ಯೋಗಿ ಸರ್ಕಾರ ಮಹತ್ವದ ಹೆಜ್ಜೆ: ಅಯೋಧ್ಯೆಯಲ್ಲಿ ಭಕ್ತರಿಗಾಗಿ ಕೈಗೆಟುಕುವ ಉಬರ್ ಇವಿಗಳಿಗೆ ಚಾಲನೆ

ಭಾರತದ ಪ್ರಮುಖ ರೈಡ್ ಹೇಲಿಂಗ್ ಅಪ್ಲಿಕೇಶನ್ ಆಗಿರುವ ಉಬರ್‌ನ EV ಆಟೋ ರಿಕ್ಷಾ ಸೇವೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇವಾಲಯದ ಪಟ್ಟಣವಾದ ಅಯೋಧ್ಯೆಯಲ್ಲಿ ಚಾಲನೆ ನೀಡಿದ್ದಾರೆ. ಅಯೋಧ್ಯೆಗೆ ಕಾಲಿಡುವ ಭಕ್ತರಿಗೆ ಅನುಕೂಲಕರ, ಕೈಗೆಟುಕುವ ಮತ್ತು ಸುಸ್ಥಿರ ಚಲನಶೀಲತೆ ಪರಿಹಾರಗಳನ್ನು ನೀಡುವುದಾಗಿ ಹೇಳಿದ್ದಾರೆ.

EV ಆಟೋಗಳ ಬಿಡುಗಡೆಯ ನಂತರ, 'ಉಬರ್' ತನ್ನ UberGo ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಉತ್ತರ ಪ್ರದೇಶದ ಜನಪ್ರಿಯ ಸ್ಥಳಗಳಿಂದ ಅಯೋಧ್ಯೆಗೆ ಎಲ್ಲಾ ಅಂತರ-ನಗರ ಪ್ರಯಾಣ ಅಗತ್ಯಗಳನ್ನು ಪೂರೈಸಲಿದೆ. ಈ ಸಮಗ್ರ ವಿಧಾನವು ದೇವಾಲಯದ ನಗರವನ್ನು ವಿವಿಧ ಸ್ಥಳಗಳಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಉತ್ತರ ಪ್ರದೇಶದ ಪ್ರವಾಸೋದ್ಯಮ, ಪ್ರಯಾಣ ಮತ್ತು ಆರ್ಥಿಕ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ ಎಂದು ಉಬರ್ ಹೇಳಿಕೊಂಡಿದೆ.

uber-flags-off-ev-autos-in-temple-city-ayodhya

ಅಯೋಧ್ಯೆಯ ವಿಸ್ತರಣೆಯು ಭಾರತದಲ್ಲಿ ಉಬರ್‌ನ ಬೆಳವಣಿಗೆಯ ಯೋಜನೆಗಳೊಂದಿಗೆ ಹೊಂದಿಕೆಯಾಗುತ್ತದೆ. ಹೆಚ್ಚು ಪ್ರಾದೇಶಿಕ ಮಾರುಕಟ್ಟೆಗಳಿಗೆ ತನ್ನ ಹೆಜ್ಜೆಗುರುತು ಮತ್ತು ಉತ್ಪನ್ನದ ಕೊಡುಗೆಗಳನ್ನು ಹೆಚ್ಚಿಸಲು ಕಂಪನಿಯ 'ಇಂಡಿಯಾ ಟು ಭಾರತ್' ಕಾರ್ಯತಂತ್ರವನ್ನು ಪ್ರತಿಬಿಂಬಿಸುತ್ತದೆ. Uber ದೇಶಾದ್ಯಂತದ ಪ್ರಯಾಣಿಕರಿಗೆ ಬಹು-ಮಾದರಿ Uber ಅನುಭವವನ್ನು ತರಲು ಬದ್ಧವಾಗಿದೆ ಎಂದು ಕಂಪನಿ ಹೇಳಿದೆ.

ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪ್ರಭಜೀತ್ ಸಿಂಗ್ ಮಾತನಾಡಿ, ಅಯೋಧ್ಯೆಯಲ್ಲಿ ನಮ್ಮ ಸೇವೆಗಳನ್ನು ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ. ಈ ವಿಸ್ತರಣೆಯೊಂದಿಗೆ, ನಾವು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ವರ್ಧಿತ ಚಲನಶೀಲತೆಯ ಆಯ್ಕೆಗಳನ್ನು ಒದಗಿಸುತ್ತಿದ್ದೇವೆ. ಜೊತೆಗೆ ಇಲ್ಲಿನ ಸ್ಥಳೀಯರಿಗೆ ಗಳಿಕೆಯ ಅವಕಾಶಗಳನ್ನು ಸಹ ಒದಗಿಸಿದ್ದೇವೆ. ನಗರದ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಲು, ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ ಎಂದರು.

uber-flags-off-ev-autos-in-temple-city-ayodhya

ಟಾಟಾ ಎಲೆಕ್ಟ್ರಿಕ್ ಕಾರುಗಳ ಎಂಟ್ರಿ, ಕೇವಲ ರೂ.250: ಮೊದಲ ಹಂತವಾಗಿ ಅಯೋಧ್ಯೆ - ಲಕ್ನೋ ನಡುವೆ ಇಂಟರ್‌ಸಿಟಿ ಪ್ರಯಾಣಕ್ಕಾಗಿ 15 ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಇತ್ತೀಚೆಗಷ್ಟೆ ಟ್ಯಾಕ್ಸಿ ಸೇವೆಗೆ ನಿಯೋಜಿಸಲಾಗಿದೆ. ಶೀಘ್ರ ಅಯೋಧ್ಯೆಯ ಪ್ರಮುಖ ಸ್ಥಳಗಳಲ್ಲಿಯೂ ಹೆಚ್ಚಿನ ಎಲೆಕ್ಟ್ರಿಕ್ ಕಾರುಗಳು ಯಾತ್ರಿಕರಿಗೆ ಲಭ್ಯವಿರುವಂತೆ ಮಾಡಲು ಇಲ್ಲಿನ ಆಡಳಿತ ನಿರ್ಧರಿಸಿದೆ.

ಸೂರಜ್ ಕುಂಡ್, ಸರಯು ನದಿ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವವರೂ ಮೊಬೈಲ್ ಅಪ್ಲಿಕೇಶನ್‌ ಮೂಲಕವೇ ಈ ಕಾರುಗಳನ್ನು ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲು ಯೋಜಿಸಿದೆ. ಅಯೋಧ್ಯೆ ರೈಲ್ವೆ ಸ್ಟೇಷನ್ (Ayodhya Railway station)ಗೆ ಆಗಮಿಸುವ ಯಾತ್ರಿಕರಿಗಾಗಿ ಈ ಎಲೆಕ್ಟ್ರಿಕ್ ಕಾರುಗಳ ಮೂಲಕ ಪ್ರಾಯೋಗಿಕ ಸೇವೆಯನ್ನು ಆರಂಭಿಸಲಾಗಿದೆ.

uber-flags-off-ev-autos-in-temple-city-ayodhya

ಪ್ರಯಾಣಿಕರು, 10 ಕಿಲೋಮೀಟರ್‌ಗಳಿಗೆ 250 ರೂಪಾಯಿ, 20 ಕಿಲೋಮೀಟರ್‌ಗಳಿಗೆ 400 ರೂಪಾಯಿ ಹಾಗೂ 12 ಗಂಟೆಗೆ 3000 ರೂಪಾಯಿ ಬಾಡಿಗೆಯನ್ನು ಪಾವತಿಬೇಕು. ಭಕ್ತರು ಸಹ ಎಲೆಕ್ಟ್ರಿಕ್ ಕಾರು ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ, ಅಯೋಧ್ಯೆಯಲ್ಲಿ ಯಾತ್ರಿಕರಿಗಾಗಿ ಟ್ಯಾಕ್ಸಿ ಸೇವೆಗೆ ಟಾಟಾ ಟಿಗೂರ್ ಇವಿ (Tata Tigor EV) ಬಳಕೆ ಮಾಡಲಾಗುತ್ತಿದೆ.

ಈ ಇವಿ ಪರಿಚಯದ ಹೊರತಾಗಿ, ಕಳೆದ ದೀಪೋತ್ಸವದಿಂದ ಇಲ್ಲಿ ಇ-ಕಾರ್ಟ್ ಸೇವೆಯೂ ಲಭ್ಯವಿದೆ. ಇದರಲ್ಲಿ 6 ಮಂದಿ ಪ್ರಯಾಣಿಸಬಹುದಾಗಿದ್ದು, ಹನುಮಾನ್ ಗರ್ಹಿ, ಶ್ರೀರಾಮ ಜನ್ಮಭೂಮಿ, ಸೇರಿದಂತೆ ಇತರೆ ಸ್ಥಳಗಳಿಗೆ ವಯಸ್ಸಾದ ಭಕ್ತರನ್ನು ಕರೆದುಕೊಂಡು ಹೋಗಲಾಗುತ್ತದೆ. ಒಟ್ಟಾರೆ ಅಯೋಧ್ಯೆಗೆ ಭೇಟಿ ನೀಡುವ ಎಲ್ಲಾ ಭಕ್ತರಿಗೆ ಸುಲಭ ಪ್ರಯಾಣ ಆಯ್ಕೆಗಳನ್ನು ಒದಗಿಸಲು ಯೋಗಿ ಸರ್ಕಾರ ಮುಂದಾಗಿದೆ.

uber-flags-off-ev-autos-in-temple-city-ayodhya

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 17, 2024, 13:22 [IST]
English summary
Uber flags off ev autos in temple city ayodhya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+