Upcoming cars: 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಪವರ್‌ಫುಲ್ ಕಾರುಗಳು ಬಿಡುಗಡೆಗೆ ಸಜ್ಜು!

ಭಾರತೀಯ ವಾಹನ ಉದ್ಯಮದಲ್ಲಿ ತಯಾರಕರು 10 ಲಕ್ಷ ರೂ. ಗಿಂತ ಕಡಿಮೆ ಬೆಲೆಯ ಕಾರುಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಏಕೆಂದರೆ ತಮ್ಮ ಮೊದಲ ಕಾರನ್ನು ಖರೀದಿಸುವ ಜನರು ಸಾಮಾನ್ಯವಾಗಿ ಬಜೆಟ್ ಕಾರುಗರಳನ್ನು ಹೆಚ್ಚಾಗಿ ನೋಡುತ್ತಾರೆ. ಈ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು, ಕಾರು ತಯಾರಕರು ಯಾವಾಗಲೂ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ನೋಡುತ್ತಾರೆ. ಈ ಲೇಖನದಲ್ಲಿ ನಾವು ದೇಶಿಯ ಮಾರುಕಟ್ಟೆಯಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಪ್ರಮುಖ ಕಾರುಗಳನ್ನು ಇಲ್ಲಿ ನೋಡೋಣ.

ಕಿಯಾ ಸೈರಸ್: ಕಿಯಾ ಪ್ರಸ್ತುತ ದೇಶಿಯ ಮಾರುಕಟ್ಟೆಗಾಗಿ ಹೊಸ ಸಬ್ - 4 -ಮೀಟರ್‌ ಎಸ್‌ಯುವಿ (ಕಿಯಾ ಸೈರಸ್) ಅಭಿವೃದ್ಧಿಪಡಿಸುತ್ತಿದೆ, ಇದು ಮುಂದಿನ ವರ್ಷದ ಆರಂಭದಲ್ಲಿ ಪಾದಾರ್ಪಣೆ ಮಾಡಲಿದೆ. ಇದರ ಆರಂಭಿಕ ಬೆಲೆಯು ರೂ.10 ಲಕ್ಷಕ್ಕಿಂತ ಕಡಿಮೆ ಇರಲಿದೆ. ಹಾಗೆಯೇ ಸೊನೆಟ್ ಮತ್ತು ಸೆಲ್ಟೋಸ್ ನಡುವೆ ಇರಲಿದೆ. ಇದನ್ನು ಎಲೆಕ್ಟ್ರಿಕ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಮಾರಾಟ ಮಾಡಲಾಗುವುದು ಎಂದು ವರದಿಯಾಗಿದೆ.

upcoming-cars-under-10-lakhs-maruti-honda-kia-skoda

ಸ್ಕೋಡಾ ಕೈಲಾಕ್: ಬಹುನಿರೀಕ್ಷಿತ ಸ್ಕೋಡಾ ಕೈಲಾಕ್ ಮುಂಬರುವ ನವೆಂಬರ್ 6 ರಂದು ಪಾದಾರ್ಪಣೆ ಮಾಡಲಿದೆ. ಹೊಸ ಕೈಲಾಕ್ 1.0 - ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 114 ಬಿಹೆಚ್ ಪವರ್ ಮತ್ತು 178 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲಿದೆ. ಈ ಎಂಜಿನ್ 6 - ಸ್ಪೀಡ್ ಮ್ಯಾನುವಲ್ ಮತ್ತು 6 - ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ.

ಹೊಸ ಮುಂಬರಲಿರುವ ಸ್ಕೋಡಾ ಕೈಲಾಕ್ ಕಾರು ಸಬ್ - 4 - ಮೀಟರ್‌ ಎಸ್‌ಯುವಿ ವಿಭಾಗದಲ್ಲಿ ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ, ಟಾಟಾ ನೆಕ್ಸಾನ್ ಮತ್ತು ಕಿಯಾ ಸೊನೆಟ್‌ಗೆ ಪೈಪೋಟಿ ನೀಡಲಿದೆ. ಇದು ಸ್ಕೋಡಾ ಕುಶಾಕ್ ನೊಂದಿಗೆ ಸಾಕಷ್ಟು ವಿನ್ಯಾಸ ಭಾಗಗಳನ್ನು ಹಂಚಿಕೊಳ್ಳುತ್ತದೆ ಎಂದು ತಿಳಿದು ಬಂದಿದೆ.

upcoming-cars-under-10-lakhs-maruti-honda-kia-skoda

ಹೋಂಡಾ ಅಮೇಜ್: ಹೊಸ ತಲೆಮಾರಿನ ಹೋಂಡಾ ಅಮೇಜ್ ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ 1.2 - ಲೀಟರ್ ಐ-ವಿಟಿಇಸಿ ಎಂಜಿನ್ ಇರಲಿದ್ದು, 90 ಬಿಹೆಚ್ ಪವರ್ ಮತ್ತು 110 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ, ಇದು ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದೆ.

ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್: ಹೊಸ ತಲೆಮಾರಿನ ಡಿಜೈರ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆ. ಮುಂದಿನ ತಿಂಗಳು ಅಂದರೆ ನವೆಂಬರ್ 2024 ರಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಅದಕ್ಕೂ ಮುನ್ನ ಮಾರುತಿ ಸುಜುಕಿ ಶೀಘ್ರದಲ್ಲೇ ಕಾಂಪ್ಯಾಕ್ಟ್ ಸೆಡಾನ್ ಅನ್ನು ಪೂರ್ಣ ಪ್ರಮಾಣದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಿದೆ.

upcoming-cars-under-10-lakhs-maruti-honda-kia-skoda

ಹೊಸ ಡಿಜೈರ್ ನವೀಕರಿಸಿದ ವಿನ್ಯಾಸ, ಮರುನಿರ್ಮಾಣ ಮಾಡಿದ ಕ್ಯಾಬಿನ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ. ಹೊಸ ಸ್ವಿಫ್ಟ್‌ನಲ್ಲಿ ಸಿಗುವ 1.2 - ಲೀಟರ್ ಝಡ್-ಸೀರಿಸ್ ಪೆಟ್ರೋಲ್ ಎಂಜಿನ್ ಅನ್ನು ಇದರಲ್ಲು ನೀಡಲಾಗುವುದು. ಈ ಎಂಜಿನ್ ನೊಂದಿಗೆ 5 - ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹೊಸ ಡಿಜೈರ್ ಎಲೆಕ್ಟ್ರಿಕ್ ಸನ್‌ರೂಫ್ ಜೊತೆಗೆ ಬರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, October 26, 2024, 10:00 [IST]
English summary
Upcoming cars under 10 lakhs maruti honda kia skoda
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+