ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಇನ್ನೋವಾ ಕ್ರಿಸ್ಟಾ ಹೊಸ ರೂಪಾಂತರ ಬಿಡುಗಡೆ: 8 ಜನ ಪ್ರಯಾಣಿಸಬಹುದು

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಜನಪ್ರಿಯ ಇನ್ನೋವಾ ಕ್ರಿಸ್ಟಾ ಕಾರಿನ GX+ ಎಂಬ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಹೊಸ ಟೊಯೊಟಾ ಇನ್ನೋವಾ ಕ್ರಿಸ್ಟಾ GX+ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.39 ಲಕ್ಷವಾಗಿದೆ. ಈ ಹೊಸ ರೂಪಾಂತರವು ಕ್ರಿಸ್ಟಾದ ಪ್ರಸ್ತುತ GX ಮತ್ತು VX ರೂಪಾಂತರಗಳ ನಡುವಿನ ಸ್ಥಾನದಲ್ಲಿ ಇರಿಸಲಾಗಿದೆ.

ಹೊಸದಾಗಿ ಪರಿಚಯಿಸಲಾದ ಟೊಯೊಟಾ ಇನ್ನೋವಾ ಕ್ರಿಸ್ಟಾ GX+ (Toyota Innova Crysta GX+) ರೂಪಾಂತರವು ಡ್ರೈವಿಂಗ್ ಮತ್ತು ಪ್ರಯಾಣಿಕರ ಅನುಭವವನ್ನು ಗಣನೀಯವಾಗಿ ಹೆಚ್ಚಿಸುವ ನವೀಕರಣಗಳ ಸೂಟ್ ಅನ್ನು ಹೊಂದಿದೆ. ಈ ಸೇರ್ಪಡೆಗಳಲ್ಲಿ ಹಿಂಬದಿಯ ಕ್ಯಾಮರಾ, ಡ್ಯಾಶ್ ಕ್ಯಾಮ್, ಆಟೋ-ಫೋಲ್ಡ್ ಮಿರರ್‌ಗಳು, ಡೈಮಂಡ್-ಕಟ್ ಅಲಾಯ್ ವೀಲ್‌ಗಳು, ಮರದ ಪ್ಯಾನಲ್ ಇನ್‌ಸರ್ಟ್‌ಗಳು ಮತ್ತು ಪ್ರೀಮಿಯಂ ಫ್ಯಾಬ್ರಿಕ್ ಸೀಟ್‌ಗಳು ಸೇರಿವೆ.

Toyota Innova Crysta GX

ಟೊಯೊಟಾ GX+ ಮಾದರಿಯಲ್ಲಿ ಒಟ್ಟು 14 ಹೊಸ ವೈಶಿಷ್ಟ್ಯಗಳನ್ನು ಸಂಯೋಜಿಸಿದೆ, ಇದು ಲೋ ರೂಪಾಂತರ ಆದ GX ಮಾದರಿಯಿಂದ ಪ್ರತ್ಯೇಕಿಸುತ್ತದೆ. ಏಳು ಮತ್ತು ಎಂಟು ಸೀಟುಗಳ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದ್ದು, ಇದರ ಬೆಲೆಗಳು ಕ್ರಮವಾಗಿ ಲಕ್ಷ ರೂ.21.39 ಮತ್ತು ರೂ. 21.44 ಲಕ್ಷವಾಗಿದೆ. ಇದು ಲೋ ರೂಪಾಂತರ GX ಮಾದರಿಗಿಂತ ರೂ.1.40 - 1.45 ಲಕ್ಷವರೆಗೆ ದುಬಾರಿಯಾಗಿದೆ.

ಪವರ್‌ಟ್ರೇನ್‌ಗೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಹೊಸ ಮಾದರಿಯಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 147.9 ಬಿಹೆಚ್‍ಪಿ ಪವರ್ ಮತ್ತು 343 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Toyota Innova Crysta GX

ಈ ಇನೋವಾ ಕ್ರಿಸ್ಟಾ ಕಾರು ಇಕೋ ಮತ್ತು ಪವರ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಈ ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ಎಂಪಿವಿಯು ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್, ಅವಂತ್-ಗಾರ್ಡ್ ಕಂಚು, ಸಿಲ್ವರ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಬಹುದು.

ಇನ್ನು ಇನೋವಾ ಕ್ರಿಸ್ಟಾ ಕಾರಿನ VX ರೂಪಾಂತರದಲ್ಲಿ ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್, 6-ಸ್ಪೀಕರ್‌ಗಳು, ಸೀಟ್ ಬ್ಯಾಕ್ ಟೇಬಲ್, ಕ್ರೂಸ್ ಕಂಟ್ರೋಲ್, ಸ್ಪೀಡ್ & ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, 1 USB ಫಾಸ್ಟ್ ಚಾರ್ಜಿಂಗ್ ಪವರ್, MID ಮುಂಭಾಗದ ಕ್ಲಿಯರೆನ್ಸ್ ಸೋನಾರ್, Isofix X2 ಮುಂತಾದ ಫೀಚರ್ಸ್ ಗಳನ್ನು ಒಳಗೊಂಡಿವೆ.

Toyota Innova Crysta GX

ಇದರೊಂದಿಗೆ ಟೆಥರ್ ಆಂಕರ್, ಸೈರನ್‌ನೊಂದಿಗೆ ಆಂಟಿ-ಥೆಫ್ಟ್ ಸಿಸ್ಟಮ್ ಇಮೊಬಿಲೈಸರ್, ಅಲ್ಟ್ರಾಸಾನಿಕ್ ಮತ್ತು ಗ್ಲಾಸ್ ಬ್ರೇಕ್ ಸೆನ್ಸಾರ್, ಡ್ರೈವರ್;ಗೆ ಮಾಹಿತಿ ನೀಡುವ TFT MID ಯುನಿಟ್ ಅನ್ನು ಹೊಂದಿದೆ. ಇದರೊಂದಿಗೆ ಸಿಲ್ವರ್ ಮತ್ತು ವುಡ್ ಫಿನಿಶ್‌ನೊಂದಿಗೆ ಯುರೆಥೇನ್‌ನೊಂದಿಗೆ ಸ್ಟೀರಿಂಗ್, ಆಟೋಮ್ಯಾಟಿಕ್ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಎಲ್ಇಡಿ ಕ್ಲಿಯರೆನ್ಸ್ ಲ್ಯಾಂಪ್ ಮತ್ತು ಬ್ಲ್ಯಾಕ್ ಮತ್ತು ಕ್ರೋಮ್ ಗ್ರಿಲ್ನೊಂದಿಗೆ ಬರುತ್ತದೆ.

ಇನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಇನ್ನೋವಾ ಹೈಕ್ರಾಸ್ ಎಂಪಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ಇದೀಗ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಟೊಯೊಟಾ ಕಂಪನಿಯು ತನ್ನ ಇನ್ನೋವಾ ಹೈಕ್ರಾಸ್ ಎಂಪಿವಿಯ ಸರಣಿಯನ್ನು ವಿಸ್ತರಿಸಿದೆ. ಟೊಯೊಟಾ ಕಂಪನಿಯು ತನ್ನ ಟೊಯೊಟಾ ಇನ್ನೋವಾ ಹೈಕ್ರಾಸ್ GX (O) ರೂಪಾಂತರವನ್ನು ಬಿಡುಗಡೆಗೊಳಿಸಿತು. ಈ ಹೊಸ ರೂಪಾಂತರವು 7 ಮತ್ತು 8-ಆಸನಗಳ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, May 7, 2024, 9:48 [IST]
English summary
Toyota innova crysta gx plus variant launched price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+