Toyota: ಗಾಬರಿ ಹುಟ್ಟಿಸುವ ಸಂಖ್ಯೆಯಲ್ಲಿ ಇನ್ನೋವಾ ಕಾರುಗಳ ಮಾರಾಟ.. ಬೆಚ್ಚಿಬಿದ್ದ ಎದುರಾಳಿಗಳು!
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ, ಕಳೆದ ತಿಂಗಳು (ಅಕ್ಟೋಬರ್ - 2024) ಸರಿ ಸುಮಾರು 28,138 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 20,542 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 37% ಬೆಳವಣಿಗೆಯಾಗಿದೆ. ಟೊಯೊಟಾ ಕಂಪನಿಯು ಈ ಪರಿಪ್ರಮಾಣದಲ್ಲಿ ಪ್ರಗತಿ ಸಾಧಿಸಲು ಇನ್ನೋವಾ ಎಂಪಿವಿ ಪ್ರಮುಖವಾದ ಕಾರಣವಾಗಿವೆ. ಇದರೊಟ್ಟಿಗೆ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಫಾರ್ಚೂನರ್ ಎಸ್‌ಯುವಿಗಳು ಕೂಡ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿವೆ.
ಟೊಯೊಟಾ ಕಂಪನಿ ಮಾರಾಟಗೊಳಿಸುವ ಇನ್ನೋವಾ (Innova) ಜನಪ್ರಿಯ ಎಂಪಿವಿಯಾಗಿ ಹೊರಹೊಮ್ಮಿದ್ದು, ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿದೆ. ಅಕ್ಟೋಬರ್‌ನಲ್ಲಿ 11,007 ಯುನಿಟ್ ಇನ್ನೋವಾ ಕಾರುಗಳನ್ನು ದೇಶೀಯ ಗ್ರಾಹಕರು ಖರೀದಿ ಮಾಡಿದ್ದಾರೆ. 2023ರ ಅಕ್ಟೋಬರ್ ತಿಂಗಳಲ್ಲಿ ಮಾರಲಾಗಿದ್ದ 8,183 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) 35% ಬೆಳವಣಿಯಾಗಿದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ಇನ್ನೋವಾ ಎಂಪಿವಿ 'ಕ್ರಿಸ್ಟಾ' & 'ಹೈಕ್ರಾಸ್' ಎಂಬ ಎರಡು ರೂಪದಲ್ಲಿ ಖರೀದಿಗೆ ದೊರೆಯುತ್ತದೆ. ನೂತನ ಇನ್ನೋವಾ ಕ್ರಿಸ್ಟಾ ರೂ.19.99 ರಿಂದ ರೂ.26.55 ಲಕ್ಷ ಮತ್ತು ಇನ್ನೋವಾ ಹೈಕ್ರಾಸ್ ರೂ.19.77 ರಿಂದ ರೂ.30.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಜೊತೆಗೆ ಇವೆರೆಡು ಮಾದರಿಗಳು (ಮಾಡೆಲ್) 7/ 8 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಲಭ್ಯವಿವೆ.
ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ಕೂಡ ಜನಪ್ರಿಯ ಎಸ್‌ಯುವಿಯಾಗಿದೆ. ಹೋದ ತಿಂಗಳು (ಅಕ್ಟೋಬರ್ - 2024) 5,449 ಯುನಿಟ್ ಹೈರಿಡರ್ ಕಾರುಗಳನ್ನು ಮಾರಾಟಗೊಳಿಸಲಾಗಿದೆ. 2023ರ ಅಕ್ಟೋಬರ್‌ನಲ್ಲಿ ಮಾರಲ್ಪಟ್ಟ 3,987 ಯುನಿಟ್‌ಗಳಿಗೆ ಹೋಲಿಸಿದರೆ, ಶೇಕಡ 37% ಅಭಿವೃದ್ಧಿ ಸಾಧಿಸಲಾಗಿದೆ.

ಹೊಚ್ಚ ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿ ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಈ ಕಾರು, ರೂ.11.14 ರಿಂದ ರೂ.19.99 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಹೈಬ್ರಿಡ್ (ಪೆಟ್ರೋಲ್ & ಎಲೆಕ್ಟ್ರಿಕ್) ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 19.39 ರಿಂದ 27.97 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಮಂದಿ ಪ್ರಯಾಣಿಸಬಹುದು.
ಟೊಯೊಟಾ ಫಾರ್ಚೂನರ್ (Toyota Fortuner) ಫುಲ್-ಸೈಜ್ ಎಸ್‌ಯುವಿಯಾಗಿ ಹೆಸರುವಾಗಿದೆ. ಈ ಅಕ್ಟೋಬರ್‌ನಲ್ಲಿ ಬರೋಬ್ಬರಿ 3,684 ಯುನಿಟ್ ಫಾರ್ಚೂನರ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಲಾದ 2,475 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 49% ಪ್ರಗತಿಯಾಗಿದೆ.

ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳ ಹಾಟ್ ಫೇವರಿಟ್ ಆಗಿರುವ ಈ ಟೊಯೊಟಾ ಫಾರ್ಚೂನರ್ ಎಸ್‌ಯುವಿ, ರೂ.33.43 ರಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 2.7-ಲೀಟರ್ ಪೆಟ್ರೋಲ್ ಹಾಗೂ 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಕಾರಿನಲ್ಲಿ 7 ಜನರು ಓಡಾಟ ನಡೆಸಬಹುದು.
ಟೊಯೊಟಾ ಗ್ಲಾನ್ಜಾ (Toyota Glanza) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದರೂ ಅಕ್ಟೋಬರ್‌ನಲ್ಲಿ (4,273 ಯುನಿಟ್) ಮಾರಾಟ ಪ್ರಮಾಣ ಸ್ವಲ್ಪ ಮಟ್ಟಿಗೆ ಕುಸಿತವಾಗಿದೆ. 2023ರ ಅಕ್ಟೋಬರ್ ತಿಂಗಳಲ್ಲಿ ಮಾರಲ್ಪಟ್ಟ 4,724 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ಶೇಕಡ -10% ಹಿನ್ನೆಡೆಯಾಗಿದೆ. ನೂತನ ಗ್ಲಾನ್ಜಾ ಕಾರು ರೂ.6.86 ರಿಂದ ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.
ಇನ್ನುಳಿನದಂತೆ ಕೆಲವೇ ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಟೊಯೊಟಾ ಟೈಸರ್ (Toyota Taisor) ಎಸ್‌ಯುವಿ ಸಹ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಅಕ್ಟೋಬರ್‌ನಲ್ಲಿ 3,092 ಯುನಿಟ್ ಟೈಸರ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ನೂತನ ಟೈಸರ್ ಎಸ್‌ಯುವಿ ರೂ.7.74 ರಿಂದ ರೂ.13.08 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಈ ಕಾರಿನಲ್ಲಿಯೂ 5 ಮಂದಿ ಸಂಚರಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications