವ ಅಲಾಯ್ ವ್ಹೀಲ್‌ಗಳು ಆಕರ್ಷಕವಾಗಿ ಕಾಣುತ್ತದೆ. ಈ ಕಾರಿನ ಹಿಂಭಾಗದಲ್ಲಿಯೂ ಕೆಲವು ಕ್ರೋಮ್ ಬಣ್ಣದ ವಿನ್ಯಾಸಗಳನ್ನು ಕಾಣಬಹುದಾಗಿದ್ದು ಹಿಂಭಾಗದಿಂದ ಈ ಕಾರಿನ ನೋಟವನ್ನು ಹೆಚ್ಚಿಸುತ್ತದೆ. ಹಿಂಭಾಗದಲ್ಲಿ ಸ್ಪಾಯಿಲರ್ ಜೊತೆಗೆ ಎಲ್‌ಇಡಿ ಸ್ಟಾಪ್‌ಲೈಟ್ ಅನ್ನು ಈ ಸ್ಪಾಯಿಲರ್‌ಗೆ ಸೇರಿಸಲಾಗಿದೆ.
ಎಂಜಿನ್: ಟಾಟಾ ಟಿಗೋರ್ iCNG ವಾಹನವು ಭಾರತದ ಮೊದಲ ಸಿಎನ್‌ಜಿ ಚಾಲಿತ ಆಟೋಮ್ಯಾಟಿಕ್ ಕಾರಾಗಿದೆ. ಈ ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ ಈ ಕಾರಿನಲ್ಲಿ, 1.2-litre ರೆವಟ್ರೋನ್ ಪೆಟ್ರೋಲ್ ಎಂಜಿನ್ ಸಿಗುತ್ತಿದ್ದು, ಈ ಎಂಜಿನ್ ಸಹಾಯದಿಂದ ಹೊಸ ಟಾಟಾ ಟಿಗೋರ್ iCNG AMT, ಸಿಎನ್‌ಜಿ ಮೋಡ್‌ನಲ್ಲಿ ಸುಮಾರು 73.4PS ಪವರ್ ಮತ್ತು ಪೆಟ್ರೋಲ್ ಮೋಡ್‌ನಲ್ಲಿ 86PS ಪವರ್ ಅನ್ನು ಉತ್ಪಾದಿಸುತ್ತದೆ.
ಚಾಲನೆಯ ಅನುಭವ: ಮೊದಲಿಗೆ ಈ ಕಾರಿನಲ್ಲಿ ಬಂಧಿರುವ ಭಾರತದ ಮೊತ್ತ ಮೊದಲ ಸಿಎನ್‌ಜಿ AMT ಗೇರ್ ಬಾಕ್ಸ್ ಬಗ್ಗೆ ಮಾತಾನಾಡೋಣ. ತನ್ನ ಕೆಲಸವನ್ನು ಈ ಗೇರ್ ಬಾಕ್ಸ್ ಸಮರ್ಪಕವಾಗಿ ನಿಭಾಯಿಸುತ್ತಿದ್ದು, ಕಾರಿಗೆ ಗರಿಷ್ಟ ಮೈಲೇಜ್ ಅನ್ನು ತಂದು ಕೊಡುತ್ತಿದೆ. ನೀವೇನಾದರೂ ಈ ಕಾರನ್ನು ಓಡಿಸುವಾಗ ಗರಿಷ್ಟ ಮೈಲೇಜ್ ಅನ್ನು ಪಡೆಯಲು ಪ್ರಯತ್ನಿಸುವುದಾದರೆ ಅದಕ್ಕೆ ಈ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಾಕಷ್ಟು ಸಹಾಯ ಮಾಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications