ಟೊಯೊಟಾದ ಕಡಿಮೆ ಬೆಲೆಯ ಈ ಕಾರನ್ನು ಕೆಲವೇ ದಿನಗಳಲ್ಲಿ ಮನೆಗೆ ತರಬಹುದು, 30 ಕಿ.ಮೀ ಮೈಲೇಜ್!

ಭಾರತದ ಮಾರುಕಟ್ಟೆಯಲ್ಲಿ ಟೊಯೊಟಾ (Toyota), ಇನ್ನೋವಾ ಕ್ರಿಸ್ಟಾ, ಹೈಕ್ರಾಸ್ ಸೇರಿದಂತೆ ಹಲವು ಕಾರುಗಳನ್ನು ಮಾರಾಟಗೊಳಿಸುತ್ತಿವೆ. ಇವು ಕೊಂಚ ಅಧಿಕ ದರವನ್ನು ಹೊಂದಿವೆ. ವಿತರಣೆಯಾಗಲು ಒಂದಷ್ಟು ತಿಂಗಳು ಹಿಡಿಯಲಿದ್ದು, ಗ್ರಾಹಕರು ಕಾಯಲೇಬೇಕು. ಆದರೆ ಕೈಗೆಟುಕುವ ಬೆಲೆಗೆ ಸಿಗುವ ಗ್ಲಾನ್ಜಾ (Glanza) ಬೇಗನೇ ಡೆಲೆವರಿಯಾಗುತ್ತದೆ.

ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್‌ ನಲ್ಲಿ 1 ಜನವರಿ 2024ಕ್ಕೆ ಅನ್ವಯವಾಗುವಂತೆ ಗ್ಲಾನ್ಜಾ ಕಾರು ಪಡೆದಿರುವ ಕಾಯುವಿಕೆ ಅವಧಿ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ. ಗ್ಲಾನ್ಜಾದ ಮ್ಯಾನುವಲ್ ಹಾಗೂ ಆಟೋಮೆಟಿಕ್ ರೂಪಾಂತರಗಳನ್ನು ನೀವು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು ಕೇವಲ 1 ತಿಂಗಳು ಕಾಲಾವಕಾಶ ಸಾಕು.

Toyota: ಟೊಯೊಟಾದ ಕಡಿಮೆ ಬೆಲೆಯ ಈ ಕಾರನ್ನು ಕೆಲವೇ ದಿನಗಳಲ್ಲಿ ಮನೆಗೆ ತರಬಹುದು.. 30 ಕಿ.ಮೀ ಮೈಲೇಜ್!

ಸದ್ಯ, ಟೊಯೊಟಾ ಗ್ಲಾನ್ಜಾ (Toyota Glanza), ರೂ.6.81 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇ, ಎಸ್, ಜಿ, ಮತ್ತು ವಿ ರೂಪಾಂತರ, ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ, ಮತ್ತು ಇನ್‌ಸ್ಟಾ ಬ್ಲೂ ಒಳಗೊಂಡಂತೆ 5 ಮೊನೊಟೋನ್ ಬಣ್ಣಗಳೊಂದಿಗೆ ಖರೀದಿದಾರರಿಗೆ ಸಿಗುತ್ತದೆ.

ಟೊಯೊಟಾ ಗ್ಲಾನ್ಜಾ 2 ಪವರ್ ಟ್ರೈನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2 - ಲೀಟರ್ ಡುಯಲ್ಜೆಟ್ ಪೆಟ್ರೋಲ್ ಎಂಜಿನ್ 90 PS, ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. 5 - ಸ್ವೀಡ್ ಮ್ಯಾನುವಲ್ ಅಥವಾ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ.

Toyota: ಟೊಯೊಟಾದ ಕಡಿಮೆ ಬೆಲೆಯ ಈ ಕಾರನ್ನು ಕೆಲವೇ ದಿನಗಳಲ್ಲಿ ಮನೆಗೆ ತರಬಹುದು.. 30 ಕಿ.ಮೀ ಮೈಲೇಜ್!

ಸಿಎನ್‌ಜಿ ಕಾರು ಸಹ ಇದೇ ಎಂಜಿನ್ ಹೊಂದಿದ್ದು, ಆದರೆ, 77.5 PS ಪವರ್ ಮಾತ್ರ ಉತ್ಪಾದಿಸುತ್ತದೆ. ಕೇವಲ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಮೈಲೇಜ್ ವಿಚಾರವಾಗಿ ಮಾತನಾಡುವುದಾದರೆ, ಗ್ಲಾನ್ಜಾ ಪೆಟ್ರೋಲ್ ರೂಪಾಂತರಗಳು 22.35 - 22.94 kmpl, ಸಿಎನ್‌ಜಿ ರೂಪಾಂತರಗಳು 30.61 km/kg ಇಂಧನ ದಕ್ಷತೆಯನ್ನು ಹೊಂದಿವೆ.

ವಿನ್ಯಾಸದ ದೃಷ್ಟಿಯಿಂದಲೂ ಟೊಯೊಟಾ ಗ್ಲಾನ್ಜಾ ಅತ್ಯುತ್ತಮವಾಗಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ 5-ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಈ ಕಾರು, 9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಹೆಡ್ಸ್ - ಅಪ್ ಡಿಸ್ಪ್ಲೇ, 360 - ಡಿಗ್ರಿ ಕ್ಯಾಮೆರಾ, ಹಿಂಭಾಗದ ಎಸಿ ವೆಂಟ್ಸ್, ಆಟೋ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ.

ಸುರಕ್ಷತೆಯ ವಿಚಾರವಾಗಿಯೂ ಟೊಯೊಟಾ ಗ್ಲಾನ್ಜಾ ಕಾರು ಹೆಚ್ಚು ಅತ್ಯಾಧುನಿಕವಾಗಿದೆ. 6 ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಹಿಲ್ - ಹೋಲ್ಡ್ ಅಸಿಸ್ಟ್ ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಇವೆ.

ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ಗ್ಲಾನ್ಜಾಗೆ ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಐ20 ಹಾಗೂ ಟಾಟಾ ಆಲ್ಟ್ರೋಜ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಇನ್ನು, ಟೊಯೊಟಾದ ಬೇರೆಲ್ಲ ಕಾರುಗಳಿಗೆ ಹೋಲಿಸಿದರೆ, ಈ ಕಾರು ಮಾತ್ರವೇ ಕಡಿಮೆ ಕಾಯುವಿಕೆ ಅವಧಿಯನ್ನು ಹೊಂದಿದ್ದು, ಬೆಲೆಯೂ ಕೈಗೆಟುವಂತೆ ಇರುವುದರಿಂದ ಹೆಚ್ಚಿನ ಜನರ ಆಯ್ಕೆಯ ವಾಹನವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 8, 2024, 11:28 [IST]
English summary
Toyota glanza january 2024 waiting period revealed low price 30 km mileage
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+