Toyota: ಗ್ಲಾನ್ಜಾ ಕಾರನ್ನು ಬೇಗನೆ ಮನೆ ಮುಂದೆ ತಂದು ನಿಲ್ಲಿಸಬಹುದು.. 6 ಲಕ್ಷ ಬೆಲೆ, ಬೈಕ್‌ನಂತೆ ಮೈಲೇಜ್!
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM), ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿದೆ. ಇನ್ನೋವಾ, ರೂಮಿಯನ್, ಅರ್ಬನ್ ಕ್ರೂಸರ್ ಹೈರೈಡರ್, ಫಾರ್ಚುನರ್ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತದೆ. ಸದ್ಯ, ಕಂಪನಿಯ ಪ್ರೀಮಿಯಂ ಗ್ಲಾನ್ಜಾ ಹ್ಯಾಚ್‌ಬ್ಯಾಕ್‌ಗೆ ಈ ತಿಂಗಳು ಸಹ ಉತ್ತಮ ಬೇಡಿಕೆ ಮುಂದುವರಿದಿದೆ.
ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರ್ಚ್ 1, 2024ಕ್ಕೆ ಅನ್ವಯವಾಗುವಂತೆ ಗ್ಲಾನ್ಜಾ (Glanza) ಕಾರು ಹೊಂದಿರುವ ಕಾಯುವಿಕೆ ಅವಧಿ (Waiting Period) ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ. ಟೊಯೊಟಾದ ಬೇರೆಲ್ಲ ಮಾದರಿಗಳಿಗೆ ಹೋಲಿಕೆ ಮಾಡಿದರೆ ಗ್ಲಾನ್ಜಾ ಹ್ಯಾಚ್‌ಬ್ಯಾಕ್‌ನ್ನು ಆದಷ್ಟು ಬೇಗ ನಿಮ್ಮ ಮನೆಗೆ ತರಬಹುದು.

ಟೊಯೊಟಾ ಗ್ಲಾನ್ಜಾ (Toyota Glanza) ಕಾರಿನ ಮ್ಯಾನುವಲ್ (Manual) ಮತ್ತು ಆಟೋಮೆಟಿಕ್ (Automatic) ರೂಪಾಂತರಗಳನ್ನು ನೀವು ಇವತ್ತು ಬುಕ್ಕಿಂಗ್ ಮಾಡಿದರೂ ಸುಮಾರು 1 ತಿಂಗಳ ನಂತರ ವಿತರಣೆಯಾಗುತ್ತವೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಗ್ಲಾನ್ಜಾ ಹ್ಯಾಚ್‌ಬ್ಯಾಕ್ ರೂ.6.81 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ.
ನೂತನ ಟೊಯೊಟಾ ಗ್ಲಾನ್ಜಾ ಇ, ಎಸ್, ಜಿ, ವಿ ರೂಪಾಂತರ ಹಾಗೂ ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ. ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಐ20, ಮತ್ತು ಟಾಟಾ ಆಲ್ಟ್ರೋಜ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಗ್ಲಾನ್ಜಾ ಕಾರು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. 5 ಮಂದಿ ಪ್ರಯಾಣಿಸಬಹುದು.

ಈ ಟೊಯೊಟಾ ಗ್ಲಾನ್ಜಾ ಕಾರು, 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದ್ದು, ರೂಪಾಂತರಗಳ ಅನ್ವಯ 5-ಸ್ವೀಡ್ ಮ್ಯಾನುವಲ್ ಹಾಗೂ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ. ಇಂಧನ ದಕ್ಷತೆ ವಿಚಾರವಾಗಿ ಹೇಳುವುದಾದರೆ, ಪೆಟ್ರೋಲ್ ರೂಪಾಂತರಗಳು 22.35 - 22.94 ಕೆಎಂಪಿಎಲ್, ಸಿಎನ್‌ಜಿ ಮಾದರಿ 30.61 ಕಿ.ಮೀ/ಕೆಜಿ ಮೈಲೇಜ್ ಕೊಡುತ್ತದೆ.
ಹೊಸ ಟೊಯೊಟಾ ಗ್ಲಾನ್ಜಾ (Toyota Glanza) ಕಾರು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಹೆಡ್ಸ್- ಅಪ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ, ರೇರ್ ಎಸಿ ವೆಂಟ್ಸ್, ಆಟೋ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್ ಒಳಗೊಂಡಿದೆ.

ಗ್ಲಾನ್ಜಾ ಹ್ಯಾಚ್‌ಬ್ಯಾಕ್ ಆಗಿದ್ದರೂ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. 6 ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಪಡೆದಿದೆ. ನೀವು ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯವನ್ನು ಪಡೆದಿರುವ ಕಾರನ್ನು ಹುಡುಕುತ್ತಿದ್ದರೆ ಟೊಯೊಟಾ ಗ್ಲಾನ್ಜಾ ಉತ್ತಮ ಆಯ್ಕೆಯಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications