ಟೊಯೊಟಾ ಕಾರುಗಳಿಗೆ ಭಾರೀ ಬೇಡಿಕೆ: ದಾಖಲೆ ಮಟ್ಟದಲ್ಲಿ ಕಾರು ಮಾರಾಟ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) 2023ರ ಅಂತ್ಯದಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಜಪಾನಿನ ವಾಹನ ತಯಾರಕರು 2023 2023 ರಲ್ಲಿ 2.33 ಲಕ್ಷ ಯುನಿಟ್‌ಗಳಿಗಿಂತ ಹೆಚ್ಚಿನ ವಾರ್ಷಿಕ ಮಾರಾಟವನ್ನು ಮಾಡಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ 46 ಶೇಕಡಾ ಬೆಳವಣಿಗೆಯಾಗಿದೆ.

ಕಳೆದ ತಿಂಗಳು, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು 21,372 ಯುನಿಟ್ ಮಾರಾಟವನ್ನು ಮಾಡಿದ್ದಾರೆ. 2023ರ ನವೆಂಬರ್ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 17,818 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದಂತೆ ಇದು ಮಾರಾಟದ ಸಂಖ್ಯೆಯಲ್ಲಿ ಗಮನಾರ್ಹವಾದ ಬೆಳೆವಣಿಗೆಯನ್ನು ಸಾಧಿಸಿದೆ. ಟೊಯೊಟಾ ಕಂಪನಿಯ ರಫ್ತಿನ ಬಗ್ಗೆ ಹೇಳುವುದಾದರೆ, ವಾಹನ ತಯಾರಕರು ಪ್ರಸ್ತುತ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ-ಆಧಾರಿತ ಎಸ್‌ಯುವಿ, ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಫ್ತು ಮಾಡುತ್ತಿದ್ದಾರೆ.

Toyota Kirloskar Motor Car Sales

ಟೊಯೊಟಾ ಕಿರ್ಲೋಸ್ಕರ್ ಮೋಟರ್‌ನ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಅತುಲ್ ಸೂದ್ ಮಾತನಾಡಿ, 2023ರ ವರ್ಷ ಟೊಯೊಟಾಗೆ ಅದ್ಭುತವಾಗಿದೆ, ಮಾರಾಟದ ಪರಿಮಾಣದ ದೃಷ್ಟಿಯಿಂದ ಮತ್ತು ಹಲವಾರು ಗ್ರಾಹಕ ಸ್ನೇಹಿ ಉಪಕ್ರಮಗಳನ್ನು ಹೊರತರುತ್ತಿದೆ. ಗ್ರಾಹಕರ ಮಾಲೀಕತ್ವದ ಅನುಭವವನ್ನು ಹೆಚ್ಚಿಸುವ ಮೂಲಕ ಎಲ್ಲರಿಗೂ ಸಂತೋಷವನ್ನು ಒದಗಿಸಲು 5 ವರ್ಷಗಳವರೆಗೆ ರೋಡ್ ಸೈಡ್ ಅಸಿಸ್ಟ್ ಸೇವಾ ಕಾರ್ಯಕ್ರಮ ಇರಲಿದೆ.

ಮಾತನ್ನು ಮುಂದುವರೆಸಿ, ನಮ್ಮ ವಾಹನಗಳ ಮೇಲೆ ತಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ತೋರಿಸಿದ್ದಕ್ಕಾಗಿ ನಾವು ನಮ್ಮ ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇವೆ ಎಂದರು.ಕಳೆದ CY ಗೆ ಹೋಲಿಸಿದರೆ ಶೇಕಡಾ 46 ರಷ್ಟು ಬೆಳವಣಿಗೆಯು ಉತ್ಪನ್ನ ಪೋರ್ಟ್ಫೋಲಿಯೊದಾದ್ಯಂತ ಬಂದಿದೆ. ಸ್ಥಿರವಾದ ತಿಂಗಳ-ತಿಂಗಳ ಕಾರ್ಯಕ್ಷಮತೆ, ವರ್ಷಪೂರ್ತಿ ಉತ್ತಮ ಕಾರು ಮಾರಾಟದೊಂದಿಗೆ ಲೈನ್-ಅಪ್ ಕಾರುಗಳಲ್ಲಿ ಹೆಚ್ಚುತ್ತಿರುವ ಗ್ರಾಹಕರ ಆಸಕ್ತಿಯನ್ನು ಸೂಚಿಸುತ್ತದೆ.

Toyota Kirloskar Motor Car Sales

Innova Hycross, Urban Cruiser Hyryder, New Innova Crysta ಮತ್ತು Glanza ಸೇರಿದಂತೆ ಜನಪ್ರಿಯ ಮಾದರಿಗಳು ನಮ್ಮ ಬೆಳವಣಿಗೆಯನ್ನು ಚಾಲನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮ್ಮ ಗ್ರಾಹಕರ ಸಂಪರ್ಕದ ಈವೆಂಟ್‌ಗಳಾದ "ಟೊಯೊಟಾದ ಗ್ರೇಟ್ 4X4 ಎಕ್ಸ್‌ಪೆಡಿಶನ್" ಸಹ SUV ಮಾದರಿಗಳಾದ Hilux, Fortuner ಮತ್ತು Legender ಗಳ ನಿರಂತರ ಆಕರ್ಷಣೆಯನ್ನು ಹೆಚ್ಚಿಸಿದೆ.

ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಸದ್ಯ ದೇಶಿಯ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಪಾರುಪತ್ಯ ಸಾಧಿಸುತ್ತಿದೆ. ಇದೀಗ ಟೊಯೊಟಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಟೊಯೊಟಾ ಅರ್ಬನ್ (Toyota Urban) ಎಸ್‌ಯುವಿ ಕಾನ್ಸೆಪ್ಟ್ ಎಂಬ ಹೆಸರನ್ನು ನೀಡಲಾಗಿದೆ. ಹೊಸ ಟೊಯೊಟಾ ಎಲೆಕ್ಟ್ರಿಕ್ ಎಸ್‍ಯುವಿಯು ಮಾರುತಿ ಸುಜುಕಿ ಇವಿಎಕ್ಸ್ ಇವಿಯನ್ನು ಆಧಾರವಾಗಿರುವ -ಹೊಸ ಬಾರ್ನ್-ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಟೊಯೊಟಾ ಅರ್ಬನ್ ಎಸ್‌ಯುವಿ ಕಾನ್ಸೆಪ್ಟ್ ಆಧಾರಿತ ಎಸ್‌ಯುವಿ ಮಾರುತಿ ಇವಿಎಕ್ಸ್‌ನೊಂದಿಗೆ ಸಾಕಷ್ಟು ಯುನಿಟ್ ಗಳು ಹಂಚಿಕೊಳ್ಳುತ್ತದೆ ಮತ್ತು ಈ ಪ್ರಕ್ರಿಯೆಯು ಸ್ಪರ್ಧಾತ್ಮಕ ಬೆಲೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಎರಡೂ ಮಾದರಿಗಳು ಪ್ಲಾಟ್‌ಫಾರ್ಮ್, ಪವರ್‌ಟ್ರೇನ್ ಸೆಟಪ್ ಮತ್ತು ಬಾಡಿ ಪ್ಯಾನೆಲ್‌ಗಳ ಜೊತೆಗೆ ಆಂತರಿಕ ವಿನ್ಯಾಸವನ್ನು ಹಂಚಿಕೊಳ್ಳುತ್ತವೆ. ಹೊಸ ಟೊಯೊಟಾ ಎಲೆಕ್ಟ್ರಿಕ್ ಕಾರು ಒಟ್ಟಾರೆ ಪ್ರೊಫೈಲ್ eVX ಕಾನ್ಸೆಪ್ಟ್ ಮಾದರಿಗೆ ಹೋಲುತ್ತದೆ.

ಟೊಯೊಟಾದ ಮುಂಭಾಗದಲ್ಲಿ ಟೊಯೊಟಾದ ಸಿಗ್ನೇಚರ್ ಸ್ಟೈಲಿಂಗ್‌ನೊಂದಿಗೆ ಬರುತ್ತದೆ. ಟೊಯೊಟಾ ಅರ್ಬನ್ ಎಸ್‌ಯುವಿ ಕಾನ್ಸೆಪ್ಟ್ ಫ್ರಂಟ್ ಫ್ಯಾಸಿಕಾವು ಸಿ-ಆಕಾರದ ಹೆಡ್‌ಲ್ಯಾಂಪ್‌ಗಳು, ಕ್ಲೋಸ್-ಆಫ್ ಫ್ರಂಟ್ ಗ್ರಿಲ್ ಮತ್ತು ಕ್ಲೀನರ್ ಬಂಪರ್‌ನೊಂದಿಗೆ ಬರುತ್ತದೆ. ಈ ಟೊಯೊಟಾ ಅರ್ಬನ್ ಎಲೆಕ್ಟ್ರಿಕ್ ಎಸ್‍ಯುವಿಯು ವ್ಹೀಲ್ ಅರ್ಚರ್ ಗಳನ್ನು ಹೊಂದಿದೆ ಮತ್ತು ಅದರ ಸುತ್ತಲೂ ಕ್ಲಾಡಿಂಗ್ ಅನ್ನು ಹೊಂದಿದೆ.

ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ ಡೋರ್ ಹ್ಯಾಂಡಲ್ ಗಳನ್ನು C-ಪಿಲ್ಲರ್‌ನಲ್ಲಿ ಸಂಯೋಜಿಸಲಾಗಿದೆ. ಹಿಂಭಾಗದಲ್ಲಿ, ಮಾರುತಿ eVX ಮಾದರಿಗೆ ಹೋಲಿಸಿದರೆ ಟೊಯೊಟಾ ಎಲೆಕ್ಟ್ರಿಕ್ ಎಸ್‍ಯುವಿಯು ಪರಿಷ್ಕೃತ ಹಿಂಭಾಗದ ಬಂಪರ್ ಮತ್ತು ಟೈಲ್‌ಗೇಟ್ ಅನ್ನು ಪಡೆಯುತ್ತದೆ. ಈ ಹೊಸ ಪ್ಲಾಟ್‌ಫಾರ್ಮ್ ಸುಜುಕಿ ಮತ್ತು ಟೊಯೊಟಾ ಎಲೆಕ್ಟ್ರಿಕ್ ವಾಹನಗಳನ್ನು ಸಹ ಬೆಂಬಲಿಸುತ್ತದೆ. ಆಂತರಿಕವಾಗಿ 27PL ಎಂದು ಕರೆಯಲ್ಪಡುವ ಹೊಸ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಅನ್ನು ಟೊಯೋಟಾದ 40PL ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್‌ನಿಂದ ಪಡೆಯಲಾಗಿದೆ.

Article Published On: Monday, January 1, 2024, 16:48 [IST]
English summary
Toyota kirloskar motor car sales in december 2023 details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+