ಹೈಕ್ರಾಸ್‌ನಂತಹ ಟೊಯೊಟಾದ ಮತ್ತೊಂದು ಹೈಬ್ರಿಡ್ ವಾಹನ ಸೆರೆ: ವಿದೇಶದಲ್ಲಿ ಸಖತ್‌ ಫೇಮಸ್‌ ಈ ಕಾರು!

ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಕಾರು ನಿರ್ಮಾಣ ಕಂಪನಿಗಳಲ್ಲಿ ಟೊಯೊಟಾ ಸಹ ಒಂದು. ಈಗಾಗಲೇ ಭಾರತದಲ್ಲಿ ಟೊಯೊಟಾದ ಹಲವು ಮಾದರಿಗಳಿದ್ದು, ಇತ್ತೀಚೆಗೆ ಟೊಯೊಟಾ ಭಾರತೀಯ ರಸ್ತೆಯಲ್ಲಿ ಮತ್ತೊಂದು ಹೈಬ್ರಿಡ್‌ ಎಸ್‌ಯುವಿಯ ಟೆಸ್ಟ್‌ ನಡೆಸುತ್ತಿದ್ದು, ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಇಂದಿನ ಈ ಲೇಖನದಲ್ಲಿ ಆ ಕುರಿತಾಗಿ ನೋಡೋಣ.

ಈ ಹಿಂದೆ ಬಲ್ಲ ಮೂಲಗಳಿಂದ ತಿಳಿದು ಬಂದ ಮಾಹಿತಿಗಳಂತೆ ಟೊಯೊಟಾ ಭಾರತದಲ್ಲಿ ಅತಿ ಶೀಘ್ರದಲ್ಲೇ RAV4 ಎಂಬ ಹೈಬ್ರಿಡ್‌ ಎಸ್‌ಯುವಿಯನ್ನು ಲಾಂಚ್ ಮಾಡಲಿದೆ. ಈ ಹಿನ್ನಲೆಯಲ್ಲಿ ಕಂಪನಿಯು ಭಾರತೀಯ ಹೆದ್ದಾರಿಯಲ್ಲಿ ಈ ಹೊಸ RAV4 ವಾಹನವನ್ನು ಪರೀಕ್ಷಿಸುತ್ತಿದ್ದು, ಇದೀಗ ಹಲವು ಕ್ಯಾಮೆರಾ ಕಣ್ಣುಗಳಿಗೆ ಈ ಕಾರು ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Toyota RAV4 Hybrid SUV Spotted In Delhi Meerut Express Highway

RAV4 ಎಂಬುದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಕಾರು ಮಾದರಿಯಾಗಿದೆ. ಈ ಕಾರಿನಲ್ಲಿ ಟೊಯೋಟಾ ಕಂಪನಿಯ ಸಿನೆರ್ಜಿ ಹೈಬ್ರಿಡ್‌ ಡ್ರೈವ್ ಟೆಕ್ನಾಲಜಿಯನ್ನು ಹೊಂದಿದೆ. ಈ ಕಾರು ದೆಹ;ಇ - ಮೀರತ್‌ ಎಕ್ಸ್‌ಪ್ರೆಸ್‌ ಹೈವೇನಲ್ಲಿ ಟೆಸ್ಟ್‌ ರನ್‌ ಮಾಡುತ್ತಿದ್ದ ಸಮಯದಲ್ಲಿ ಸಾರ್ವಜನಿಕರ ಕಣ್ಣಿಗೆ ಕಂಡು ಬಂದಿದೆ.

ಟೊಯೊಟಾ ಕಂಪನಿಯು ಭಾರತದಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್‌ ಹೈಬ್ರಿಡ್‌ ಯಶಸ್ಸಿನ ನಂತರ ಹಲವಾರು ಕಾರುಗಳಲ್ಲಿ ಹೈಬ್ರಿಡ್‌ ಟೆಕ್ನಾಲಜಿಯನ್ನು ಅಭಿವೃದ್ದಿ ಪಡಿಸುತ್ತಿದೆ. ಮಾಹಿತಿಗಳ ಪ್ರಕಾರ ಟೊಯೊಟಾ ಕಂಪನಿಯ ಮುಂದಿನ ಲಾಂಚ್‌ ಈ RAV4 ಹೈಬ್ರಿಡ್‌ ಎಸ್‌ಯುವಿ (Toyota RAV4 Hybrid SUV) ಆಗಿರಲಿದೆ ಎಂದು ತಿಳಿದು ಬಂದಿದೆ. ಈ ಕಾರಿನಲ್ಲಿ ಇನ್ನೋವಾ ಹೈಕ್ರಾಸ್‌ನಲ್ಲಿರುವ ಪವರ್‌ ಅಡ್ಜಸ್ಟಬಲ್‌ ಸಿಟ್‌ಗಳು, ಪುಶ್‌ ಬಟನ್‌ ಸ್ಟಾರ್ಟ್‌, ಬ್ಲೈಂಡ್‌ ಸ್ಪಾಟ್‌ ಮಾನಿಟರಿಂಗ್‌ ರೀತಿಯ ಸೌಲಭ್ಯಗಳು ಸಿಗಲಿದೆ ಎಂದು ತಿಳಿದು ಬಂದಿದೆ.

Toyota RAV4 Hybrid SUV Spotted In Delhi Meerut Express Highway

ಇನ್ನು ಭಾರತದಲ್ಲಿ ಸದ್ಯಕ್ಕೆ ಅತೀ ಹೆಚ್ಚು ಮಾರಾಟವಾಗುತ್ತಿರುವ ಟೋಯೋಟಾ ಕಾರುಗಳಲ್ಲಿ ಇನ್ನೋವಾ ಹೈಕ್ರಾಸ್‌ ಸಹ ಒಂದು. ಈ ಎಂಪಿವಿ, ರೂ.19.77 ಲಕ್ಷದಿಂದ ರೂ.30.68 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಜಿ, ಜಿಎಕ್ಸ್, ವಿಕ್ಸ್ ಸೇರಿದಂತೆ 5 ರೂಪಾಂತರ ಮತ್ತು ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್ ಒಳಗೊಂಡಂತೆ ಹಲವು ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ.

ವಿನ್ಯಾಸದ ದೃಷ್ಟಿಯಿಂದಲೂ ಇನ್ನೋವಾ ಹೈಕ್ರಾಸ್ ಕಾರು ಅತ್ಯಾಧುನಿಕವಾಗಿದ್ದು, 7, 8 ಆಸನ ಆಯ್ಕೆಯಲ್ಲಿ ದೊರೆಯುತ್ತದೆ. ಇದು 2-ಲೀಟರ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್), 2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, ಸಿವಿಟಿ ಮತ್ತು ಇ-ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 16.13 ರಿಂದ 23.24 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

Toyota RAV4 Hybrid SUV Spotted In Delhi Meerut Express Highway

ಟೊಯೊಟಾ ಇನ್ನೋವಾ ಹೈಕ್ರಾಸ್‌ನೊಂದಿಗೆ ಲಭ್ಯವಿರುವ ಇನ್ನೋವಾ ಕ್ರಿಸ್ಟಾ (Innova Crysta) ಎಂಪಿವಿ, ರೂ.19.99 ಲಕ್ಷದಿಂದ ರೂ.26.30 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಕೇವಲ 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 150 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 343 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: HT Auto

Article Published On: Wednesday, March 6, 2024, 16:08 [IST]
English summary
Toyota rav4 hybrid suv spotted in delhi meerut express highway
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+