Toyota: 7 ಲಕ್ಷದ ಟೊಯೋಟಾ ಪ್ರೀಮಿಯಂ ಕಾರಿನಲ್ಲಿ ಬೆಸ್ಟ್ ಫೀಚರ್ಸ್... 30 ಕಿ.ಮೀ ಮೈಲೇಜ್!
ಭಾರತದಲ್ಲಿ ಅಗ್ಗದ ಬೆಲೆಗೆ ಅತ್ಯುತ್ತಮ ಕಾರುಗಳನ್ನು ನೀಡುವ ಟಾಟಾ, ಮಾರುತಿ, ಮಹೀಂದ್ರಾ ಕಂಪನಿಗಳಿಗೆ ಪೈಪೋಟಿ ನಿಡುವಂತೆ ಟೊಯೋಟಾ ಬ್ರಾಂಡ್ ಕೂಡ ಉತ್ತಮ ಹ್ಯಾಚ್‌ಬ್ಯಾಕ್ ಅನ್ನು ನೀಡುತ್ತಿದೆ. ಅದೇ ಟೊಯೋಟಾದ ಜನಪ್ರಿಯ ಮಾದರಿಯಾದ ಗ್ಲಾಂಜಾ ಹ್ಯಾಚ್‌ಬ್ಯಾಕ್, ಭಾರತದಲ್ಲಿ ಈ ಹ್ಯಾಚ್‌ಬ್ಯಾಕ್ ಕಾರಿಗೆ ಸಖತ್ ಬೇಡಿಕೆ ಇದೆ. ಇದು ಮಾರುತಿ ಬಲೆನೋ ಕಾರಿನ ರೀಬ್ಯಾಡ್ಜ್ ಆವರತ್ತಿಯಾದರೂ, ತನ್ನದೇ ಆದ ಜನಪ್ರಿಯತೆನ್ನು ಪಡೆದುಕೊಂಡಿದೆ. ಈ ಸಣ್ಣ ಪ್ರೀಮಿಯಂ ಕಾರಿನ ಬೆಲೆ, ವೈಶಿಷ್ಟ್ಯಗಳು ಸೇರಿದಂತೆ ಎಂಜಿನ್ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಮೊದಲೇ ಹೇಳಿದಂತೆ ಮಾರುತಿ ಇದೇ ಕಾರನ್ನು ಬಲೆನೋವಾಗಿ ಮಾರಾಟ ಮಾಡುತ್ತಿದೆ. ಮಾರುತಿ ಹಾಗೂ ಟೊಯೋಟಾ ಕಂಪನಿಗಳು ಪಾಲುದಾರಿಯಲ್ಲಿ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಕೆಲ ಕಾರುಗಳನ್ನು ನಿರ್ಮಾಣ ಮಾಡಿ ತಮ್ಮ ಲೋಗೋಗಳನ್ನು ಮಾತ್ರ ಹಾಕಿಕೊಳ್ಳುವ ಬಗ್ಗೆ ಹಲವರಿಗೆ ತಿಳಿದಿರುತ್ತದೆ. ಇದರಲ್ಲಿ ಗ್ಲಾಂಜಾ ಕೂಡ ಒಂದಾಗಿದೆ.

ಟೊಯೋಟಾ ಗ್ಲಾಂಜಾ ಫೀಚರ್ಸ್ ಅನ್ನು ಮೊದಲಿಗೆ ನೋಡುವುದಾದ್ರೆ 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಹೆಡ್ಸ್-ಅಪ್ ಡಿಸ್ ಪ್ಲೇ, 360 ಡಿಗ್ರಿ ಕ್ಯಾಮೆರಾ ಮತ್ತು ಕ್ರೂಸ್ ಕಂಟ್ರೋಲ್, ಹಿಂಭಾಗದ ಎಸಿ ವೆಂಟ್, ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿದೆ. ಭಾರತದಲ್ಲಿ ಟೊಯೊಟಾ ಗ್ಲಾಂಝಾ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.6.86 ಲಕ್ಷದಿಂದ ಪ್ರಾರಂಭವಾಗಿ ರೂ.10 ಲಕ್ಷಗಳವರೆಗೆ ಹೋಗುತ್ತದೆ.
ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್ ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿಎಸ್‌ಸಿ), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿವೆ. ಟೊಯೊಟಾ ಗ್ಲಾಂಝಾದ ಪ್ರತಿಸ್ಪರ್ಧಿಗಳಾದ ಮಾರುತಿ ಬಲೆನೊ, ಹ್ಯುಂಡೈ ಐ 20 ಮತ್ತು ಟಾಟಾ ಆಲ್ಟ್ರೊಜ್ ಕಾರುಗಳಿಗಿಂತ ಉತ್ತಮ ಪ್ರಯಾಣಿಕ ಅನುಭವ ನೀಡುವುದಾಗಿ ಹಲವರು ಗ್ರಾಹಕರು ಹೇಳಿದ್ದಾರೆ.

ಗ್ರಾಹಕರು ಈ ಕಾರುನ್ನು ಸ್ಪೋರ್ಟಿನ್ ರೆಡ್, ಇನ್ಸ್ಟಾ ಬ್ಲೂ, ಕೆಫೆ ವೈಟ್, ಸಿಲ್ವರ್, ಗೇಮಿಂಗ್ ಗ್ರೇ ಎಂಬ ಐದು ಮೊನೊಟೋನ್ ಬಣ್ಣಗಳಲ್ಲಿ ಖರೀದಿಸಬಹುದು. ಟೊಯೋಟಾ ಗ್ಲಾಂಝಾ ವೇರಿಯೆಂಟ್‌ಗಳ ವಿಷಯಕ್ಕೆ ಬಂದರೆ, ಇದು ಇ, ಎಸ್, ಜಿ ಮತ್ತು ವಿ ಎಂಬ ನಾಲ್ಕು ವಿಶಾಲ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ.
ಇದು 5 ಸೀಟರ್ ಕಾನ್ಫಿಗರೇಶನ್‌ನಲ್ಲಿ ಲಭ್ಯವಿರುವ ಹ್ಯಾಚ್‌ಬ್ಯಾಕ್ ಆಗಿದ್ದರೂ ಐದು ಮಂದಿ ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಗ್ಲಾಂಝಾ ಹ್ಯಾಚ್‌ಬ್ಯಾಕ್ ಅನ್ನು ಸಿಎನ್‌ಜಿ ಆಯ್ಕೆಯಲ್ಲೂ ನೀಡಲಾಗುತ್ತಿದ್ದು, ಪ್ರತಿ ಕೆ.ಜಿ ಸಿಎನ್‌ಜಿಗೆ ಬರೋಬ್ಬರಿ 30.61 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದು 77.5 ಪಿಎಸ್ ಪವರ್ ಹಾಗೂ 98.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.

ಗ್ಲಾಂಝಾ ಹ್ಯಾಚ್‌ಬ್ಯಾಕ್‌ನ 1.2-ಲೀಟರ್ ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ಅಥವಾ 5 - ಸ್ಪೀಡ್ ಎಎಂಟಿ (ಆಟೋಮ್ಯಾಟೆಡ್ ಮ್ಯಾನುವಲ್ ಟ್ರಾನ್ಸ್ಮಿಷನ್) ನೊಂದಿಗೆ ನೀಡಲಾಗುತ್ತದೆ. 90 ಪಿಎಸ್ ಪವರ್ ಹಾಗೂ 113 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಪ್ರತಿ ಲೀಟರ್‌ಗೆ 22.35 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








