Toyota: ಭಾರಿ ಬೇಡಿಕೆ.. ಟೊಯೊಟಾ ಕಾರುಗಳಿಗಾಗಿ ಶೋರೂಂ ಎದುರು ಸಾಲುಗಟ್ಟಿ ನಿಂತ ಗ್ರಾಹಕರು!
ಮಾರುತಿ ಸುಜುಕಿ, ಟಾಟಾ, ಮಹೀಂದ್ರಾ, ಹ್ಯುಂಡೈ, ಹೋಂಡಾ ಹಾಗೂ ಕಿಯಾದಂತೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಕೂಡ ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಮಂಗಳವಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನವೆಂಬರ್ 1ಕ್ಕೆ ಅನ್ವಯವಾಗುವಂತೆ ಎಲ್ಲ ಕಾರುಗಳ ಕಾಯುವಿಕೆ ಅವಧಿ (Waiting Period) ಕುರಿತ ವಿವರಗಳನ್ನು ಪ್ರಕಟಿಸಿದೆ. ಜನಪ್ರಿಯ ಇನ್ನೋವಾ ಹೈಕ್ರಾಸ್ (ಹೈಬ್ರಿಡ್) ವಿತರಣೆಯಾಗಲು ಸರಿ ಸುಮಾರು 1 ವರ್ಷಗಳು ಬೇಕು.. ಅದೇ ಗ್ಲಾನ್ಜಾ ಹ್ಯಾಚ್‌ಬ್ಯಾಕ್‌ನ್ನು ಅತಿ ಶೀಘ್ರದಲ್ಲಿ ಮನೆಗೆ ತರಬಹುದು.
ಟೊಯೊಟಾ ಕಂಪನಿ ಮಾರಾಟಗೊಳಿಸುವ 'ಗ್ಲಾನ್ಜಾ' ಕಾರು ಅತ್ಯಂತ ಕಡಿಮೆ ಕಾಯುವಿಕೆ ಅವಧಿ ಹೊಂದಿದೆ. ಇದರ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಹೊಂದಿರುವ ರೂಪಾಂತರಗಳು (ವೇರಿಯೆಂಟ್) ಬುಕ್ಕಿಂಗ್ ಮಾಡಿದ 1 ತಿಂಗಳ ನಂತರ ವಿತರಣೆಯಾಗಲಿವೆ. ಪ್ರಮುಖ ಎಸ್‌ಯುವಿಯಾಗಿರುವ 'ಅರ್ಬನ್ ಕ್ರೂಸರ್ ಟೈಸರ್' ರೂಪಾಂತರಗಳು ಸಹ 1 ತಿಂಗಳ ಬಳಿಕ ಗ್ರಾಹಕರ ಮನೆ ಸೇರಲಿವೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈಡರ್ ಕಾರಿನ ಹೈಬ್ರಿಡ್ ಹಾಗೂ ಪೆಟ್ರೋಲ್ ರೂಪಾಂತರಗಳು, ಗ್ರಾಹಕರು ಆರ್ಡರ್ ಮಾಡಿದ 1 ತಿಂಗಳ ನಂತರ ವಿತರಣೆಯಾಗಲಿವೆ. ಆದರೆ, ಸಿಎನ್‌ಜಿ ಚಾಲಿತ ಹೈಡರ್‌ನ್ನು 1 ರಿಂದ 2 ತಿಂಗಳ ಬಳಿಕ ಖರೀದಿದಾರರ ಮನೆಗೆ ತಲುಪಿಸಲಾಗುತ್ತದೆ. ಪ್ಯಾಮಿಲಿ ಎಂಪಿವಿ ರೂಮಿಯನ್ ಪೆಟ್ರೋಲ್ ರೂಪಾಂತರಗಳು ಬುಕ್ಕಿಂಗ್ ಮಾಡಿದ 1 ರಿಂದ 2 ತಿಂಗಳು ಮತ್ತು ಸಿಎನ್‌ಜಿ ರೂಪಾಂತರಗಳು 2 ತಿಂಗಳ ಬಳಿಕ ವಿತರಣೆಯಾಗಿ ಬಿಡುತ್ತವೆ.
ಪ್ರಖ್ಯಾತ ಇನ್ನೋವಾ ಎಂಪಿವಿಗಳು ಕೊಂಚ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿವೆ. ಇನ್ನೋವಾ ಕ್ರಿಸ್ಟಾ ಆರ್ಡರ್ ಮಾಡಿದ 3 ರಿಂದ 4 ತಿಂಗಳ ನಂತರ ಗ್ರಾಹಕರ ಮನೆ ಸೇರುತ್ತದೆ. ಇನ್ನೋವಾ ಹೈಕ್ರಾಸ್ ಪೆಟ್ರೋಲ್ ರೂಪಾಂತರಗಳು 6 ತಿಂಗಳು ಮತ್ತು ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ರೂಪಾಂತರಗಳು 11 ತಿಂಗಳ ಬಳಿಕ ವಿತರಣೆಯಾಗುತ್ತವೆ.

ಟೊಯೊಟಾ ಹಿಲಕ್ಸ್ ಪ್ರೀಮಿಯಂ ಪಿಕ್ಅಪ್ ಟ್ರಕ್ ಆಗಿದ್ದು, ಬುಕ್ಕಿಂಗ್ ಮಾಡಿದ 1 ತಿಂಗಳ ನಂತರ ಈ ಕಾರನ್ನು ಗ್ರಾಹಕರಿಗೆ ವಿತರಿಸಲಾಗುತ್ತದೆ. ಈ ಹಿಲಕ್ಸ್ ರೂ.30.40 ರಿಂದ ರೂ.37.90 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯುತ್ತದೆ. 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, 10 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಟೊಯೊಟಾ ಫಾರ್ಚುನರ್ ಫುಲ್-ಸೈಜ್ ಎಸ್‌ಯುವಿಯೆಂದೇ ಹೆಸರುವಾಸಿಯಾಗಿದೆ. ಬುಕ್ಕಿಂಗ್ ಮಾಡಿದ 1 ರಿಂದ 2 ತಿಂಗಳ ನಂತರ ಗ್ರಾಹಕರ ಮನೆ ಸೇರುತ್ತದೆ. ನೂತನ ಫಾರ್ಚುನರ್ ರೂ.33.43 ರಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಈ ಕಾರಿನಲ್ಲಿ 7 ಜನರು ಓಡಾಟ ನಡೆಸಬಹುದು.

ಟೊಯೊಟಾ ಕ್ಯಾಮ್ರಿ ಲಕ್ಸುರಿ ಸೆಡಾನ್ ಆಗಿದೆ. ಇದು 1 ತಿಂಗಳ ಕಾಯುವಿಕೆ ಅವಧಿ ಹೊಂದಿದ್ದು, ರೂ.46.17 ಲಕ್ಷ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ. 2.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 16 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಟೊಯೊಟಾ ವೆಲ್‌ಫೈರ್ ಪ್ರೀಮಿಯಂ ಕಾರಾಗಿದ್ದು, ಬುಕ್ಕಿಂಗ್ ಮಾಡಿದ 7 ತಿಂಗಳ ಬಳಿಕ ವಿತರಣೆಯಾಗುತ್ತದೆ. ಈ ಕಾರು ರೂ.1.22 ರಿಂದ ರೂ.1.32 ಕೋಟಿ ಎಕ್ಸ್ ಶೋರೂಂ ದರವನ್ನು ಪಡೆದಿದೆ. 2.5-ಲೀಟರ್ ಹೈಬ್ರಿಡ್ (ಪೆಟ್ರೋಲ್ & ಎಲೆಕ್ಟ್ರಿಕ್) ಎಂಜಿನ್ ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications