ಜನ ಮುಗಿಬಿದ್ದು ಖರೀದಿಸುತ್ತಿದ್ದ ರೂಮಿಯಾನ್ ಕಾರಿನ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟೊಯೊಟಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಟೊಯೊಟಾ ರೂಮಿಯಾನ್ (Toyota Rumion) ಎಂಪಿವಿಯನ್ನು ಕಳೆದ ವಋಶಹ್ದ ಬಿಡುಗಡೆಗೊಳಿಸಿತು ಹೆಚ್ಚು ಯಶಸ್ವಿಯಾದ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯನ್ನು ಆಧರಿಸಿರುವುದರಿಂದ ಟೊಯೊಟಾ ಕಂಪನಿಯು ಹೆಚ್ಚಿನ ಭರವಸೆಯನ್ನು ಸೃಷ್ಟಿಸಿತು.
ಇದೀಗ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ಮ ರೂಮಿಯಾನ್ ಎಂಪಿವಿಯ ಎಲ್ಲಾ ರೂಪಾಂತರಗಳ ಬೆಲೆಗಳನ್ನು ರೂ.15,000 ವರೆಗೆ ಹೆಚ್ಚಿಸಿದ್ದಾರೆ. ಬೆಲೆ ಎರಿಕೆಯ ಬಳಿಕ ಟೊಯೊಟಾ ರೂಮಿಯಾನ್ ಕಾರಿನ ಬೆಲೆಯು ಎಕ್ಸ್ ಶೊರೂಮ್ ಪ್ರಕಾರ ರೂ.10.44 ಲಕ್ಷದಿಂದ ರೂ. 11.39 ಲಕ್ಷಗಳಾಗಿದೆ. ಆಸಕ್ತಿದಾಯಕ ವಿಷಯವೆಂದರೆ ಟೊಯೊಟಾ ಈಗಾಗಲೇ ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ರೂಮಿಯಾನ್ ಅನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಎರ್ಟಿಗಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿಗಳಲ್ಲಿ ಒಂದಾಗಿದೆ.

ಟೊಯೊಟಾ ಕಾರಿಗಳಿಗೆ ಭಾರೀ ಬೇಡಿಕೆಯನ್ನು ಹೊಂದಿದೆ. ಇದರಿಂದ ಟೊಯೊಟಾ ಕಾರುಗಳಿಗೆ ಹೆಚ್ಚಿನ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಭಾರೀ ಬೇಡಿಕೆಯಿಂದಾಗಿ, ಸೆಪ್ಟೆಂಬರ್‌ನಲ್ಲಿ ಟೊಯೊಟಾ ರುಮಿಯಾನ್ ಸಿಎನ್‌ಜಿಗಾಗಿ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಟೊಯೊಟಾ ರೂಮಿಯಾನ್ ಎಂಪಿವಿಗೆ ಅಗಾಧ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆ ಎಂದು ಹೇಳಿದೆ. ಈ ಅನಿರೀಕ್ಷಿತ ಬೇಡಿಕೆಯು ಲೈನ್-ಅಪ್‌ನಾದ್ಯಂತ ದೀರ್ಘ ವಿತರಣಾ ಸಮಯವನ್ನು ಉಂಟುಮಾಡಿದೆ.
ವಿಶೇಷವಾಗಿ ಸಿಎನ್‌ಜಿ ರೂಪಾಂತರಗಳಿಗೆ. ಇದರಿಂದ ತಾತ್ಕಾಲಿಕವಾಗಿ ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಟೊಯೊಟಾ ರೂಮಿಯಾನ್ ಎಂಪಿವಿಯು ಹೊಸ ಮುಂಭಾಗದ ಬಂಪರ್ ಮತ್ತು ಗ್ರಿಲ್ ಅನ್ನು ಹೊಂದಿದೆ. ಈ ವಿನ್ಯಾಸದ ನವೀಕರಣಗಳ ಜೊತೆಗೆ, ಹೊಸ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳು ಮತ್ತು ಸ್ವಲ್ಪ ನವೀಕರಿಸಿದ ಹಿಂಭಾಗದ ಬಂಪರ್ ಜೊತೆಗೆ ಬರುತ್ತದೆ.

ರೂಮಿಯಾನ್ ಕ್ರೋಮ್ ಜೊತೆ ಒಂದು ವಿಶಿಷ್ಟವಾದ ಮುಂಭಾಗದ ಗ್ರಿಲ್ ಅನ್ನು ಪ್ರಿ-ಫೇಸ್‌ಲಿಫ್ಟ್ ಇನೋವಾ ಕ್ರಿಸ್ಟಾದಿಂದ ಸ್ಫೂರ್ತಿಯನ್ನು ಪಡೆಯುತ್ತದೆ. ಹೊಸದಾಗಿ ಬಿಡುಗಡೆಯಾದ ಟೊಯೊಟಾ ರೂಮಿಯಾನ್ ಎಂಪಿವಿಯು 6 ರೂಪಾಂತರಗಳಲ್ಲಿ ಲಭ್ಯವಿದೆ. ಈ ಎಂಪಿವಿಯು S, G, ಮತ್ತು V ಎಂಬ 3 ಟ್ರಿಮ್ ಹಂತಗಳನ್ನು ಒಳಗೊಂಡಿದೆ. ಇದರಲ್ಲಿ 'V' ಟಾಪ್-ಸ್ಪೆಕ್ ಟ್ರಿಮ್ ಆದರೆ 'S' ರೂಪಾಂತರವು ಮೂಲ ಮಾದರಿಯಾಗಿದೆ.
ಇದಲ್ಲದೆ, ಟೊಯೊಟಾ ಸಿಎನ್‌ಜಿ ರೂಪಾಂತರವನ್ನು ಎಸ್ ಟ್ರಿಮ್ ಮಟ್ಟದಲ್ಲಿ ನೀಡುತ್ತದೆ. ಟೊಯೊಟಾ ರೂಮಿಯಾನ್ ಎಂಪಿವಿಯ ಆಟೋಮ್ಯಾಟಿಕ್ ರೂಪಾಂತರಗಳನ್ನು S ಮತ್ತು V ಎಂಬ ಎರಡು ಟ್ರಿಮ್ ಹಂತಗಳಲ್ಲಿ ನೀಡಲಾಗುತ್ತದೆ. ಇದು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಹೆಚ್ಚು ಫ್ಯಾಮಿಲಿ ಕಾರನ್ನು ಖರೀದಿಸಲು ಬಯಸುವ ಗ್ರಾಹಕರನ್ನು ಸೆಳೆಯುತ್ತದೆ. ಅಲ್ಲದೇ ಹೆಚ್ಚು ಸಿಟಿಗಳಲ್ಲಿ ದೈನಿಂದಿನ ಬಳಕೆ ಮಾಡಲು ಬಯಸುವ ಗ್ರಾಹಕರನ್ನು ಕೂಡ ಸೆಳೆಯುತ್ತದೆ.

ಈ ಟೊಯೊಟಾ ರುಮಿಯಾನ್ ಎಂಪಿವಿಯಲ್ಲಿ 1.5-ಲೀಟರ್, ನ್ಯಾಚುರಲ್-ಆಸ್ಪೈರೆಡ್ ಪೆಟ್ರೋಲ್ ಎಂಜಿನ್ ಮಾರುತಿ ಸುಜುಕಿ ಎರ್ಟಿಗಾದಂತೆಯೇ ಇದೆ. ಈ ಎಂಜಿನ್ 102 bhp ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ಮಾಡಬಹುದು.
ಇನ್ನು ಟೊಯೊಟಾ ರುಮಿಯಾನ್ ಎಂಪಿವಿ CNG ಮೋಡ್‌ನಲ್ಲಿರುವ ಡ್ಯುಯಲ್-ಫ್ಯೂಯಲ್ ಪವರ್‌ಟ್ರೇನ್ 87 bhp ಮತ್ತು 121 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಪ್ರತ್ಯೇಕವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಅಲ್ಲದೆ, ರೂಮಿಯಾನ್ ಸಿಎನ್‌ಜಿಯು 26.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಟೊಯೊಟಾ ಹೇಳಿಕೊಂಡಿದೆ.
ಇನ್ನು ಟೊಯೊಟಾ ರುಮಿಯಾನ್ ಎಂಪಿವಿಯು ಮಾರುತಿ ಸುಜುಕಿ ಎರ್ಟಿಗಾದಂತೆಯೇ ಸಜ್ಜುಗೊಂಡಿದೆ. ಈ ಹೊಸ ಎಂಪಿವಿಯಲ್ಲಿ ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ AppleCarPlay ಮತ್ತು Android Auto, 6 ಏರ್‌ಬ್ಯಾಗ್‌ಗಳು, ಕ್ರೂಸ್ ಕಂಟ್ರೋಲ್, ISOFIX ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಚ್ಚಿನವುಗಳನ್ನು ಕೆಲವು ಅತ್ಯುತ್ತಮ ಫೀಚರ್ಸ್ ಗಳನ್ನು ಹೊಂದಿವೆ.


Click it and Unblock the Notifications