ಟೊಯೊಟಾದ ಈ ಕಾರು ಪಡೆಯಲು ಜನವೋ ಜನ: ಬರೋಬ್ಬರಿ 12 ತಿಂಗಳ ವೇಟಿಂಗ್ ಪಿರಿಯಡ್!
ಟೊಯೊಟಾ ಕಂಪನಿಯ ಕಾರುಗಳೆಂದರೆ ಜನರಿಗೆ ಅದೊಂದು ರೀತಿಯ ಪ್ರೀತಿ. ಬಹಳಷ್ಟು ಜನ ತಮ್ಮ ಬಜೆಟ್ ಕೊಂಚ ಹೆಚ್ಚಿದ್ದರೆ ಟೊಯೊಟಾ ಕಾರುಗಳನ್ನು ಹೆಚ್ಚು ಪರಿಗಣಿಸುತ್ತಾರೆ. ಅದಕ್ಕೆ ಪ್ರಮುಖವಾದ ಉದಾಹರಣೆಗಳೆಂದರೆ ಫಾರ್ಚ್ಯೂನರ್, ಇನ್ನೋವಾ ಮತ್ತು ಇನ್ನೋವಾ ಹೈಕ್ರಾಸ್ ಮುಂತಾದವು. ಟೊಯೊಟಾ ಕಾರುಗಳ ಬೆಲೆಯಂತೆಯೇ ಅವುಗಳ ಕಾಯುವಿಕೆಯ ಅವಧಿಯೂ ಹೆಚ್ಚು.
ಟೊಯೋಟಾದ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಟೊಯೋಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಸಹ ಒಂದು. ಬಿಡುಗಡೆಯಾದ ಕೆಲವೇ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಈ ಕಾರಿನ ಬೇಡಿಕೆ ಎಷ್ಟು ಹೆಚ್ಚಾಗಿದೆ ಎಂದರೆ ಈ ಕಾರಿನ ಕಾಯುವಿಕೆಯ ಅವಧಿ/ವೇಟಿಂಗ್ ಪಿರಿಯಡ್ ಸಮಯ ತಿಳಿದರೆ ನೀವು ಒಂದು ಕ್ಷಣ ಅವಕ್ಕಾಗುವುದಂತೂ ಖಂಡಿತ.

ಹೌದು, ಇದೀಗ ನೀವು ಟೊಯೊಟಾ ಹೈಕ್ರಾಸ್ ಕಾರನ್ನು ಕೊಳ್ಳುವವರಾಗಿದ್ದರೆ ನೀವು ಆ ಕಾರನ್ನು ಬುಕ್ ಮಾಡಿ ಅದರ ಡೆಲಿವರಿ ಪಡೆಯಲು ಸುಮಾರು 11 - 12 ತಿಂಗಳ ವರೆಗೆ ಕಾಯಬೇಕಾಗುತ್ತದೆ. ಹೌದು, ಟೊಯೊಟಾ ಹೈಕ್ರಾಸ್‌ನ ಹೈಬ್ರಿಡ್ ವೇರಿಯಂಟ್ ಪಡೆಯಲು ಸುಮಾರು ಒಂದು ವರ್ಷದ ವರೆಗೆ ಕಾಯಬೇಕಾಗಿದ್ದು, ಇದರ ಮತ್ತೊಂದು ರೂಪಾಂತರವಾದ ಪೆಟ್ರೋಲ್ ರೂಪಾಂತರವನ್ನು ಪಡೆಯಲು 5 - 6 ತಿಂಗಳವರೆಗೆ ಕಾಯಬೇಕಾಗುತ್ತದೆ.
ಇನ್ನು ಟೊಯೋಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್, ZX & ZX(O) ವೇರಿಯಂಟ್‌ನ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೈಬ್ರಿಡ್ ವೇರಿಯಂಟ್‌ಗೆ ಹೋಲಿಸಿದರೆ ಹೈಕ್ರಾಸ್‌ನ ಪೆಟ್ರೋಲ್ ರೂಪಾಂತರ ಬಹು ಬೇಗ ಡೆಲಿವರಿ ಸಿಗುತ್ತದೆ. ಆದರೆ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ರೂಪಾಂತರವೇ ಬೇಕೆಂದರೆ ನೀವು 11 ರಿಂದ 12 ತಿಂಗಳವರೆಗೆ ಕಾಯಲೇ ಬೇಕು.

ಇನ್ನೋವಾ ಹೈಕ್ರಾಸ್ ಬಗ್ಗೆ ನೊಡುವುದಾದರೆ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಎಂಪಿವಿ, ರೂ.19.77 ಲಕ್ಷದಿಂದ ರೂ.30.68 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಜಿ, ಜಿಎಕ್ಸ್, ವಿಕ್ಸ್ ಸೇರಿದಂತೆ 5 ರೂಪಾಂತರ ಮತ್ತು ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್ ಒಳಗೊಂಡಂತೆ ಹಲವು ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ.
ವಿನ್ಯಾಸದ ದೃಷ್ಟಿಯಿಂದಲೂ ಇನ್ನೋವಾ ಹೈಕ್ರಾಸ್ ಕಾರು ಅತ್ಯಾಧುನಿಕವಾಗಿದ್ದು, 7, 8 ಆಸನ ಆಯ್ಕೆಯಲ್ಲಿ ದೊರೆಯುತ್ತದೆ. ಇದು 2-ಲೀಟರ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್), 2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, ಸಿವಿಟಿ ಮತ್ತು ಇ-ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 16.13 ರಿಂದ 23.24 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ಟೊಯೊಟಾ ಇನ್ನೋವಾ ಹೈಕ್ರಾಸ್‌ನೊಂದಿಗೆ ಲಭ್ಯವಿರುವ ಇನ್ನೋವಾ ಕ್ರಿಸ್ಟಾ (Innova Crysta) ಎಂಪಿವಿ, ರೂ.19.99 ಲಕ್ಷದಿಂದ ರೂ.26.30 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಕೇವಲ 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 150 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 343 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications