ಎಲೆಕ್ಟ್ರಿಕ್ ರೂಪದಲ್ಲಿ ಬರಲಿದೆ TOYOTA HILUX: ಫಾರ್ಚ್ಯೂನರ್ ಸಹ ಎಲೆಕ್ಟ್ರಿಕ್ ಆದರೆ ಕಥೆಯೇನು?
ಟೊಯೋಟಾ ಕಾರುಗಳೆಂದರೆ ಭಾರತ ಸೇರಿದಂತೆ ವಿಶ್ವದ ಎಲ್ಲೆಡೆ ಒಂದು ರೀತಿಯ ಪ್ರೀತಿ. ಸಾಧಾರಣವಾಗಿ ಟೊಯೋಟಾ ಕಾರುಗಳೆಂದರೆ ಕೊಂಚ ದುಬಾರಿಯೇ ಸರಿ. ಆದರೂ ಸಹ ಕಡುವ ದುಡ್ಡಿಗೆ ಈ ಕಾರುಗಳು ನೀಡುವ ಪರ್ಫಾಮೆನ್ಸ್ ಮತ್ತು ಬಾಳಿಕೆ ಎನ್ನುವುದು ಅದ್ಭುತವೇ ಸರಿ. ಇಂತಹ ಕಾರುಗಳಲ್ಲಿ ಹೈಲಿಕ್ಸ್ ಸಹ ಒಂದು.
ಮಾಹಿತಿಗಳ ಪ್ರಕಾರ ಟೊಯೋಟಾ ಕಂಪನಿಯು ಅತಿ ಶೀಘ್ರದಲ್ಲಿಯೇ ಹೈಲಿಕ್ಸ್ ಕಾರು ಮಾದರಿಯನ್ನು ಎಲೆಕ್ಟ್ರಿಕ್ ರೂಪದಲ್ಲಿಯೂ ಹೆದ್ದಾರಿಗೆ ಇಳಿಸಲಿದೆ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಈ ಟೊಯೋಟಾ ಹೈಲಿಕ್ಸ್ ಎಲೆಕ್ಟ್ರಿಕ್ ಅನ್ನು ಥಾಯ್‌ಲ್ಯಾಂಡ್ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಗೊಳಿಸಲಿದ್ದು ಆ ನಂತರದಲ್ಲಿ ನಿಧಾನವಾಗಿ ವಿಶ್ವದ ಇತರೆಡೆ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ. ಫಾರ್ಚ್ಯೂನರ್ ಅನ್ನು ಸಹ ಕಂಪನಿ ಎಲೆಕ್ಟ್ರೀಕರಣ ಗೊಳಿಸುವ ಯೋಜನೆಯಿದೆ.

2025 ರಲ್ಲಿ ಹೈಲಿಕ್ಸ್ ಎಲೆಕ್ಟ್ರಿಕ್ (Toyota Hilux Electric) ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಮೂಲಗಳು ತಿಳಿಸಿದ್ದು, ಇದಕ್ಕೆ ಸಾಕಷ್ಟು ಸ್ಪಂದನೆಯೂ ದೊರೆಯಲಿದೆ. ಥಾಯ್ಲ್ಯಾಂಡ್‌ನಲ್ಲಿ ಪಿಕ್‌ಪಟ್ ಟ್ರಕ್‌ಗೆ ಸಾಕಷ್ಟು ಬೇಡಿಕೆಯಿದ್ದು ಈ ನಿಟ್ಟಿನಲ್ಲಿ ಟೊಯೋಟಾ ಹೊಸ ಪ್ರಯತ್ನವೊಂದನ್ನು ನಡೆಸುತ್ತಿದ್ದು, ಇದು ಯಶಸ್ವಿಯಾಗುವ ಎಲ್ಲಾ ಲಕ್ಷಣಗಳೂ ಇದೆ. ಆ ನಂತರದಲ್ಲಿ ಇಲ್ಲಿಂದ ಬೇರೆಡೆಗೆ ಟೊಯೊಟಾ ಈ ಪಿಕ್‌ಅಪ್ ಟ್ರಕ್ ಅನ್ನು ಎಕ್ಸ್‌ಪೋರ್ಟ್ ಮಾಡುವ ಯೋಜನೆಯಿದೆ.
ಇನ್ನು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೈಲಿಕ್ಸ್ ಬಗ್ಗೆ ನೊಡುವುದಾದರೆ, 2022 ರಲ್ಲಿ ಲಾಂಚ್ ಆದ ಪಿಕ್‌ಟಪ್ ಟ್ರಕ್ ನ ಬೆಲೆ ಎಕ್ಸ್ ಶೋ ರೂಮ್ 33.99 ಲಕ್ಷ. ಇನ್ನು ಇದು ಭಾರತದಲ್ಲಿ ಲಾಂಚ್ ಆದ ಕೆಲವೇ ಸಮಯದಲ್ಲಿ ಪ್ರಸಿದ್ದಿಯಾಗಿದೆ. ಮತ್ತೆ ಇದರ ಬುಕಿಂಗ್ ಸ್ಟಾರ್ಟ್ ಆಗಿದ್ದು, ಲೈಫ್‌ಸ್ಟೈಲ್ ಪಿಕ್‌ಅಪ್ ಟ್ರಕ್‌ಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಈ ಸಂಧರ್ಭದಲ್ಲಿ ಕಾಣಬಹುದಾಗಿದೆ.

ಟೋಯೋಟಾ ಹೈಲಿಕ್ಸ್ ಪಿಕ್‌ಟಪ್ ಟ್ರಕ್‌ನ ಎಲ್ಲಾ ವೇರಿಯೆಂಟ್‌ಗಳೂ 2.8 ಲೀಟರ್‌ನ ಫೋರ್ ಸಿಲಿಂಡರ್ ಎಂಜಿನ್ ಆಪ್ಷನ್‌ನೊಂದಿಗೆ ಬರುತ್ತಿದ್ದು, ಟೋಯೋಟಾ ಫಾರ್ಚ್ಯೂನರ್‌ನಲ್ಲಿ ಕಾಣಸಿಗುವ ಇಂಜಿನ್ ಅನ್ನೇ ಇಲ್ಲೂ ಬಳಸಲಾಗಿದೆ. ಇದು 6 ಸ್ಪೀಡ್ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಲಭ್ಯವಿದೆ.
ಟೊಯೊಟಾ ಹೈಲಿಕ್ಸ್ ಒಂದು ರೀತಿಯ ಪ್ಲೇನ್ ಕ್ಯಾನ್‌ವಾಸ್ ಇದ್ದಂತೆ. ಕಲಾವಿದನ ಚಿತ್ತಕ್ಕೆ ಅನಿಸಿದ ರೀತಿಯಲ್ಲಿ ಕ್ಯಾನ್‌ವಾಸ್ ಮೇಲೆ ಹೇಗೆ ಚಿತ್ರಗಳನ್ನು ಬಿಡಿಸಬಹುದೋ, ಅದೇ ರೀತಿ ಈ ಟೊಯೋಟಾ ಹೈಲಿಕ್ಸ್ ಲೈಫ್‌ಸ್ಟೈಲ್ ಎಸ್‌ಯುವಿಯ ಮೇಲೂ, ನಿಮಗೆ ಬೇಕಾದ ರೀತಿಯಲ್ಲಿ ಮಾಡಿಫಿಕೇಶನ್‌ಗಳನ್ನು ಮಾಡಿಕೊಂಡು ಇದನ್ನು ಅಂದಗಾಣಿಸಬಹುದಾಗಿದೆ.
ಟೊಯೊಟಾ ಹೈಲಿಕ್ಸ್, ಫಾರ್ಚುನರ್ ಎಸ್‌ಯುವಿ ರೀತಿಯಲ್ಲಿಯೇ ವೈಶಿಷ್ಟ್ಯ (Features)ಗಳನ್ನು ಪಡೆದಿದೆ. 8 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪುಶ್ - ಬಟನ್ ಸ್ಟಾರ್ಟ್/ ಸ್ಟಾಪ್, ಡುಯಲ್ - ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications