Toyota: ಟೊಯೊಟಾದ ಈ ಕಾರಿಗಾಗಿ ಮುಗಿಬಿದ್ದ ಗ್ರಾಹಕರು.. 5 ಜನ ಹೋಗಬಹುದು, 27 ಕಿ.ಮೀ ಮೈಲೇಜ್

ಭಾರತದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಅರ್ಬನ್ ಕ್ರೂಸರ್ ಹೈರಿಡರ್ (Urban Cruiser Hyryder) ಎಸ್‌ಯುವಿಯು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.

ಸದ್ಯ ಟೊಯೊಟಾ ಇಂಡಿಯಾ (Toyota India), ಮೇ 1, 2024ಕ್ಕೆ ಅನ್ವಯವಾಗುವಂತೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 'ಅರ್ಬನ್ ಕ್ರೂಸರ್ ಹೈರಿಡರ್' ಕಾರು ಪಡೆದಿರುವ ಕಾಯುವಿಕೆ ಅವಧಿ (Waiting Period) ಕುರಿತ ವಿವರವನ್ನು ಬಹಿರಂಗಗೊಳಿಸಿದೆ. ಈ ಎಸ್‌ಯುವಿಯ ಪೆಟ್ರೋಲ್ (ನಿಯೋ ಡ್ರೈವ್ - Neo Drive) ರೂಪಾಂತರಗಳು ಕೊಂಚ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿವೆ. ನೀವು ಇವತ್ತು ಬುಕ್ಕಿಂಗ್ ಮಾಡಿದರೂ ಸುಮಾರು 6 ತಿಂಗಳ ನಂತರ ವಿತರಣೆಯಾಗುತ್ತವೆ.

Toyota Urban Cruiser Hyryder suv may 2024 waiting period revealed

ಆದಾಗ್ಯೂ, ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿಯ ಹೈಬ್ರಿಡ್ (Hybrid) ಮಾದರಿಗಳನ್ನು ಸ್ವಲ್ಪ ಬೇಗನೆ ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದು. ಈ ಕಾರುಗಳು 2 ತಿಂಗಳ ಬಳಿಕ ಡಿಲೆವರಿಯಾಗುತ್ತವೆ. ಗರಿಷ್ಠ ಮೈಲೇಜ್ ನೀಡುವ ಸಿಎನ್‌ಜಿ (Cng) ಆವೃತ್ತಿಗಳನ್ನು ಖರೀದಿಸಲು ಬಯಸಿದರೆ, ಕನಿಷ್ಠ ಪಕ್ಷ 5 ತಿಂಗಳು ಕಾಯಲೇಬೇಕು.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ (Toyota Urban Cruiser Hyryder) ಎಸ್‌ಯುವಿಯು ರೂ.11.14 ಲಕ್ಷದಿಂದ ರೂ.20.19 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಅತ್ಯುತ್ತಮ ವಿನ್ಯಾಸವನ್ನು ಪಡೆದಿರುವ ಈ ಕಾರು, ಇ, ಎಸ್, ಸಿ, ವಿ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಅರ್ಬನ್ ಕ್ರೂಸರ್ ಹೈರಿಡರ್ ಕಾರು, 1.5-ಲೀಟರ್ ಪೆಟ್ರೋಲ್ (ನಿಯೋ ಡ್ರೈವ್) ಎಂಜಿನ್, ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್‌ನೊಂದಿಗೂ ಸಿಗುತ್ತದೆ. 2WD (ಟೂ ವೀಲ್ ಡ್ರೈವ್) ಹಾಗೂ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದ್ದು, 19.39 ರಿಂದ 27.97 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

ನೂತನ ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿಯು ಕೆಫೆ ವೈಟ್, ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್ ಸೇರಿದಂತೆ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್‌ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಅರ್ಬನ್ ಕ್ರೂಸರ್ ಹೈರಿಡರ್ ಕಾರು ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 6-ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಲ್ ವೀಲ್ ಡಿಸ್ಕ್ ಬ್ರೇಕ್ಸ್ ಅನ್ನು ಪಡೆದಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್ ಎಸ್‌ಯುವಿಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, May 17, 2024, 10:43 [IST]
English summary
Toyota urban cruiser hyryder suv may 2024 waiting period revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+