ಟೊಯೊಟಾದ ಫಾರ್ಚ್ಯೂನರ್‌ನಲ್ಲೂ ಸಿಗಲಿದೆ ಹೈಬ್ರಿಡ್‌: ಇದರ ಮೈಲೇಜ್‌ ಕೇಳಿ ಸುಸ್ತಾದ ಗ್ರಾಹಕರು!

ಟೊಯೋಟಾ ಫಾರ್ಚ್ಯೂನರ್‌ ಎಂಬ ಹೆಸರು ಭಾರತೀಯ ವಾಹನ ಕ್ಷೇತ್ರದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತದಲ್ಲಿ ಇದು ಕೆಲವು ವರ್ಷದ ಹಿಂದಿನವರೆಗೆ ಇದು ಎಂಎಲ್‌ಎ ಗಾಡಿ ಎಂದೇ ಪ್ರಸಿದ್ದವಾಗಿತ್ತು. ಈ ಕಾರಣದಿಂದಲೇ ಹಲವರು ಟೊಯೊಟಾ ಫಾರ್ಚ್ಯೂನರ್‌ ಕಾರನ್ನು ಖರೀದಿ ಮಾಡಿ ಭಾರತೀಯ ಹೆದ್ದಾರಿಗಳಲ್ಲಿ ಮಿಂಚುತ್ತಿದ್ದಾರೆ.

ಇದೀಗ ಟೊಯೊಟಾ ಕಂಪನಿಯು ತನ್ನ ಪ್ರಸಿದ್ದ ಕಾರು ಮಾದರಿಯಾದ ಫಾರ್ಚ್ಯೂನರ್‌ಗೆ (Toyota Fortuner) ಹೊಸ ಅಪ್‌ಡೇಟ್‌ ಒಂದನ್ನು ನೀಡುತ್ತಿದೆ. ಹೌದು, ಕಂಪನಿಯು ಟೊಯೋಟಾ ಫಾರ್ಚ್ಯೂನರ್‌ನ ಮೈಲ್ಡ್‌ ಹೈಬ್ರಿಡ್‌ ಮಾದರಿಯನ್ನು ರಿವೀಲ್ ಮಾಡಿದ್ದು, ಇದೀಗ ಟೊಯೋಟಾ ಫಾರ್ಚ್ಯೂನರ್‌ ಪ್ರೇಮಿಗಳ ಮುಖದಲ್ಲಿ ಸಂತಸ ಮೂಡುವಂತೆ ಮಾಡಿದೆ. ಹೊಸ ಫಾರ್ಚ್ಯೂನರ್‌ MHEV ಮಾದರಿಯಿಂದಾಗಿ ಸುಮಾರು 5% ದಷ್ಟು ಹೆಚ್ಚಿನ ಇಂಧನ ಕ್ಷಮತೆ ಸಿಗಲಿದೆ ಎಂದು ಕಂಪನಿ ತಿಳಿಸಿದೆ.

Toyota Fortuner Mild Hybrid Revealed With More Mileage and Features

ನಿಮಗೆಲ್ಲಾ ತೀಳಿದಿರುವಂತೆ ಬಹುತೇಕ ಮಾರುತಿ ಸುಜುಕಿ ಮತ್ತು ಟೊಯೋಟಾ ಕಂಪನಿಗಳು ತಮ್ಮ ವಾಹನಗಳಲ್ಲಿ ಹೈಬ್ರಿಡ್‌ ತಂತ್ರಜ್ಞಾನವನ್ನು ಅಳವಡಿಸುತ್ತಿದ್ದು, ಇದೀಗ ಆ ಸಾಲಿಗೆ ಫಾರ್ಚ್ಯೂನರ್‌ ಸಹ ಸೇರ್ಪಡೆಯಾಗಿದೆ. ಇದರ ಜೊತೆಗೆ ಹೊಸ ಫಾರ್ಚ್ಯೂನರ್‌ನಲ್ಲಿ ಅಡಾಸ್‌ ಮತ್ತು 360 ಡಿಗ್ರೀ ಕ್ಯಾಮೆರಾ ಸೌಲಭ್ಯವು ಸಹ ಸಿಗಲಿದೆ ಎಂದು ಕಂಪನಿ ತಿಳಿಸಿದೆ. ಈ ಮೂಲಕ ವಾಹನ ಚಾಲಕನಿಗೆ ಹೆಚ್ಚಿನ ಅನುಭವ ಸಿಗಲಿದ್ದು, ಪ್ರಯಾಣ ಮತ್ತಷ್ಟು ಸುಖಕರವಾಗಲಿದೆ.

ಈ ವಾಹನದ ಡಿಸೈನ್ ಬಗ್ಗೆ ಹೇಳುವುದಾದರೆ, ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಟೊಯೊಟಾ ಫಾರ್ಚ್ಯೂನರ್ ಲೆಜೆಂಡರ್‌ ಮಾದರಿಯ ಅದೇ ವಿನ್ಯಾಸ ಮತ್ತು ಸ್ಟೈಲಿಂಗ್‌ ಇರಲಿದ್ದು, ಇದು ಗ್ರಾಹಕರಿಗೆ ಸಿಗುವ ಮತ್ತೊಂದು ಪ್ಲಸ್‌ ಪಾಯಿಂಟ್‌ ಎಂದು ಹೇಳಬಹುದು. ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಟಾಪ್‌ ಎಂಡ್‌ ಮಾಡೆಲ್‌ ಆಗಿರುವ ಲೆಜೆಂಡರ್‌ ನ ವಿನ್ಯಾಸ ಬೇಸ್ ಮಾಡೆಲ್‌ ಫಾರ್ಚ್ಯೂನರ್‌ಗಿಂತಲೂ ಕೊಂಚ ಮಟ್ಟಿಗೆ ವಿಭಿನ್ನವಾಗಿದೆ.

Toyota Fortuner Mild Hybrid Revealed With More Mileage and Features

ಟೊಯೊಟಾ ಫಾರ್ಚುನರ್ ಎಸ್‌ಯುವಿ, ಪೆಟ್ರೋಲ್ ಹಾಗೂ ಡೀಸೆಲ್ ಪವರ್ ಟ್ರೇನ್ ಆಯ್ಕೆಯಲ್ಲಿ ಸಿಗಲಿದ್ದು, ಇದರ 2.7 - ಲೀಟರ್ ಪೆಟ್ರೋಲ್ ಎಂಜಿನ್ 166 ಪಿಎಸ್ ಗರಿಷ್ಠ ಪವರ್ (ಶಕ್ತಿ) 245 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ.

ಮತ್ತೊಂದು, 2.8 - ಲೀಟರ್ ಟರ್ಬೊ ಡೀಸೆಲ್ ಎಂಜಿನ್ 204 ಪಿಎಸ್ ಪವರ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, 10.0 ಕೆಎಂಪಿಎಲ್ ಇಂಧನ ದಕ್ಷತೆಯನ್ನು ಹೊಂದಿದೆ.

Toyota Fortuner Mild Hybrid Revealed With More Mileage and Features

ಈ ಕಾರು ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 8 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕನೆಕ್ಟ್ದ್ ಕಾರ್ ಟೆಕ್, 6 - ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಕಿಕ್-ಟು-ಓಪನ್ ಪವರ್ಡ್ ಟೈಲ್‌ಗೇಟ್, ಡುಯಲ್-ಜೋನ್ ಎಸಿ ಹಾಗೂ ಕ್ರೂಸ್ ಕಂಟ್ರೋಲ್ ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, April 18, 2024, 18:39 [IST]
English summary
Toyota fortuner mild hybrid revealed with more mileage and features
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+