toyota: ಗ್ರಾಹಕರ ಮನಸೆಳೆದಿದೆ ಅಗ್ಗದ ಟೊಯೋಟಾ MPV: ಫುಲ್ ಡಿಮ್ಯಾಂಡ್... 26 ಕಿ.ಮೀ ಮೈಲೇಜ್!
ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್, ಆಟೋಮ್ಯಾಟಿಕ್ ಎಸಿ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ ಮತ್ತು ಕೆಲವು ಸಂಪರ್ಕಿತ ಕಾರು ವೈಶಿಷ್ಟ್ಯಗಳಂತಹ ಸೌಲಭ್ಯಗಳನ್ನು ಹೊಂದಿರುವ ಬೆಸ್ಟ್ 7-ಸೀಟರ್ ಕಾರು ಟೊಯೊಟಾ ರುಮಿಯಾನ್. ಇದರ ಬೆಲೆಯ ವಿಷಯಕ್ಕೆ ಬಂದರೆ ಬೇಸ್ - ಸ್ಪೆಕ್ ಎಸ್ ವೇರಿಯೆಂಟ್ ಬೆಲೆಯು 10.44 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಇದರ ಟಾಪ್-ಸ್ಪೆಕ್ ವಿ ವೇರಿಯೆಂಟ್ ಬೆಲೆಯು 13.73 ಲಕ್ಷ ರೂ.ಗಳವರೆಗೆ ಹೋಗುತ್ತದೆ.
ಭಾರತದಲ್ಲಿ ಖರೀದಿಗೆ ಸಿಗುವ ಬೆಸ್ಟ್ 7-ಸೀಟರ್ ಕಾರುಗಳಲ್ಲಿ ಟೊಯೊಟಾ ರುಮಿಯಾನ್ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಇದು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದರಲ್ಲಿ 5-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ. ಹಾಗೆಯೇ ಸಿಎನ್‌ಜಿ ಆಯ್ಕೆಯಿದ್ದು 5-ಸ್ಪೀಡ್ ಮ್ಯಾನುವಲ್ ಮಾತ್ರ ಬರುತ್ತದೆ.

ಸುರಕ್ಷತೆ: ಟಾಪ್ - ಸ್ಪೆಕ್ ವೇರಿಯೆಂಟ್‌ಗಳು ಆರು ಏರ್ ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಮುಂಭಾಗದ ಫಾಗ್ ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಉಳಿದಂತೆ ರುಮಿಯಾನ್‌ನಲ್ಲಿರುವ ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಸೀಟ್ ಬೆಲ್ಟ್ ರಿಮೈಂಡರ್, ಹಿಲ್ ಹೋಲ್ಡ್ ಅಸಿಸ್ಟ್, ಎರಡು ಏರ್ ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್, ಐಎಸ್ ಒಫಿಕ್ಸ್ ಮೌಂಟ್‌ಗಳು ಸೇರಿವೆ.
ಮೈಲೇಜ್: ಹೊಸ ಟೊಯೋಟಾ ರುಮಿಯಾನ್ ಪೆಟ್ರೋಲ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಕಾರು 20.11 ಕಿ.ಮೀ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಕಾರು 20.51 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೇಯೇ ಸಿಎನ್‌ಜಿ ಮ್ಯಾನುವಲ್ ಗೇರ್‌ಬಾಕ್ಸ್‌ನ ಕಾರು ಬರೋಬ್ಬರಿ 26.11 ಕಿ.ಮೀ/ಕೆ.ಜಿ ಮೈಲೇಜ್ ನೀಡುತ್ತದೆ.

ಫೀಚರ್ಸ್: ಟೊಯೊಟಾ ರುಮಿಯಾನ್‌ನಲ್ಲಿ ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್, ಪುಶ್ - ಬಟನ್ ಎಂಜಿನ್ ಸ್ಟಾರ್ಟ್ / ಸ್ಟಾಪ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳು, ಕೀಲೆಸ್ ಎಂಟ್ರಿ ಮತ್ತು ಆಟೋಮ್ಯಾಟಿಕ್ ಹೆಡ್ ಲೈಟ್‌ಗಳನ್ನು ಸಹ ಹೊಂದಿದೆ.
ಬೆಸ್ಟ್ ವೇರಿಯೆಂಟ್: ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿರುವ ರುಮಿಯಾನ್‌ನ ಮಿಡ್-ಸ್ಪೆಕ್ ಜಿ ವೆರಿಯೆಂಟ್ 11.60 ಲಕ್ಷ (ಎಕ್ಸ್ ಶೋರೂಂ) ರೂ. ಬೆಲೆಯಿದ್ದು, ನಿಮ್ಮ ಹಣಕ್ಕೆ ತಕ್ಕ ಮೌಲ್ಯವನ್ನು ನೀಡುತ್ತದೆ. ಇದನ್ನು ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್‌ನಲ್ಲಿ ಪಡೆಯಬಹುದು.

ನಿಜಕ್ಕೆ ಇದು ಮಾರುತಿ ಸುಜುಕಿ ಎರ್ಟಿಗಾದ ರೀಬ್ಯಾಡ್ಜ್ ಆವೃತ್ತಿಯಾಗಿದ್ದು, ಆರಾಮದಾಯಕ ಆಸನ, ಉತ್ತಮ ಮತ್ತು ಸುಗಮ ಚಾಲನೆಯ ಅನುಭವವನ್ನು ನೀಡುತ್ತದೆ. ನೀವು 15 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ನಿಮ್ಮ ಕುಟುಂಬಕ್ಕೆ ಆರಾಮದಾಯಕ 7 ಸೀಟರ್ ಎಂಪಿವಿಯನ್ನು ಹುಡುಕುತ್ತಿದ್ದರೆ, ಟೊಯೊಟಾ ರುಮಿಯಾನ್ ಬೆಸ್ಟ್ ಆಯ್ಕೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








