ಯುದ್ದಕ್ಕೆ ಹೊರಟ ಸೈನಿಕನಂತೆ ಸಿದ್ಧವಾದ ಹೈಲಿಕ್ಸ್: ಅಂತಹದ್ದೇನಿದೆ ಈ ಟೊಯೊಟಾ ಕಾರಿನಲ್ಲಿ!
ಟೊಯೊಟಾ ಕಂಪನಿಯ ಲೈಫ್‌ಸ್ಟೈಲ್ ಪಿಕ್‌ಟಪ್ ಟ್ರಕ್ ಹೈಲಿಕ್ಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನದೇ ಆದ ಅಗ್ರೆಸಿವ್ ಸ್ಟೈಲಿಂಗ್ ಮತ್ತು ಅದ್ಭುತ ಪರ್ಫಾಮೆನ್ಸ್ ಮೂಲಕ ಆಪ್‌ರೋಡ್ ಮತ್ತು ಪ್ರವಾಸ ಪ್ರೀಯರ ನೆಚ್ಚಿನ ಟ್ರಕ್ ಆಗಿ ಮಾರ್ಪಾಡಾಗುತ್ತಿದೆ ಈ ನಮ್ಮ ಟೊಯೊಟಾ ಹೈಲಿಕ್ಸ್.
ಟೊಯೊಟಾ ಹೈಲಿಕ್ಸ್ ಒಂದು ರೀತಿಯ ಪ್ಲೇನ್ ಕ್ಯಾನ್‌ವಾಸ್ ಇದ್ದಂತೆ. ಕಲಾವಿದನ ಚಿತ್ತಕ್ಕೆ ಅನಿಸಿದ ರೀತಿಯಲ್ಲಿ ಕ್ಯಾನ್‌ವಾಸ್ ಮೇಲೆ ಹೇಗೆ ಚಿತ್ರಗಳನ್ನು ಬಿಡಿಸಬಹುದೋ, ಅದೇ ರೀತಿ ಈ ಟೊಯೋಟಾ ಹೈಲಿಕ್ಸ್ ಲೈಫ್‌ಸ್ಟೈಲ್ ಎಸ್‌ಯುವಿಯ ಮೇಲೂ, ನಿಮಗೆ ಬೇಕಾದ ರೀತಿಯಲ್ಲಿ ಮಾಡಿಫಿಕೇಶನ್‌ಗಳನ್ನು ಮಾಡಿಕೊಂಡು ಇದನ್ನು ಅಂದಗಾಣಿಸಬಹುದಾಗಿದೆ.

ಇಲ್ಲೊಂದು ಕಡೆ ಈ ರೀತಿ ಮಾರ್ಪಾಡುಗೊಂಡ ಟೊಯೋಟಾ ಹೈಲಿಕ್ಸ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಹೈಲಿಕ್ಸ್ ಕಾರಿನಲ್ಲಿ ೨ ಇಂಚ್ ಲಿಫ್ಟ್ ಕಿಟ್ ಬಳಸಲಾಗಿದ್ದು, ಇದರ ಜೊತೆ ದೊಡ್ಡದಾದ ಲಾಯ್ ವ್ಹೀಲ್‌ಗಳನ್ನು ಸಹ ಸೇರಿಸಲಾಗಿದ್ದು ಇನ್ನಿತರ ಸಾಕಷ್ಟು ಮಾಡಿಫಿಕೇಷನ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ.
ಈ ಕಾರಿಗೆ ಸಂಭಂಧಿಸಿದ ವಿಡಿಯೋ ಅಸಾದ್ 4X4 ಎಂಬ ಯ್ಯೂಟ್ಯೂಬ್ ಚಾನಲ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋ ಕೆಳಗೆ ಭಾರೀ ಸಂಖ್ಯೆಯಲ್ಲಿ ಕಾಮೆಂಟ್‌ಗಳು ಹರಿದಾಡುತ್ತಿದೆ. ಕಾರಿನ ಮುಂಭಾಗದಲ್ಲಿ ಕಂಡು ಬರುವ ಮುಖ್ಯವಾದ ವಿಷಯವೆಂದರೆ ಈ ಕಾರಿನ ಬಂಪರ್. ಈ ಬಂಪರ್ ಅಳವಡಿಸಿದ ಮೇಲಂತೂ ಇದು ಸಾಕಷ್ಟು ಅಗ್ರೆಸಿವ್ ಆಗು ಕಂಡು ಬರುತ್ತಿದೆ.

ಕಾರಿನ ಬಂಪರ್‌ನಲ್ಲಿ ಎಲ್‌ಇಡಿಗಳು ಇರುವುದರಿಂದ ಈ ಕಾರಿನ ಲುಕ್ ಅನ್ನು ಇದು ಮತ್ತಷ್ಟು ಹೆಚ್ಚಿಸುತ್ತಿದೆ. ಕೆಂಪು ಬಣ್ಣದ ಟೊಯೋಟಾ ಲೋಗೋ ಜೊತೆಯಿರುವ ಹನಿಕೋಂಬ್ ಗ್ರಿಲ್ ಈ ಕಾರಿಗೆ ರಗಡ್ ಲುಕ್ ಅನ್ನು ನೀಡುತ್ತಿದೆ. ಮತ್ತೊಂದು ಪ್ರಮುಖವಾದ ಅಂಶವೆಂದರೆ ಈ ಕಾರಿನ ಟೈರ್. ಕಾರಿಗೆ ಬೇರೆ ಟೈರ್‌ಗಳನ್ನು ಅಳವಡಿಸಲಾಗಿದೆ. ಈ ರೀತಿ ಸಾಕಷ್ಟು ಬದಲಾವಣೆಗಳನ್ನು ಈ ಕಾರಿನಲ್ಲಿ ಮಾಡಲಾಗಿದೆ.
ಇನ್ನು ಟೊಯೊಟಾ ಹೈಲಿಕ್ಸ್ (Toyota Hilux) ಕಾರಿನ ಬಗ್ಗೆ ನೊಡುವುದಾದರೆ, ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟೊಯೊಟಾ ಹೈಲಿಕ್ಸ್ (Toyota Hilux) ಪಿಕ್-ಅಪ್ ಟ್ರಕ್, ರೂ.30.40 ಲಕ್ಷದಿಂದ ರೂ.37.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಡ್ (Standard) ಹಾಗೂ ಹೈ (High) ಎಂಬ 2 ರೂಪಾಂತರ, ಎಮೋಷನಲ್ ರೆಡ್, ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸೂಪರ್ ವೈಟ್ ಒಳಗೊಂಡಂತೆ 5 - ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.

ಟೊಯೊಟಾ ಹೈಲಿಕ್ಸ್, 2.8 - ಲೀಟರ್ ಟರ್ಬೊ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 6 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಮಾದರಿ 204 PS ಗರಿಷ್ಠ ಪವರ್, 420 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿರುವ ಮಾದರಿಯು 204 PS ಪವರ್, 500 Nm ಪೀಕ್ ಟಾರ್ಕ್ ಹೊರಹಾಕುತ್ತದೆ.
ಟೊಯೊಟಾ ಹೈಲಿಕ್ಸ್, ಫಾರ್ಚುನರ್ ಎಸ್‌ಯುವಿ ರೀತಿಯಲ್ಲಿಯೇ ವೈಶಿಷ್ಟ್ಯ (Features)ಗಳನ್ನು ಪಡೆದಿದೆ. 8 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪುಶ್ - ಬಟನ್ ಸ್ಟಾರ್ಟ್/ ಸ್ಟಾಪ್, ಡುಯಲ್ - ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications