ದೀಪಾವಳಿಗೆ ಭರ್ಜರಿ ಪ್ಲಾನ್ ಮಾಡುತ್ತಿರುವ ಹೋಂಡಾ: ಅಮೇಜ್ ಕಾರಿನ್ನು ಎರಡು ಆಯ್ಕೆಗಳಲ್ಲಿ ಮಾತ್ರ ಲಭ್ಯ!
ಹೋಂಡಾ, ಭಾರತದಲ್ಲಿ ಮಾರಾಟ ಮಾಡುತ್ತಿರುವ ಕೆಲವೇ ಕೆಲವು ಕಾರು ಮಾದರಿಗಳಲ್ಲಿ ಹೋಂಡಾ ಅಮೇಜ್ ಸಹ ಒಂದು. ಹೋಂಡಾ ಕಂಪನಿಯ ಎಂಟ್ರಿ ಲೆವೆಲ್ ಸೆಡಾನ್ ಕಾರಾಗಿರುವ ಹೋಂಡಾ ಅಮೇಜ್ ಕಾರೆಂದರೆ ಬಹಳಷ್ಟು ಮಂದಿಗೆ ಅಚ್ಚು ಮೆಚ್ಚು. ಇದೀಗ ಸದ್ಯದಲ್ಲೇ ಅಮೇಜ್‌ನ ಹೊಸ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಇದೇ ವರ್ಷ ಕಾಲಿಡಲಿದೆ.
ಹೌದು, ಈ ವರ್ಷದ ದೀಪಾವಳಿ ಸಮಯದಲ್ಲಿ ಹೋಂಡಾ, ತನ್ನ ಅಮೇಜ್ (Honda Amaze) ಕಾರಿನ ಹೊಸ ಮಾದರಿಯನ್ನು ಭಾರತದಲ್ಲಿ ಲಾಂಚ್ ಮಾಡಲಿದ್ದು ಈ ಹಿನ್ನಲೆಯಲ್ಲಿ ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಅಮೇಜ್‌ನ ವೇರಿಯಂಟ್ ಅನ್ನು ಒಂದೊಂದಾಗೇ ಕಡಿತಗೊಳಿಸುತ್ತಿದ್ದು, ಇದೀಗ ಅಮೇಜ್ ಕೇವಲ ಎರಡು ವೇರಿಯಂಟ್‌ನಲ್ಲಿ ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ.

ಮಾಹಿತಿಗಳ ಪ್ರಕಾರ ಹೋಂಡಾ ಇನ್ನು ಮುಂದೆ ಭಾರತೀಯ ಮಾರುಕಟ್ಟೆಯಲ್ಲಿ ಅಮೇಜ್ ಕಾರು ಮಾದರಿಯ ಎಸ್ ಮತ್ತು ವಿಎಕ್ಸ್ ವೇರಿಯಂಟ್‌ಗಳ್ನು ಮಾತ್ರ ಮಾರಾಟ ಮಾಡಲಿದೆ. ಈ ಎರಡೂ ವೇರಿಯಂಟ್‌ಗಳಿಗೆ ಸುಮಾರು 5,500 ರೂಗಳಷ್ಟು ಹೆಚ್ಚಾಗಿದ್ದು, ದೀಪಾವಳಿಯಲ್ಲಿ ಹೊಸ ಅಮೇಜ್ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಹೋಂಡಾ ಈ ನಡೆಗೆ ಮುಂದಾಗಿದೆ.
Honda ಕಂಪನಿಯು 2013 ರಲ್ಲಿ ಮೊದಲ ಬಾರಿಗೆ ತನ್ನ Amaze ಕಾರ್ ಅನ್ನು ಬಿಡುಗಡೆಗೊಳಿಸಿತು. ಬಿಡುಗಡೆಯಾದ ನಂತರ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ Maruti Suzuki Dzire, Ford Aspire ಕಾರುಗಳಿಗೆ ಪೈಪೋಟಿ ನೀಡುತ್ತಿತ್ತು. ಹಲವಾರು ಫೀಚರ್ ಗಳೊಂದಿಗೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದ ಕಾರಣಕ್ಕೆ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು.

ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಹೋಂಡಾ ಅಮೇಜ್‌ನ ಡಿಸೈನ್‌ಗಳನ್ನು ನೋಡುವುದಾದರೆ, ಈ ಕಾರಿನಲ್ಲಿ ಎಲ್ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್ ಹೊಂದಿರುವ ಒಆರ್‌ವಿಎಂಗಳನ್ನು ನೀಡಲಾಗಿದೆ. ಈ ಮಿರರ್'ಗಳು ಎಲೆಕ್ಟ್ರಿಕ್ ಅಡ್ಜಸ್ಟಬಲ್ ಆಗಿದ್ದು ಫೋಲ್ಡ್ ಮಾಡಬಹುದು. ಕ್ರೋಮ್ ಬಣ್ಣದಲ್ಲಿರುವ ಡೋರ್ ಹ್ಯಾಂಡಲ್‌ಗಳು ಈ ಕಾರಿಗೆ ಪ್ರೀಮಿಯಂ ಅನುಭವವನ್ನು ನೀಡುತ್ತವೆ.
ಇನ್ನು ಈ ಕಾರಿನ ಹಿಂಭಾಗದಲ್ಲಿ ಸಿ ಶೇಪಿನಲ್ಲಿರುವ ಎಲ್ಇಡಿ ಟೇಲ್ ಲ್ಯಾಂಪ್, ಸಣ್ಣ ಬೂಟ್ ಲಿಪ್ ನೀಡಲಾಗಿದೆ. ರೇರ್ ಬಂಪರ್‌ನ ಕೆಳಭಾಗದಲ್ಲಿರುವ ಕ್ರೋಮ್ ಸ್ಟ್ರಿಪ್ ಈ ಕಾರಿನ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸುತ್ತದೆ. ಈ ಕಾರಿನ ಸೀಟುಗಳು, ಡೋರ್ ಹಾಗೂ ಡ್ಯಾಶ್ ಬೋರ್ಡ್ ಕೆಳಗಿನ ಭಾಗಗಳು ಬೀಜ್ ಬಣ್ಣವನ್ನು ಹೊಂದಿವೆ. ಇವುಗಳ ಮೇಲಿನ ಭಾಗ ಹಾಗೂ ಸೆಂಟರ್ ಕನ್ಸೋಲ್ ಕಪ್ಪು ಬಣ್ಣವನ್ನು ಹೊಂದಿವೆ.
ಈ ಕಾರಿನ ಎಂಜಿನ್ ನೋಡುವುದಾದೆ, ಟ್ರೋಲ್ ಮಾದರಿಯು 88 ಬಿಹೆಚ್‌ಪಿ ಪವರ್ ಹಾಗೂ 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ಡೀಸೆಲ್ ಮಾದರಿಯು 98.6 ಬಿಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಸಿವಿಟಿ ಹೊಂದಿರುವ ಮಾದರಿಯು 78.9 ಬಿಹೆಚ್‌ಪಿ ಪವರ್ ಹಾಗೂ 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಕಾರು ಇಕೋ ಲೈಟ್ ನಲ್ಲಿ ಸುಮಾರು 85 ಕಿ.ಮೀಗಳವರೆಗಿನ ವೇಗದಲ್ಲಿ ಚಲಿಸುತ್ತದೆ. ಇದರಿಂದ ಗರಿಷ್ಠ ಇಂಧನ ದಕ್ಷತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಎಸ್ ಮೋಡ್‌ನಲ್ಲಿ ಕಾರು ದೀರ್ಘಾವಧಿಯವರೆಗೆ ಗೇರ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಥ್ರೊಟಲ್ ರೆಸ್ಪಾನ್ಸ್ ಗಮನಾರ್ಹವಾದ ಅಂತರದಿಂದ ತೀಕ್ಷ್ಣವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








