28KM ಮೈಲೇಜ್ ನೀಡುವ ಈ ಕಾರಿನಲ್ಲಿ ಕುಟುಂಬ ಸಮೇತ ಹೋಗಬಹುದು: 7-ಸೀಟರ್ ರೂಪದಲ್ಲಿ ಬಿಡುಗಡೆಗೆ ಸಜ್ಜು!

ಜನಪ್ರಿಯ ಕಾರು ತಯಾರಕರಾದ ಟೊಯೊಟಾ (Toyota) ತನ್ನ ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಈ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನನ್ನು ಸೃಷ್ಟಿಸಿದೆ. ಈ ಟೊಯೊಟಾ ಎಸ್‍ಯುವಿಯು ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ತನ್ನ ಹೆಚ್ಚಿನ ಮೈಲೇಜ್ ಮತ್ತು ಹೈಬ್ರಿಡ್ ತಂತ್ರಜ್ಞಾನಕ್ಕಾಗಿ ಭಾರತದಲ್ಲಿ ಗಮನ ಸೆಳೆಯುತ್ತಿದೆ. 5-ಸೀಟುಗಳ ಮಾದರಿಯು 28 ಕಿ.ಮೀ ಮೈಲೇಜ್ ಅನ್ನು ಹೊಂದಿದೆ, ARAI ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಈ ಮೈಲೇಜ್ ಹೆಚ್ಚಾಗಿ ಅದರ ಮುಂದುವರಿದ ಹೈಬ್ರಿಡ್ ಸಿಸ್ಟಂನಿಂದಾಗಿದೆ. ಟೊಯೊಟಾ 2025ರ ಅಂತ್ಯದ ವೇಳೆಗೆ ಹೈರೈಡರ್‌ನ 7-ಸೀಟುಗಳ ರೂಪಾಂತರವನ್ನು ಪರಿಚಯಿಸಲು ಯೋಜಿಸಿದೆ.

Toyota Urban Cruiser Hyryder

ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಟೊಯೊಟಾ ಹೈರೈಡರ್‌ನ 7-ಸೀಟುಗಳ ಆವೃತ್ತಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಮಾದರಿಯು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ, ಸಿಟ್ರೊಯೆನ್ C3 ಏರ್‌ಕ್ರಾಸ್ ಮತ್ತು ಹ್ಯುಂಡೈ ಅಲ್ಕಾಜರ್‌ನಂತಹ ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಮುಂಬರುವ 7-ಸೀಟುಗಳ ಹೈರೈಡರ್ ಮೂರು ಸಾಲುಗಳ ಸೀಟುಗಳನ್ನು ಹೊಂದಿರುತ್ತದೆ. ಪ್ರತಿಯೊಂದೂ ಪ್ರತ್ಯೇಕ AC ವೆಂಟ್ ಗಳನ್ನು ಹೊಂದಿದೆ.

ಈ ವಿನ್ಯಾಸವು ಎಲ್ಲಾ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶ ಮತ್ತು ಲೆಗ್‌ರೂಮ್ ಅನ್ನು ಖಾತ್ರಿಗೊಳಿಸುತ್ತದೆ, ದೀರ್ಘ ಪ್ರಯಾಣದ ಸಮಯದಲ್ಲಿ ಸೌಕರ್ಯವನ್ನು ಹೆಚ್ಚಿಸುತ್ತದೆ. 5-ಸೀಟುಗಳ ಮಾದರಿಗೆ ಹೋಲಿಸಿದರೆ 7-ಸೀಟುಗಳ ಆವೃತ್ತಿಯು ಸಣ್ಣ ದೃಶ್ಯ ವರ್ಧನೆಗಳನ್ನು ಹೊಂದಿದ್ದರೂ, ಎಂಜಿನ್ ವಿಭಾಗದಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ. ಇದು 1.5-ಲೀಟರ್ TNGA ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಅನ್ನು ಬಳಸುವುದನ್ನು ಮುಂದುವರೆಸುತ್ತದೆ, ಇದು 101.6bhp ಮತ್ತು 117Nm ಟಾರ್ಕ್ ಅನ್ನು ನೀಡುತ್ತದೆ.

Toyota Urban Cruiser Hyryder

ಈ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಮಾದರಿಯಲ್ಲಿ ವಿವಿಧ ವೆರಿಯೆಂಟ್ ಅನುಗುಣವಾಗಿ ಸ್ಮಾರ್ಟ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಹೊಂದಿದೆ. ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯ ಸ್ಟ್ರಾಂಗ್ ಹೈಬ್ರಿಡ್ ಮಾದರಿಯಲ್ಲಿರುವ 1.5 ಲೀಟರ್ ಅಟ್ಕಿನ್ಸನ್ ಪೆಟ್ರೋಲ್ ಎಂಜಿನ್ ಅತ್ಯುತ್ತಮ ಮೈಲೇಜ್ ಹೊಂದಿದ್ದು, ಇದರಲ್ಲಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಮತ್ತು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೈಬ್ರಿಡ್ ತಂತ್ರಜ್ಞಾನದ ಪ್ರಮುಖ ತಾಂತ್ರಿಕ ಅಂಶವಾಗಿದೆ.

ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮಾದರಿಯು 87 ಬಿಎಚ್‌ಪಿ ಮತ್ತು 122 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 177.6 ವೊಲ್ಟ್ ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ 79 ಬಿಎಚ್‌ಪಿ ಮತ್ತು 141 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಒಟ್ಟಾಗಿ ಕಾರ್ಯನಿರ್ವಹಣೆ ಮಾಡುವ ಮೂಲಕ ಪೆಟ್ರೋಲ್ ದಹಿಸುವಿಕೆಯ ಪ್ರಮಾಣವನ್ನು ತಗ್ಗಿಸಲಿದೆ.

Toyota Urban Cruiser Hyryder

ಈ ಮೂಲಕ ಎರಡು ತಂತ್ರಜ್ಞಾನಗಳು ಒಟ್ಟಾಗಿ 114 ಬಿಎಚ್‌ಪಿ ಉತ್ಪಾದನೆಯೊಂದಿಗೆ ಇಂಧನ ಕಾರ್ಯಕ್ಷಮತೆ ಕಾಯ್ದುಕೊಳ್ಳುತ್ತದೆ. ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಹೈರೈಡರ್ ವೆರಿಯೆಂಟ್‌ಗಳಲ್ಲಿ ಟೊಯೊಟಾ ಕಂಪನಿಯು ಇ-ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ. ಇದು ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇನ್ನು ಸ್ಮಾರ್ಟ್ ಹೈಬ್ರಿಡ್ ಹೈರೈಡರ್‌ನಲ್ಲಿ ಟೊಯೊಟಾ ಕಂಪನಿಯು ಮಾರುತಿ ಸುಜುಕಿಯಿಂದ ಎರವಲು ಪಡೆಯಲಾದ 1.5-ಲೀಟರ್ K15C ಸ್ಮಾರ್ಟ್-ಹೈಬ್ರಿಡ್ ಜೊತೆಗೆ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಒದಗಿಸಲಿದೆ. ಅದು ಕೂಡಾ ಉತ್ತಮ ಮೈಲೇಜ್ ನೊಂದಿಗೆ ಪರ್ಫಾಮೆನ್ಸ್ ಕಾಯ್ದುಕೊಳ್ಳಲು ಸಹಕಾರಿಯಾಗಿದೆ. 1.5-ಲೀಟರ್ K15C ಸ್ಮಾರ್ಟ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಈಗಾಗಲೇ ಬ್ರೆಝಾ, ಎಕ್ಸ್‌ಎಲ್6 ಮತ್ತು ಹೊಸ ಎರ್ಟಿಗಾ ಮಾದರಿಗಳಲ್ಲಿಯೂ ನೀಡಲಾಗಿದೆ.

Toyota Urban Cruiser Hyryder

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, May 18, 2024, 16:29 [IST]
English summary
Toyota urban cruiser hyryder 7 seater launch india by 2025 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+