Toyota: ಈ ಕಾರಿಗಾಗಿ ಮುಗಿಬಿದ್ದ ಜನರು.. ರೂ.10 ಲಕ್ಷ ಬೆಲೆ, 26 ಕಿ.ಮೀ ಮೈಲೇಜ್, ತುಂಬು ಕುಟುಂಬಕ್ಕೆ ಸೂಕ್ತ!
ಭಾರತದಲ್ಲಿ ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ದಶಕಗಳಿಂದ ಟೊಯೊಟಾ (Toyota) ಗುರುತಿಸಿಕೊಂಡಿದೆ. ಕಂಪನಿ ಮಾರಾಟಗೊಳಿಸುವ ಮಾರುತಿ ಸುಜುಕಿ ಎರ್ಟಿಗಾ ಆಧಾರಿತ ರೂಮಿಯನ್ (Rumion) ಎಂಪಿವಿಗೆ ಪ್ರತ್ಯೇಕ ಅಭಿಮಾನಿ ಬಳಗವಿದ್ದು, ಈ ತಿಂಗಳು ಕೂಡ ಹೆಚ್ಚಿನ ಬೇಡಿಕೆ ಮುಂದುವರಿದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮಾರ್ಚ್ 1 2024ಕ್ಕೆ ಅನ್ವಯವಾಗುವಂತೆ ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ರೂಮಿಯನ್ ಎಂಪಿವಿ ಹೊಂದಿರುವ ಕಾಯುವಿಕೆ ಅವಧಿ (Waiting Period) ಕುರಿತ ವಿವರವನ್ನು ಪ್ರಕಟಿಸಿದೆ. ಅಧಿಕ ಡಿಮ್ಯಾಂಡ್ ಇರುವುದರಿಂದ ಜನವರಿ ಹಾಗೂ ಫೆಬ್ರವರಿಯಂತೆ ಈ ತಿಂಗಳು ಕೂಡ ಸಿಎನ್‌ಜಿ (CNG) ರೂಪಾಂತರದ ಬುಕ್ಕಿಂಗ್ ಪಡೆಯುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಿಸಲಾಗಿದೆ.

ಟೊಯೊಟಾ ರೂಮಿಯನ್ (Toyota Rumion) ಎಂಪಿವಿ ಪೆಟ್ರೋಲ್ ರೂಪಾಂತರಗಳು ವಿತರಣೆಯಾಗಲು ಸ್ವಲ್ಪ ಹೆಚ್ಚಿನ ಸಮಯಾವಕಾಶ ಹಿಡಿಯುತ್ತದೆ. ನೀವು ಇವತ್ತು ಈ ಕಾರನ್ನು ಕಾಯ್ದಿರಿಸಿದರೂ ಸುಮಾರು 7 ರಿಂದ 8 ತಿಂಗಳ ನಂತರ ಡಿಲೆವರಿಯಾಗುತ್ತದೆ. ಅದೇ ಫೆಬ್ರವರಿಯಲ್ಲಿ ಆರ್ಡರ್ ಮಾಡಿದ್ದರೆ 6 - 7 ತಿಂಗಳ ಬಳಿಕ ವಿತರಣೆಯಾಗುತ್ತಿತ್ತು.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ರೂಮಿಯನ್ ಎಂಪಿವಿ ರೂ.10.44 ಲಕ್ಷದಿಂದ ರೂ.13.73 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಎಸ್, ಜಿ, ವಿ ರೂಪಾಂತರ (Variant) ಹಾಗೂ 5-ಆಕರ್ಷಕ ಮೊನೊ ಟೋನ್ ಬಣ್ಣಗಳೊಂದಿಗೆ ಲಭ್ಯವಿದೆ. ವಿನ್ಯಾಸದ ದೃಷ್ಟಿಯಿಂದಲೂ ಈ ಕಾರು ಅತ್ಯಾಧುನಿಕವಾಗಿದ್ದು, 7 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಯಬಹುದು.

ಟೊಯೊಟಾ ರೂಮಿಯನ್ (Toyota Rumion) ಎಂಪಿವಿ 1.5-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಪೆಟ್ರೋಲ್ ಮಾದರಿಗಳು 20.11 ರಿಂದ 20.51 ಕೆಎಂಪಿಎಲ್, ಸಿಎನ್‌ಜಿ ಚಾಲಿತ ರೂಪಾಂತರ 26.11 ಕೆಜಿ/ಕೆಎಂ ಮೈಲೇಜ್ ಕೊಡುತ್ತದೆ.
ಟೊಯೊಟಾ ಹಾಗೂ ಮಾರುತಿ ಸುಜುಕಿ ದೇಶದಲ್ಲಿ ಪಾಲುದಾರಿಕೆ ಹೊಂದಿದ್ದು, ಅದರ ಭಾಗವಾಗಿ ಎರ್ಟಿಗಾ ರೀ-ಬ್ಯಾಡ್ಜ್ ಆವೃತ್ತಿಯಾಗಿ ರೂಮಿಯನ್ ಎಂಪಿವಿಯನ್ನು ಅಭಿವೃದ್ದಿಪಡಿಸಲಾಗಿದೆ. ಆದರೂ ಪ್ರತ್ಯೇಕ ವೈಶಿಷ್ಟ್ಯವನ್ನು ಒಳಗೊಂಡಿದೆ. ಪ್ರಮುಖವಾಗಿ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಹಾಗೂ ಪ್ಯಾಡಲ್ ಶಿಫ್ಟರ್ ಅನ್ನು ಪಡೆದಿದೆ.

ರೂಮಿಯನ್ ಎಂಪಿವಿ ಸುರಕ್ಷತೆಯ ವಿಚಾರದಲ್ಲೂ ಹೆಚ್ಚು ಅತ್ಯಾಧುನಿಕವಾಗಿದೆ. 4 ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ಕಿಯಾ ಕ್ಯಾರೆನ್ಸ್ ಮತ್ತು ಮಹೀಂದ್ರಾ ಮರಾಜ್ಜೊ ದೊಡ್ಡ ಎದುರಾಳಿಯಾಗಿವೆ.
ಟೊಯೊಟಾ ರೂಮಿಯನ್ ಎಂಪಿವಿ 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ತಮ್ಮ ಕುಟುಂಬಕ್ಕಾಗಿ ಕೈಗೆಟುಕುವ ಬೆಲೆಯಲ್ಲಿ ಕಾರನ್ನು ಖರೀದಿಸಬೇಕೆಂದು ಆಲೋಚಿಸುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಲಿದೆ. ಆದರೆ ಗರಿಷ್ಠ ಮೈಲೇಜ್ ನೀಡುವ ಸಿಎನ್‌ಜಿ ರೂಪಾಂತರಕ್ಕೆ ಭಾರೀ ಬೇಡಿಕೆಯಿರುವುದರಿಂದ ಬುಕ್ಕಿಂಗ್ ಸ್ಥಗಿತಗೊಳಿಸಿರುವುದು ಗ್ರಾಹಕರಿಗೆ ಬೇಸರ ತರಿಸಿದ್ದು, ಕಂಪನಿ ಯಾವಾಗ ಆರ್ಡರ್ ತೆಗೆದುಕೊಳ್ಳುವುದನ್ನು ಶುರು ಮಾಡುತ್ತದೆ ಎಂದು ಕಾತರದಿಂದ ಕಾಯುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications