Toyota: ಬೈಕ್‌ನಂತೆ ಮೈಲೇಜ್ ನೀಡುವ ಗ್ಲಾನ್ಜಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
ದೇಶದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಪ್ರೀಮಿಯಂ 'ಗ್ಲಾನ್ಜಾ' ಹ್ಯಾಚ್‌ಬ್ಯಾಕ್, ಉತ್ತಮ ಮೈಲೇಜ್‌ನೊಂದಿಗೆ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.
ನೀವು ನೂತನ ಟೊಯೊಟಾ ಗ್ಲಾನ್ಜಾ (Toyota Glanza) ಕಾರನ್ನು ಕೊಂಡುಕೊಳ್ಳಬೇಕೇ.. ಇಲ್ಲಿ ಈ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಕುರಿತು ವಿವರಿಸಿದ್ದೇವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಚಾಲಿತ ಬೇಸ್ ಮಾಡೆಲ್ (ಆರಂಭಿಕ ಮಾದರಿ) ಆಗಿರುವ 'ಇ' ರೂ.8.28 ಲಕ್ಷ, 'ಎಸ್' ರೂ.9.33 ಲಕ್ಷ, 'ಜಿ' 10.55 ಲಕ್ಷ, 'ವಿ' ರೂ.11.73 ಲಕ್ಷ ಹಾಗೂ ಟಾಪ್ ಎಂಡ್ ಮಾಡೆಲ್ (ಗರಿಷ್ಠ ಶ್ರೇಣಿ) 'ವಿ ಎಎಂಟಿ' ರೂ.11.99 ಲಕ್ಷ ಆನ್-ರೋಡ್ ದರವನ್ನು ಹೊಂದಿದೆ.

ಸಿಎನ್‌ಜಿ ಚಾಲಿತ ಬೇಸ್ ಮಾಡೆಲ್ 'ಎಸ್' ರೂ.10.39 ಲಕ್ಷ ಮತ್ತು ಟಾಪ್ ಎಂಡ್ ಮಾಡೆಲ್ 'ಜಿ' ರೂ.11.61 ಲಕ್ಷ ಆನ್-ರೋಡ್ ಬೆಲೆಯನ್ನು ಪಡೆದಿದೆ. ನೀವು ಈ ಕಾರನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ, ಐದು ವರ್ಷದ ಅವಧಿಗೆ ಶೇಕಡ 9.8% ಬಡ್ಡಿದರದಲ್ಲಿ ಮಾಸಿಕ 13,278 ಇಎಂಐ ಕಟ್ಟಬೇಕು.
ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮೇ 1, 2024ಕ್ಕೆ ಅನ್ವಯವಾಗುವಂತೆ ಗ್ಲಾನ್ಜಾ ಹ್ಯಾಚ್‌ಬ್ಯಾಕ್‌ನ ಕಾಯುವಿಕೆ ಅವಧಿಯ ಬಗ್ಗೆಯೂ ಮಾಹಿತಿಯನ್ನು ಪ್ರಕಟಿಸಿದೆ. ಈ ಕಾರು ಆದಷ್ಟು ಬೇಗ ನಿಮ್ಮ ಮನೆಯನ್ನು ಸೇರುತ್ತದೆ. ನೀವು ಇವತ್ತು ಬುಕ್ಕಿಂಗ್ ಮಾಡಿದರೂ ಸುಮಾರು 1 ತಿಂಗಳ ಬಳಿಕ ವಿತರಣೆಯಾಗಿ ಬಿಡುತ್ತದೆ.

ಹೊಚ್ಚ ಹೊಸ ಟೊಯೊಟಾ ಗ್ಲಾನ್ಜಾ ಹ್ಯಾಚ್‌ಬ್ಯಾಕ್ (Toyota Glanza Hatchback) ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು.
ನೂತನ ಗ್ಲಾನ್ಜಾ ಮಾದರಿಯು 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದ್ದು, ರೂಪಾಂತರಗಳಿಗೆ ತಕ್ಕಂತೆ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್‌ನೊಂದಿಗೆ ಲಭ್ಯವಿದೆ. ಪೆಟ್ರೋಲ್ ರೂಪಾಂತರಗಳು 22.35 ರಿಂದ 22.94 ಕೆಎಂಪಿಎಲ್, ಸಿಎನ್‌ಜಿ ಮಾದರಿಗಳು 30.61 ಕಿ.ಮೀ/ಕೆಜಿ ಮೈಲೇಜ್ ಕೊಡುತ್ತವೆ.
ಈ ಟೊಯೊಟಾ ಗ್ಲಾನ್ಜಾ ಹ್ಯಾಚ್‌ಬ್ಯಾಕ್ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಹೆಡ್ಸ್- ಅಪ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ, ಆಟೋ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಟೊಯೊಟಾ ಗ್ಲಾನ್ಜಾ ಕಾರಿಗೆ ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಐ20, ಮತ್ತು ಟಾಟಾ ಆಲ್ಟ್ರೋಜ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನಿಮ್ಮ ಗಮನಕ್ಕೆ.. ಇಲ್ಲಿ ಕೆಲವು ರೂಪಾಂತರ (ವೇರಿಯೆಂಟ್)ಗಳ ಆನ್-ರೋಡ್ ಬೆಲೆಯ ಬಗ್ಗೆ ಮಾತ್ರ ವಿವರಿಸಿದ್ದೇವೆ. ಆದರೆ, ಈ ದರಗಳು ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications