ಬರುತ್ತಿವೆ 7-ಸೀಟರ್ ಮದಗಜಗಳು: ಆಕರ್ಷಕ ಬೆಲೆ.. ಸಖತ್ ಮೈಲೇಜ್, ಲಕ್ಷುರಿ ಫೀಚರ್ಸ್

ಭಾರತದಲ್ಲಿ ದಿನದಂದ ದಿನಕ್ಕೆ 7-ಸೀಟರ್ ಕಾರುಗಳ (7-Seater Cars) ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು 7-ಸೀಟರ್ ಕಾರುಗಳನ್ನು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇದರಿಂದ ಭಾರತದಲ್ಲಿ 7-ಸೀಟರ್ ಮಾದರಿಗಳ ವಿಭಾಗದಲ್ಲಿ ಗ್ರಾಹಕರಿಗೆ ಹಲವು ಆಯ್ಕೆಗಳಿವೆ. ಭಾರತದಲ್ಲಿ ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ಹೊಸ 7-ಸೀಟರ್ ಬರುತ್ತಿವೆ. ಹೊಸದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಕಾರ್ನಿವಲ್, ಕಿಯಾ EV9 ಬಿವೈಡಿ ಇಮ್ಯಾಕ್ಸ್ 7 ಮತ್ತು ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ 7-ಸೀಟರ್ ಕಾರುಗಳ (7-Seater Cars) ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಿಯಾ ಕಾರ್ನಿವಲ್: ಕಿಯಾ ಇಂಡಿಯಾ ತನ್ನ ಜನಪ್ರಿಯ ಕಿಯಾ ಕಾರ್ನಿವಲ್ ಕಾರನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಜನರೇಷನ್ ಕಿಯಾ ಕಾರ್ನಿವಲ್ (Kia Carnival) ಮಾದರಿಯು 2024ರ ಅಕ್ಟೋಬರ್ 3 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಹೊಸ ಕಾರ್ನಿವಲ್ ಅನ್ನು 2023 ಆಟೋ ಎಕ್ಸ್‌ಪೋದಲ್ಲಿ KA4 ಕಾನ್ಸೆಪ್ಟ್ ಮಾದರಿಯಾಗಿ ಪ್ರದರ್ಶಿಸಿದ್ದರು.

7-Seater Cars

ಹೊಸ ಕಿಯಾ ಕಾರ್ನಿವಲ್ ಹಲವಾರು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ. ಹೊಸ ಕಿಯಾ ಕಾರ್ನಿವಲ್ ಕಾರಿನಲ್ಲಿ ಅದೇ 2.2 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 200 PS ಗರಿಷ್ಠ ಪವರ್ ಹಾಗೂ 440 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ

ಕಿಯಾ EV9: ಹೊಸ ಕಿಯಾ (Kia) ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಹೊಸ ಕಿಯಾ EV9 ಮಾದರಿಯು 2024ರ ಅಕ್ಟೋಬರ್ 3 ರಂದು ಬಿಡುಗಡೆಯಾಗಲಿದೆ. 7 ಸೀಟುಗಳ ಎಲೆಕ್ಟ್ರಿಕ್ ಎಸ್‍ಯುವಿಯು E-GMP (ಎಲೆಕ್ಟ್ರಿಕ್ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್) ಆರ್ಕಿಟೆಕ್ಚರ್ ಅನ್ನು ಆಧರಿಸಿದೆ ಮತ್ತು ಕಿಯಾ ಕಂಪನಿಯ ಇತ್ತೀಚಿನ ಬ್ಯಾಟರಿ ತಂತ್ರಜ್ಞಾನದೊಂದಿಗೆ ಬರಲಿದೆ.

7-Seater Cars

ಇಂಡಿಯಾ-ಸ್ಪೆಕ್ EV9 ಇನ್ನೂ ಬಹಿರಂಗವಾಗದಿದ್ದರೂ, ಜಾಗತಿಕವಾಗಿ 76.1kWh ಬ್ಯಾಟರಿಯೊಂದಿಗೆ ಸಿಂಗಲ್-ಮೋಟರ್ RWD, 99.8kWh ಬ್ಯಾಟರಿ ಮತ್ತು ಡ್ಯುಯಲ್-ಮೋಟರ್ RWD ರೂಪಾಂತರ ಎಂಬ ಮೂರು ಪವರ್‌ಟ್ರೇನ್‌ಗಳೊಂದಿಗೆ ನೀಡಲಾಗುತ್ತದೆ. ಭಾರತದಲ್ಲಿ ಕೂಡ ಇದೇ ರೀತಿಯ ಪವರ್‌ಟ್ರೇನ್‌ಗಳೊಂದಿಗೆ ಆಯ್ಕೆಯನ್ನು ನೀಡುವ ಸಾಧ್ಯತೆಗಳಿದೆ. ಇವಿಯ ಡ್ಯುಯಲ್-ಮೋಟಾರ್ RWD ಆವೃತ್ತಿಯು 379bhp ನ ಸಂಯೋಜಿತ ಪವರ್ ಅನ್ನು ಮತ್ತು ಸುಮಾರು 450 km ರೇಂಜ್ ಅನ್ನು ನೀಡುತ್ತದೆ.

ಬಿವೈಡಿ ಇಮ್ಯಾಕ್ಸ್: ಬಿವೈಡಿ (BYD) ಕಂಪನಿಯು ಜನಪ್ರಿಯ ಎಂಪಿವಿ ಟೊಯೊಟಾ ಇನ್ನೋವಾಗೆ (Toyota Innova) ಪ್ರಬಲವಾದ ಸ್ಪರ್ಧೆಯೊಡ್ಡಲು ನೂತನ ಎಲೆಕ್ಟ್ರಿಕ್ ಫ್ಯಾಮಿಲಿ ಕಾರನ್ನು ಪರಿಚಯಿಸಲು ಸಜ್ಜಾಗಿದೆ. ಬಿವೈಡಿ ಇಂಡಿಯಾ ಫೇಸ್‌ಲಿಫ್ಟೆಡ್ e6 ಎಂಪಿವಿಯನ್ನು ಬಿಡುಗಡೆ ಮಾಡಿದ ನಂತರ ಬಿವೈಡಿ eMax 7 ಎಂಬ ಹೆಸರನ್ನು ನೀಡಲಾಗುವುದು ಎಂದು ಘೋಷಿಸಿದೆ. ಈ ಬಿವೈಡಿ ಇಂಡಿಯಾ ಹೊಸ 'ಇಮ್ಯಾಕ್ಸ್ 7' ಎಲೆಕ್ಟ್ರಿಕ್ ಎಂಪಿವಿಯನ್ನು ಅಕ್ಟೋಬರ್ 8ರಂದು ಬಿಡುಗಡೆ ಮಾಡಲಿದೆ.

7-Seater Cars

ಇದೀಗ ಈ ಬಿವೈಡಿ ಇಮ್ಯಾಕ್ಸ್ 7 (BYD eMax 7) ಎಂಪಿವಿ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಬಿವೈಡಿ ಇಮ್ಯಾಕ್ಸ್7 ಕಾರು 6/ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ಈ ಕಾರು 71.8 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿಯನ್ನು ಪಡೆದಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 530 ಕಿಲೋಮೀಟರ್‌ವರೆಗೆ ಕ್ರಮಿಸುತ್ತದೆ.

ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್: ಹೊಸ ಎಂಜಿ ಮೋಟಾರ್ ಇಂಡಿಯಾ ಶೀಘ್ರದಲ್ಲೇ ಹೊಸ ಫುಲ್‌ಸೈಜ್ ಎಸ್‌ಯುವಿಯಾದ ಗ್ಲೋಸ್ಟರ್‌ನ ಫೇಸ್ ಲಿಫ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದು, ರಸ್ತೆ ಪರೀಕ್ಷೆಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಹೊಸ ಎಸ್‌ಯುವಿಯು ದೆಹಲಿ - ಜೈಪುರ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ. ಕಂಪನಿಯು ಫೇಸ್‌ಲಿಫ್ಟ್‌ ಆವೃತ್ತಿಯನ್ನು ಸೂಕ್ಷ್ಮ ಇಂಟೀರಿಯರ್ ಪರಿಷ್ಕರಣೆಗಳೊಂದಿಗೆ ಗಮನಾರ್ಹ ವಿನ್ಯಾಸ ನವೀಕರಣಗಳನ್ನು ನೀಡಿ ಬಿಡುಗಡೆ ಮಾಡಲಿದೆ.

ಈ ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ ಪವರ್‌ಟ್ರೇನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎನ್ನಲಾಗಿದೆ. ಅದೇ 2.0-ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ. ಈ ಎಂಜಿನ್ ಅನ್ನು ಟರ್ಬೊ ಮತ್ತು ಟ್ವಿನ್ ಟರ್ಬೊ ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುವುದು, ಇದು 213 ಬಿಹೆಚ್‌ಪಿ ಪವರ್ ಮತ್ತು 478 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Article Published On: Thursday, September 26, 2024, 16:48 [IST]
English summary
Upcoming launch confirmed 7 seater cars in india details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+