Toyota Hilux: ಟೊಯೋಟಾದ ಈ ಕಾರು ALL IN ONE... ಇದರಲ್ಲಿ ಏನು ಬೇಕಾದರೂ ಮಾಡಬಹುದು!
ಟೊಯೋಟಾ ಕಂಪನಿಯ ಕಾರುಗಳು ಬೆಲೆಯಲ್ಲಿ ಕೊಂಚ ಹೆಚ್ಚಾದರೂ ಅದರ ಗುಣಮಟ್ಟದಲ್ಲಿ ಯಾವುದೇ ರಾಜಿ ಇರುವುದಿಲ್ಲ. ಇದನ್ನು ನಾವು ಹೇಳುವುದಕ್ಕಿಂತ ಟೊಯೋಟಾ ಕಂಪನಿಯ ವಾಹನಗಳನ್ನು ಹೊಂದಿರುವ ಗ್ರಾಹಕರನ್ನು ಕೇಳಿದರೆ ಸಾಕು ಅವರು ತಮ್ಮ ಅಭಿಪ್ರಾಯವನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಹೇಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ.
ಟೊಯೋಟಾ ಕಂಪನಿಯ ಪ್ರಸಿದ್ದವಾದ ಕಾರು ಮಾದರಿಗಳಲ್ಲಿ ಟೊಯೋಟಾ ಹೈಲಿಕ್ಸ್ ಸಹ ಒಂದು. ಲೈಫ್‌ಸ್ಟೈಲ್ ಪಿಕ್‌ಅಪ್ ವಾಹನವಾಗಿರುವ ಈ ಕಾರು ಗುಡ್ಡಗಾಡುಗಳನ್ನು ಯಾವುದೇ ಅಡೆತಡೆಯಿಲ್ಲದೆ ಹತ್ತುವುದರಲ್ಲಿ ನಿಸ್ಸೀಮವಾದ ವಾಹನ. ಇದರ ಕಟ್ಟುಮಸ್ತಾದ ಬಿಲ್ಡ್ ಕ್ವಾಲಿಟಿ ಮತ್ತು ರಗಡ್ ಡಿಸೈನ್‌ಗೆ ಈ ಕಾರು ತುಂಬಾ ಪ್ರಸಿದ್ದಿ. ರಸ್ತೆಯಲ್ಲಿ ಈ ಕಾರು ಬರುತ್ತಿದ್ದರೆ, ಅದರ ಗತ್ತೇ ಬೇರೆ.

ಈ ಟೊಯೋಟಾ ಹೈಲಿಕ್ಸ್ ಕಾರನ್ನು ಹಲವಾರು ಉಪಯೋಗಗಳಿಗೆ ಬಳಸಬಹುದಾಗಿದೆ. ಹೌದು, ಈ ವಾಹನವನ್ನು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವುದಕ್ಕಾಗಿ ಬಳಸಬಹುದಾಗಿದೆ. ಭಾಗಶಃ ದೊಡ್ಡದಾದ ಈ ಕಾರಿನಲ್ಲಿ ತುರ್ತು ಪರಿಸ್ಥಿತಿಗಳನ್ನು ಸಂಭಾಳಿಸಲು ಬೇಕಾದ ವ್ಯವಸ್ಥೆಗಳನ್ನು ಅಳವಡಿಸಬಹುದಾಗಿದೆ. ಕಂಪನಿ ಇದನ್ನು ಮಾಡಿ ಕೊಡುವುದುದಿಲ್ಲವಾದರೂ ಬೇರೆಯವರಿಂದ ಇದನ್ನು ಬೇಕಾದ ರೀತಿಯಲ್ಲಿ ಮಾಡಿಫೈ ಮಾಡಿಕೊಳ್ಳಬಹುದಾಗಿದೆ.
ಇದರ ಜೊತೆಗೆ ಈ ಟೊಯೋಟಾ ಹೈಲಿಕ್ಸ್ ಕಾರಿಗೆ ನಿಮಗೆ ಬೇಕಾದ ರೀತಿಯಲ್ಲಿ ಮಾಡಿಫಿಕೇಷನ್‌ಗಳನ್ನು ಬಹಳ ಸುಲಭವಾಗಿ ಮಾಡಬಹುದಾಗಿದ್ದು, ಈ ಕಾರಿನ ಸಂಪೂರ್ಣ ಲುಕ್ ಸಹ ಬದಲಾಗುತ್ತದೆ. ಇನ್ನು ಇತ್ತೀಚೆಗಷ್ಟೇ ಟೊಯೋಟಾ ಈ ರೀತಿ ಮಾಡಿಫೈ ಮಾಡಿದ ವಾಹನಗಳನ್ನು ಗ್ರಾಹಕರ ಮುಂದೆ ಪ್ರದರ್ಶಿಸಿತ್ತು. ನ್ಯೂ ಏಜ್ ಫೈರ್ ಫೈಟಿಂಗ್ ಕಂಪನಿಯು ಈ ಮಾದರಿಯ ವಾಹನಗಳನ್ನು ತೋರಿಸಿತ್ತು.

ಇದೇ ಸಂಧರ್ಭದಲ್ಲಿ ಟೊಯೋಟಾ ಕಂಪನಿಯು ವಾಹನಗಳನ್ನು ಸರ್ವೀಸ್ ಮಾಡುವ ಮೊಬೈಲ್ ಸರ್ವೀಸ್ ಸೆಂಟರ್ ಅನ್ನು ಸಹ ನಿರ್ಮಾಣ ಮಾಡಿದ್ದು, ಇದನ್ನು ಆಯಿಲ್ ಲ್ಯೂಬ್ ಸಿಸ್ಟಂ ಪ್ರೈವೇಟ್ ಲಿಮಿಟಡ್ ಜೊತೆ ಪಾರ್ಟ್ನರ್‌ಶಿಪ್ ಮಾಡಿ ಸಿದ್ದಗೊಳಿಸಿತ್ತು. ಕಾರಿನ ಹಿಂಭಾಗದಲ್ಲಿ ಕಾರ್ಗೋ ಬೆಡ್‌ಗಳನ್ನು ಸಹ ಸಿದ್ದಗೊಳಿಸಿದ್ದು ಇದರಲ್ಲಿ ತಮಗೆ ಬೇಕಾದ ವಸ್ತುಗಳನ್ನು ಇಟ್ಟುಕೊಳ್ಳಬಹುದಾಗಿದೆ.
ಇನ್ನು ಟೊಯೊಟಾ ಹೈಲಿಕ್ಸ್ ಕಾರಿನ ಬಗ್ಗೆ ನೊಡುವುದಾದರೆ, ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟೊಯೊಟಾ ಹಿಲಕ್ಸ್ (Toyota Hilux) ಪಿಕ್-ಅಪ್ ಟ್ರಕ್, ರೂ.30.40 ಲಕ್ಷದಿಂದ ರೂ.37.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಡ್ (Standard) ಹಾಗೂ ಹೈ (High) ಎಂಬ 2 ರೂಪಾಂತರ, ಎಮೋಷನಲ್ ರೆಡ್, ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸೂಪರ್ ವೈಟ್ ಒಳಗೊಂಡಂತೆ 5 - ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.
ಟೊಯೊಟಾ ಹಿಲಕ್ಸ್, 2.8 - ಲೀಟರ್ ಟರ್ಬೊ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 6 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಮಾದರಿ 204 PS ಗರಿಷ್ಠ ಪವರ್, 420 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿರುವ ಮಾದರಿಯು 204 PS ಪವರ್, 500 Nm ಪೀಕ್ ಟಾರ್ಕ್ ಹೊರಹಾಕುತ್ತದೆ.
ಟೊಯೊಟಾ ಹಿಲಕ್ಸ್, ಫಾರ್ಚುನರ್ ಎಸ್‌ಯುವಿ ರೀತಿಯಲ್ಲಿಯೇ ವೈಶಿಷ್ಟ್ಯ (Features)ಗಳನ್ನು ಪಡೆದಿದೆ. 8 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪುಶ್ - ಬಟನ್ ಸ್ಟಾರ್ಟ್/ ಸ್ಟಾಪ್, ಡುಯಲ್ - ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








