Honda: ಎಲಿವೇಟ್ ಸೇರಿದಂತೆ ಹೋಂಡಾ ಕಾರುಗಳಿಗೆ ಭಾರೀ ರಿಯಾಯಿತಿ.. ರೂ.7 ಲಕ್ಷ ಆರಂಭಿಕ ಬೆಲೆ
ದೇಶಾದ್ಯಂತ ಹಲವು ಹೋಂಡಾ (Honda) ಡೀಲರ್‌ಶಿಪ್‌ಗಳು, ಈ ಏಪ್ರಿಲ್ ತಿಂಗಳು ವಿವಿಧ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿವೆ. ಯುಗಾದಿ ಹಾಗೂ ಶ್ರೀ ರಾಮ ನವಮಿ ಹಬ್ಬದಂದು ಮನೆಗೆ ಹೊಚ್ಚ ಹೊಸ ಕಾರನ್ನು ತರಬೇಕು ಎಂದಿರುವ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಮೊದಲಿಗೆ ಹೋಂಡಾ ಅಮೇಜ್ (Honda Amaze) ಕಾರು ಪಡೆದಿರುವ ಡಿಸ್ಕೌಂಟ್ ಆಫರ್ ಕುರಿತು ಮಾತನಾಡೋಣ. ಇದರ 'ಎಲೈಟ್ಎಡಿಷನ್' ಒಟ್ಟು ರೂ.83,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ರೂ.30,000 ಸ್ಪೆಷಲ್ ಎಡಿಷನ್ ಬೆನಿಫಿಟ್, ರೂ.20,000 ಸ್ಪೆಷಲ್ ಕಾರ್ಪೊರೇಟ್ ಸ್ಕೀಮ್ ಡಿಸ್ಕೌಂಟ್, ರೂ.3,000 ಕಾರ್ಪೊರೇಟ್ ರಿಯಾಯಿತಿ, ರೂ.6,000 ವಿನಿಮಯ ಬೋನಸ್, ರೂ.4,000 ಲಾಯಲ್ಟಿ ಬೋನಸ್ ಹಾಗೂ ರೂ.20,000 ನಗದು ರಿಯಾಯಿತಿಗಳು ಸೇರಿವೆ.

ಅಮೇಜ್ ಕಾರಿನ 'ಎಸ್' ಮತ್ತು 'ವಿಎಕ್ಸ್' ಮಾದರಿಗಳು ರೂ.53,000 ಹಾಗೂ ಆರಂಭಿಕ ಆವೃತ್ತಿ 'ಇ' ರೂ.43,000 ರಿಯಾಯಿತಿಯನ್ನು ಹೊಂದಿದೆ. ಈ ಅಮೇಜ್, ರೂ.7.20 ಲಕ್ಷದಿಂದ ರೂ.9.96 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, 18.3 - 18.6 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೋಂಡಾ ಸಿಟಿ (Honda City) ಸೆಡಾನ್ ನ 'ಎಲಿಗೆಂಟ್' ಮಾದರಿಯು ಒಟ್ಟು ರೂ.71,500 ರಿಯಾಯಿತಿಯನ್ನು ಹೊಂದಿದೆ. ಇದರಲ್ಲಿ ರೂ.20,000 ನಗದು ರಿಯಾಯಿತಿ, ರೂ.4,000 ಲಾಯಲ್ಟಿ ಬೋನಸ್, ರೂ.6,000 ವಿನಿಯಮ ಬೋನಸ್, ರೂ.5,000 ಕಾರ್ಪೊರೇಟ್ ಡಿಸ್ಕೌಂಟ್, ರೂ.36,500 ಸ್ಪೆಷಲ್ ಎಡಿಷನ್ ಡಿಸ್ಕೌಂಟ್ ಅನ್ನು ಒಳಗೊಂಡಿದೆ. 'ಝಡ್ಎಕ್ಸ್' ರೂಪಾಂತರ ರೂ.45,000 ಹಾಗೂ ಇತರೆ ಮಾದರಿಗಳು ರೂ.35,000 ರವರೆಗೆ ರಿಯಾಯಿತಿಯನ್ನು ಹೊಂದಿದೆ. ಹೈಬ್ರಿಡ್ ಆವೃತ್ತಿ ರೂ.65,000 ತನಕ ಡಿಸ್ಕೌಂಟ್ ಪಡೆದಿದೆ.

ಹೋಂಡಾ ಸಿಟಿ ರೂ.11.82 ಲಕ್ಷದಿಂದ ರೂ.16.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಇದು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 17.8 - 18.4 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್, ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೋಂಡಾದ ಜನಪ್ರಿಯ ಎಲಿವೇಟ್ (Elevate) ಎಸ್‌ಯುವಿ ಒಟ್ಟು ರೂ.19,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಇದರಲ್ಲಿ ರೂ.10,000 ನಗದು ರಿಯಾಯಿತಿ, ರೂ.4,000 ಲಾಯಲ್ಟಿ ಬೋನಸ್, ರೂ.5,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಪಡೆದಿದೆ. ನೂತನ ಎಲಿವೇಟ್ ಕಾರು ರೂ.11.69 ಲಕ್ಷದಿಂದ ರೂ.16.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ಈ ಹೋಂಡಾ ಎಲಿವೇಟ್ ಎಸ್‌ಯುವಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 15.31 - 16.92 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 5 ಜನರು ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








