Toyota: ಟೊಯೊಟಾದ ಈ ಫ್ಯಾಮಿಲಿ ಕಾರಿಗಾಗಿ ಕ್ಯೂ ನಿಂತ ಜನ.. 26 ಕಿ.ಮೀ ಮೈಲೇಜ್

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM), ದೇಶೀಯ ಮಾರುಕಟ್ಟೆಯಲ್ಲಿ ಪ್ರಖ್ಯಾತ ಕಾರು ತಯಾರಕ ಸಂಸ್ಥೆಯಾಗಿ ಜನಪ್ರಿಯತೆ ಗಳಿಸಿದೆ. ಕಂಪನಿಯ ರೂಮಿಯನ್ (Rumion) ಎಂಪಿವಿಗೆ ಈ ಜನವರಿ ತಿಂಗಳು ಭಾರೀ ಬೇಡಿಕೆಯಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್‌ ನಲ್ಲಿ 1 ಜನವರಿ 2024ಕ್ಕೆ ಅನ್ವಯವಾಗುವಂತೆ ರೂಮಿಯನ್ ಎಂವಿಪಿ ಹೊಂದಿರುವ ಕಾಯುವಿಕೆ ಅವಧಿ ಕುರಿತು ವಿವರವನ್ನು ಪ್ರಕಟಿಸಿದೆ. ಗ್ರಾಹಕರಿಂದ ಸಿಎನ್‌ಜಿ (CNG) ರೂಪಾಂತಗಳಿಗೆ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆ, ಈ ತಿಂಗಳು ಸಹ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Toyota: ಟೊಯೊಟಾದ ಈ ಫ್ಯಾಮಿಲಿ ಕಾರಿಗಾಗಿ ಕ್ಯೂ ನಿಂತ ಜನ.. 26 ಕಿ.ಮೀ ಮೈಲೇಜ್

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ರೀ-ಬ್ಯಾಡ್ಜ್ ಆವೃತ್ತಿಯಾಗಿರುವ ಟೊಯೊಟಾ ರೂಮಿಯನ್ (Toyota Rumion) ಎಂಪಿವಿಯ ಪೆಟ್ರೋಲ್ ರೂಪಾಂತರಗಳು ಈ ಜನವರಿಯಲ್ಲಿ ಕೊಂಚ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿವೆ. ನೀವು ಇವತ್ತು ಈ ಕಾರನ್ನು ಬುಕ್ಕಿಂಗ್ ಮಾಡಿದರೂ ವಿತರಣೆಯಾಗಲು 6 ರಿಂದ 7 ತಿಂಗಳು ಹಿಡಿಯುತ್ತದೆ.

ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟೊಯೊಟಾ ರೂಮಿಯನ್, ರೂ.10.29 ಲಕ್ಷದಿಂದ ರೂ.13.68 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಸ್, ಜಿ, ವಿ ರೂಪಾಂತರ ಹಾಗೂ ಐಕಾನಿಕ್ ಗ್ರೇ, ಸ್ಪಂಕಿ ಬ್ಲೂ, ಕೆಫೆ ವೈಟ್ ಮತ್ತು ಎಂಟೈಸಿಂಗ್ ಸಿಲ್ವರ್ ಒಳಗೊಂಡಂತೆ ಹಲವು ಬಣ್ಣಗಳನ್ನು ಪಡೆದಿದ್ದು, 7 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದು.

Toyota: ಟೊಯೊಟಾದ ಈ ಫ್ಯಾಮಿಲಿ ಕಾರಿಗಾಗಿ ಕ್ಯೂ ನಿಂತ ಜನ.. 26 ಕಿ.ಮೀ ಮೈಲೇಜ್

ಟೊಯೊಟಾ ರೂಮಿಯನ್ ಎಂಪಿವಿ, 1.5 - ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ. ಅದಕ್ಕೆ ಅನುಗುಣವಾಗಿ, 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಮೈಲೇಜ್ ವಿಚಾರವಾಗಿ ಹೇಳುವುದಾದರೆ, ಪೆಟ್ರೋಲ್ ರೂಪಾಂತರಗಳು 20.51 km/l ಮತ್ತು ಸಿಎನ್‌ಜಿ ರೂಪಾಂತರ 26.11 km/kg ಇಂಧನ ದಕ್ಷತೆಯನ್ನು ಹೊಂದಿದೆ.

ಈ ಟೊಯೊಟಾ ರೂಮಿಯನ್ ಎಂಪಿವಿ ವಿನ್ಯಾಸದ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ 209 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

Toyota: ಟೊಯೊಟಾದ ಈ ಫ್ಯಾಮಿಲಿ ಕಾರಿಗಾಗಿ ಕ್ಯೂ ನಿಂತ ಜನ.. 26 ಕಿ.ಮೀ ಮೈಲೇಜ್

ಸುರಕ್ಷತೆಯ ವಿಚಾರದಲ್ಲೂ ಈ ಕಾರು ಅತ್ಯಾಧುನಿಕವಾಗಿದ್ದು, 4 ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಪಾರ್ಕಿಂಗ್ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಆಂಕರ್ಸ್ ಅನ್ನು ಪಡೆದಿದೆ. ಟೊಯೊಟಾ ರೂಮಿಯನ್ ಎಂಪಿವಿಗೆ ಕಿಯಾ ಕ್ಯಾರೆನ್ಸ್, ಮಹೀಂದ್ರಾ ಮರಾಜ್ಜೊ ಪ್ರತಿಸ್ಪರ್ಧಿಯಾಗಿವೆ.

ಟೊಯೊಟಾ (Toyota) 2024ರ ವರ್ಷಾರಂಭದಲ್ಲಿಯೇ ಜನಪ್ರಿಯ ಇನ್ನೋವಾ, ಅರ್ಬನ್ ಕ್ರೂಸರ್ ಹೈರಿಡರ್ ಬೆಲೆಯನ್ನು ಹೆಚ್ಚಿಸಿದೆ. ಇನ್ನೋವಾ ಹೈಕ್ರಾಸ್ (Innova Hycross) ಬೆಲೆ ರೂ.42,000 ವರೆಗೆ, ಇನ್ನೋವಾ ಕ್ರಿಸ್ಟಾ (Innova Crysta) ಎಂಪಿವಿಯ ಆಯ್ದ ರೂಪಾಂತರಗಳ ಬೆಲೆ ರೂ.25,000 ಮತ್ತು ಅರ್ಬನ್ ಕ್ರೂಸರ್ ಹೈರಿಡರ್ (Urban Cruiser Hyryder), ಬೆಲೆಯೂ ರೂ. 28,000 ವರೆಗೆ ಅಧಿಕಗೊಂಡಿದೆ.

ಆ ಬೆಲೆಗಳು ಏನೇ ಹೆಚ್ಚಳಗೊಂಡರೂ ಕೈಗೆಟುಕುವ ಬೆಲೆಯ ಟೊಯೊಟಾ ರೂಮಿಯನ್ ಎಂಪಿವಿ ಮಾತ್ರ ತಿಂಗಳಿಂದ ತಿಂಗಳಿಗೆ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇದು ಕುಟುಂಬದ ಕಾರಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಖರೀದಿದಾರರು ರೂಮಿಯನ್ ಕೊಂಡುಕೊಳ್ಳಲು ಆಸಕ್ತಿ ತೋರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ತಿಂಗಳಾದರೂ ಸಿಎನ್‌ಜಿ ರೂಪಾಂತರದ ಬುಕ್ಕಿಂಗ್ ಶುರುವಾಗಲಿ ಎಂದು ಆಶಿಸೋಣ.

Article Published On: Sunday, January 7, 2024, 10:00 [IST]
English summary
Toyota rumion january 2024 waiting period revealed 26 mileage 10 lakh price
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+