ಬೈಕ್‌ನಂತೆ ಮೈಲೇಜ್‌ ಕೊಡುವ ಟೊಯೋಟಾದ ಈ ಕಾರು ಬೇಕೆ?: EMI, ಮೈಲೇಜ್‌, ಡೌನ್‌ಪೇಮೆಂಟ್ ಮಾಹಿತಿ!

ಟೊಯೊಟಾ ಭಾರತದಲ್ಲಿ ಮಾರಾಟ ಮಾಡುತ್ತಿರುವ ಹೈಬ್ರಿಡ್ ವಾಹನದಲ್ಲಿ ಪ್ರಮುಖವಾದುದು ಯಾವುದೆಂದು ನೋಡಿದರೆ ಅದು ಟೊಯೊಟಾ ಹೈ ರೈಡರ್. ಮಾರುತಿ ಸುಜುಕಿ ಗ್ರಾಂಡ್‌ ವಿಟಾರಾದ ಟೊಯೊಟಾ ವರ್ಷನ್‌ ಆಗಿರುವ ಈ ಕಾರು ಹೈಬ್ರಿಡ್‌ ಟೆಕ್ನಾಲಜಿಯಿಂದ ಸುಮಾರು 27.97kmpl ಮೈಲೇಜ್‌ ಕೊಡುತ್ತದೆ. ಈ ಕಾರಿನ ಇಎಂಐ ಮತ್ತು ಡೌನ್‌ಪೇಮೆಂಟ್ ಬಗ್ಗೆ ನೋಡೋಣ..

ಮೊದಲಿಗೆ ಟೊಯೊಟಾ ಹೈರೈಡರ್‌ ಕಾರಿನ ಎಕ್ಸ್ ಶೋ ರೂಮ್‌ ಬೆಲೆ ಸುಮಾರು 11,14,000 ರೂಪಾಯಿಗಳು. ಇದಕ್ಕೆ ಕರ್ನಾಟಕದ ಆರ್‌ಟಿಒ ಟ್ಯಾಕ್ಸ್‌ ನೋಡುವುದಾದರೆ ಅದು ಸುಮಾರು 2,10,212 ಲಕ್ಷ ರೂಪಾಯಿಗಳಷ್ಟು ಬರುತ್ತದೆ. ಈ ಕಾರಿನ ಇನ್ಸ್ಯುರೆನ್ಸ್‌ ಸುಮಾರು 46,518 ರೂಗಳು. ಇವೆಲ್ಲಾ ಸೇರಿ ಬೆಂಗಳೂರಿನಲ್ಲಿ ಟೊಯೋಟಾ ಹೈರೈಡರ್‌ ಆರಂಭಿಕ ಬೆಲೆ ಸುಮಾರು13,81,870 ಗಳಷ್ಟಾಗುತ್ತದೆ.

Toyota Urban Cruiser Hyryder Down payment EMI Mileage And More

ಇನ್ನು ಈ ಕಾರಿನ ಇಎಂಐ ಮತ್ತು ಕುರಿತಾಗಿ ನೋಡುವುದಾದರೆ ನೀವು ಈ ಕಾರಿಗೆ ಕನಿಷ್ಟವೆಂದರೂ 2,10,000 ರೂಗಳನ್ನು ಡೌನ್‌ ಪೇಮೆಂಟ್‌ ರೀತಿಯಲ್ಲಿ ಕಟ್ಟಬೇಕಾಗುತ್ತದೆ. ನೀವು 9.8% ಬಡ್ಡಿ ದರದಲ್ಲಿ ಸುಮಾರು ೭ ವರ್ಷಗಳ ಕಾಲಾವಧಿಗೆ ಲೋನ್‌ ಮಾಡಿದರೆ, ಪ್ರತೀ ತಿಂಗಳು ಸುಮಾರು 19,334 ರೂಗಳನ್ನು ಇಎಂಐ ರೂಪದಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.

ಇನ್ನು ಟೊಯೊಟಾ ಹೈರೈಡರ್‌ ಕುರಿತಾಗಿ ನೋಡುವುದಾದರೆ, ಸದ್ಯ ಪೆಟ್ರೋಲ್ ಮತ್ತು ಹೈಬ್ರಿಡ್ ರೂಪಾಂತರಗಳು ಈಗ ರೂ. 10.73 ಲಕ್ಷದಿಂದ ಆರಂಭವಾಗಿ ರೂ. 19.74 ಲಕ್ಷದವರೆಗೆ ಮತ್ತು ಸಿಎನ್‌ಜಿ ರೂಪಾಂತರಗಳು ರೂ. 13.43 ಲಕ್ಷದಿಂದ ಆರಂಭವಾಗಿ ರೂ. 15.31 ಲಕ್ಷದವರೆಗೆ ಹೋಗುತ್ತದೆ. ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಆಗಿವೆ. ಉಳಿದಂತೆ ಕಾರಿನಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಜುಲೈ 2022 ರಲ್ಲಿ ಹೊಸ ಅರ್ಬನ್ ಕ್ರೂಸರ್ ಹೈರೈಡರ್ SUV ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತು. ಬಳಿಕ 2023 ಫೆಬ್ರವರಿಯಲ್ಲಿ ಮೊದಲ ಬಾರಿಗೆ ಬೆಲೆ ಏರಿಕೆ ಮಾಡಲಾಯಿತು. ಇದೀಗ ಮತ್ತೊಮ್ಮೆ ಟೊಯೊಟಾ ಕಂಪನಿಯು ಅರ್ಬನ್ ಕ್ರೂಸರ್ ಹೈರೈಡರ್ ಬೆಲೆಯನ್ನು 60,000 ರೂ. ವರೆಗೆ ಹೆಚ್ಚಿಸಿದೆ.

ಟೊಯೊಟಾ ಹೈರೈಡರ್‌ನ ಹುಡ್ ಅಡಿಯಲ್ಲಿ 1.5-ಲೀಟರ್ ಪೆಟ್ರೋಲ್ ಪವರ್‌ಟ್ರೇನ್ ಇದ್ದು ಇದನ್ನು ಮೈಲ್ಡ್ ಮತ್ತು ಆಟೋ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನಗಳೊಂದಿಗೆ ನೀಡಲಾಗುತ್ತದೆ. ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಮಾರುತಿ ಸುಜುಕಿ ಬ್ರೆಝಾದಲ್ಲಿ ಕಂಡುಬರುವಂತೆಯೇ ಇದೆ. ಸ್ಟ್ರಾಂಗ್-ಹೈಬ್ರಿಡ್ 116PS ಪವರ್ ಉತ್ಪಾದನೆಯೊಂದಿಗೆ 27.97kmpl ನಷ್ಟು ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿ ಇ, ಎಸ್, ಜಿ, ವಿ ಟ್ರಿಮ್‌ಗಳು ಮಾತ್ರ ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದದ್ದರೇ ಎಸ್, ಜಿ ಮತ್ತು ವಿ ಟ್ರಿಮ್‌ಗಳಲ್ಲಿ ಮಾತ್ರ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ‌ನೊಂದಿಗೆ ಲಭ್ಯವಿದೆ. ಮೈಲ್ಡ್ ಹೈಬ್ರಿಡ್ ವೇರಿಯೆಂಟ್‌ಗಳಿಗಾಗಿ 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

ಸ್ರಾಂಗ್ ಹೈಬ್ರಿಡ್ ಇ ಸಿವಿಟಿ (ಸಿಂಗಲ್-ಸ್ಪೀಡ್ ಟ್ರಾನ್ಸ್ಮಿಷನ್) ಅನ್ನು ಪಡೆಯುತ್ತದೆ. ಹೈರೈಡರ್‌ನ ಮೈಲ್ಡ್ ಹೈಬ್ರಿಡ್ ಮ್ಯಾನುವಲ್ ರೂಪಾಂತರಗಳು ಆಲ್ ವೀಲ್ ಡ್ರೈವ್‌ಟ್ರೇನ್ ಆಯ್ಕೆಯನ್ನು ಸಹ ಪಡೆಯುತ್ತವೆ. ಹೈರೈಡರ್ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಫೋಕ್ಸ್ ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ ನಂತಹ ಕಾರುಗಳೊಂದಿಗೆ ಸೆಗ್ಮೆಂಟ್ ನಲ್ಲಿ ಸ್ಪರ್ಧಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, May 12, 2024, 12:00 [IST]
English summary
Toyota urban cruiser hyryder down payment emi mileage and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+