ಹತ್ತು ಲಕ್ಷದ ಒಳಗೆ ಸೂಪರ್‌ ಪರ್ಫಾಮೆನ್ಸ್‌ ಕಾರು ಬೇಕೆ?: ಇಲ್ಲಿದೆ ಕಡಿಮೆ ಬೆಲೆಯ ಟರ್ಬೋ ಪೆಟ್ರೋಲ್‌ ಕಾರುಗಳು

ಭಾರತದಲ್ಲಿ ಟರ್ಬೋ ಪೆಟ್ರೋಲ್‌ ಕಾರುಗಳಿಗೆ ಅದರದ್ದೇ ಆದ ಅಭಿಮಾನಿಗಳು ಇದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಟರ್ಬೋ ಎಂಜಿನ್‌ ಇರುವ ಕಾರುಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಈ ಕಾರಣದಿಂದಲೇ ಈಗ ಬಹುತೇಕ ಕಾರು ನಿರ್ಮಾಣ ಕಂಪನಿಗಳು ಹೊಸ ಕಾರು ಮಾದರಿಯನ್ನು ಮಾರುಕಟ್ಟೆಗೆ ತರುವಾಗ ಅದರ ಟರ್ಬೋ ವೇರಿಯಂಟ್ ಅನ್ನು ಸಹ ಪರಿಚಯಿಸುತ್ತಾರೆ. ಈ ರೀತಿ ಪರಿಚಯಿಸಿದ, ಹತ್ತು ಲಕ್ಷ ರೂಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದಾದ ಟರ್ಬೋ ಎಂಜಿನ್‌ ಕಾರುಗಳ ಕುರಿತಾಗಿ ನಾವಿಂದು ನೋಡಲಿದ್ದೇವೆ. ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ.

ಮಹೀಂದ್ರಾ XUV 3XO: ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ300 (Mahindra XUV300) ಕಾರು ರೂ.7.99 ಲಕ್ಷದಿಂದ ರೂ.14.76 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಡಬ್ಲ್ಯೂ2, ಡಬ್ಲ್ಯೂ4, ಡಬ್ಲ್ಯೂ6 ಒಳಗೊಂಡಂತೆ 5 ರೂಪಾಂತರ ಹಾಗೂ ಆಕರ್ಷಕ ಬಣ್ಣಗಳೊಂದಿಗೆ ದೊರೆಯುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

Top Turbo Petrol Cars Under 10 Lakh Rupees Ex Show Room In India

ಈ ಎಕ್ಸ್‌ಯುವಿ300 ಕಾರು, 1.2-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಟಿಜಿಡಿಐ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನ್ವಯ 6-ಸ್ವೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಪಡೆದಿದ್ದು, 20.1 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ. ಜೊತೆಗೆ 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.

ಆಲ್ಟ್ರೋಜ್‌ ರೇಸರ್‌: ಆಲ್ಟ್ರೊಜ್‌ನ ಹಳೆಯ ಸಾಮಾನ್ಯ ವೇರಿಯೆಂಟ್‌ಗಳಲ್ಲಿ 1.2 ಲೀಟರಿನ ಐ-ಟರ್ಬೊ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಇದು 110 ಬಿಹೆಚ್‌ಪಿ ಪವರ್ ಹಾಗೂ 140 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಆದರೆ ರೇಸರ್ ಆವೃತ್ತಿಯು ನೆಕ್ಸಾನ್‌ನ 1.2-ಲೀಟರ್ ಟರ್ಬೊ ಪೆಟ್ರೋಲ್ ಘಟಕವನ್ನು ಹೊಂದಿದ್ದು, ಇದು 120 ಪಿಎಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಹೊರಹಾಕುತ್ತದೆ.

Top Turbo Petrol Cars Under 10 Lakh Rupees Ex Show Room In India

ಆಲ್ಟ್ರೊಜ್ ರೇಸರ್ 3 ರೂಪಾಂತರಗಳು (R1, R2 ಮತ್ತು R3) ಮೂರು ಬಣ್ಣಗಳ ಆಯ್ಕೆಯೊಂದಿಗೆ (ಪ್ಯೂರ್ ಗ್ರೇ, ಅಟಾಮಿಕ್ ಆರೆಂಜ್ ಮತ್ತು ಅವೆನ್ಯೂ ವೈಟ್) ಲಭ್ಯವಿದೆ. ಇದಲ್ಲದೆ, Altroz ​​ಲೈನ್ ಅಪ್ ಅನ್ನು ಹೆಚ್ಚಿಸಿ, ಟಾಟಾ ಮೋಟಾರ್ಸ್ ಎರಡು ಹೊಸ ರೂಪಾಂತರಗಳನ್ನು (XZ LUX ಮತ್ತು XZ+S LUX) ಪರಿಚಯಿಸಿದೆ.

ಸಿಟ್ರನ್ ಸಿ3 ಟರ್ಬೋ: ಹೊಸ 'ಸಿಟ್ರನ್ ಸಿ3' ಕಾರು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ದೊರೆಯುತ್ತದೆ. ಬೆಂಗಳೂರಿನಲ್ಲಿ ಇದರ ಬೇಸ್ ವೇರಿಯೆಂಟ್ (ಆರಂಭಿಕ ರೂಪಾಂತರ) ಆಗಿರುವ 'ಲೈವ್' ರೂ.7.47 ಲಕ್ಷ, 'ಫೀಲ್' ರೂ.8.79 ಲಕ್ಷ, 'ಫೀಲ್ ಡಿಟಿ' ರೂ.8.97 ಲಕ್ಷ, 'ಶೈನ್' ರೂ.9.42 ಲಕ್ಷ ಹಾಗೂ ಟಾಪ್ ಎಂಡ್ ವೇರಿಯೆಂಟ್ (ಗರಿಷ್ಠ ಶ್ರೇಣಿ ಆವೃತ್ತಿ) ಎಂದು ಹೆಸರಿಸಲಾಗಿರುವ 'ಶೈನ್ ಡುಯಲ್ ಟೋನ್ ಟರ್ಬೊ' ರೂ.10.85 ಲಕ್ಷ ಆನ್ ರೋಡ್ ದರವನ್ನು ಹೊಂದಿದೆ.

ನೂತನ ಹ್ಯಾಚ್‌ಬ್ಯಾಕ್‌ 2 ಪೆಟ್ರೋಲ್ ಪವರ್‌ಟ್ರೇನ್‌ಗಳನ್ನು ಹೊಂದಿದೆ. 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 82 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 115 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.2-ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್, 110 ಪಿಎಸ್ ಪವರ್ ಹಾಗೂ 190 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

ಹ್ಯುಂಡೈ ಐ20 ಎನ್-ಲೈನ್‌: ಈ ಕಾರು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 120 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 172 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, July 7, 2024, 13:00 [IST]
English summary
Top turbo petrol cars under 10 lakh rupees ex show room in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+