Maruti: 33 ಕಿ.ಮೀ ಮೈಲೇಜ್: ಕೇವಲ 6.70 ಲಕ್ಷ ಬೆಲೆಯ ಮಾರುತಿ ಕಾರು ಬಿಡುಗಡೆಗೆ ಸಜ್ಜು!
ಮಾರುತಿ ಸುಜುಕಿ ನೀಡುವ ಅತ್ಯಂತ ಯಶಸ್ವಿ ಕಾರುಗಳಲ್ಲಿ ಡಿಜೈರ್ ಕೂಡ ಒಂದು, ಕಳೆದ ಮೇ ತಿಂಗಳಲ್ಲಿ ಕಂಪನಿಯು ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಿದೆ. ಇದರ ಒಡಹುಟ್ಟಿದ ಕಾರೆಂದು ಜನಪ್ರಿಯತೆ ಪಡೆದಿರುವ ಡಿಜೈರ್‌ನ ಹೊಸ ತಲೆಮಾರಿನ ಕಾರು ಬಿಡುಗಡೆಯಾಗಬೇಕಿದೆ. ಕಂಪನಿಯು ಮೊನ್ನೆಯಷ್ಟೆ ನವೆಂಬರ್ 11 ರಂದು ಅಧಿಕೃತವಾಗಿ ಅನಾವರಣಗೊಳಿಸುವುದಾಗಿ ಘೋಷಿಸಿದೆ. ಆದ್ರೆ ಅದಕ್ಕೂ ಮುನ್ನ ಹೊಸ ಡಿಜೈರ್ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಈ ವಿಡಿಯೋದಲ್ಲಿ ಡಿಜೈರ್ ಹೇಗಿರಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
ಬೆಲೆ: ಜನಪ್ರಿಯ ಆಟೋಮೊಬೈಲ್ ಸುದ್ದಿಸಂಸ್ಥೆಯಾದ ಕಾರ್ ದೇಖೋ ಪ್ರಕಾರ, ಹೊಸ ಡಿಜೈರ್ ರೂ.6.70 (ಎಕ್ಸ್ ಶೋರೂಂ) ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಡಿಜೈರ್ 1.2-ಲೀಟರ್ ಮೂರು ಸಿಲಿಂಡರ್ ಝಡ್-ಸೀರಿಸ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆ ನೀಡಲಾಗುವುದು. ಹಾಗೆಯೇ ಡಿಜೈರ್ ಸಿಎನ್‌ಜಿ ಕೂಡ ಬಿಡುಗಡೆಯಾಗಲಿದೆ.

ವೈಶಿಷ್ಟ್ಯಗಳು: ಒಳಾಂಗಣ ವಿನ್ಯಾಸವು ಹೊಸ ಸ್ವಿಫ್ಟ್ ನಂತೆಯೇ ಇರಲಿದ್ದು, 9 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಮಲ್ಟಿ-ಇನ್ಫರ್‌ಮೇಷನ್ ಡಿಸ್ಪ್ಲೇ ಹೊಂದಿರುವ ಸೆಮ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 360-ಡಿಗ್ರಿ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಿಕ್ ಆಗಿ ಮಡಚಬಹುದಾದ ಮತ್ತು ಸರಿಹೊಂದಿಸಬಹುದಾದ ಒಆರ್‌ವಿಎಂಗಳು, ವೈರ್ ಲೆಸ್ ಫೋನ್ ಚಾರ್ಜರ್ ಮತ್ತು ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಇರಲಿದೆ.
ಮೈಲೇಜ್: ಮೊದಲಿನಿಂದಲೂ ಮಾರುತಿ ಕಾರುಗಳು ಮೈಲೇಜ್ ವಿಷಯದಲ್ಲಿ ರಾಜಿಯಾಗುವುದಿಲ್ಲ. ಅಂತಯೇ ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಕೂಡ ಪೆಟ್ರೋಲ್‌ನಲ್ಲಿ 25 ಕಿ.ಮೀ ಮೈಲೇಜ್ ಹಾಗೂ ಸಿಎನ್‌ಜಿನಲ್ಲಿ ಬರೋಬ್ಬರಿ 33 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹೊಸ ತಲೆಮಾರಿನ ಸ್ವಿಫ್ಟ್ ಕಂಪನಿ ಹೇಳಿಕೊಂಡಂತೆ ಇದೇ ಅಂಕಿಅಂಶಗಳ ಮೈಲೇಜ್ ನೀಡುತ್ತಿದೆ.

ಸುರಕ್ಷತೆ: ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ತಲೆಮಾರಿನ ಮಾರುತಿ ಡಿಜೈರ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ), ಆರು ಏರ್ ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಎರಡನ್ನೂ ಒಳಗೊಂಡಿದೆ.
ವಿನ್ಯಾಸ: ಮಾರುತಿ ಕಂಪನಿಯು ಡಿಜೈರ್‌ನ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಿದೆ. ಮತ್ತೊಂದು ಪ್ರಮುಖಂಶವೆಂದರೆ ಸಿಂಗಲ್ ಪ್ಯಾನಲ್ ಸನ್‌ರೂಫ್ ಕೂಡ ನೀಡಲಾಗಿದೆ. ಎರಡು ಹೊಸ ಎಲ್ಇಡಿ ಹೆಡ್ ಲ್ಯಾಂಪ್‌ಗಳನ್ನು ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಟರ್ನ್ ಇಂಡಿಕೇಟರ್‌ಗಳೊಂದಿಗೆ ಜೋಡಿಸಲಾಗಿದೆ. ಸುಜುಕಿ ಲೋಗೊ ಹೊಂದಿರುವ ಹೊಸ ಗ್ರಿಲ್ ಮತ್ತು ಪಿಯಾನೋ ಬ್ಲ್ಯಾಕ್ ಮತ್ತು ಕ್ರೋಮ್ ಎಲಿಮೆಂಟ್‌ಗಳನ್ನು ಒಳಗೊಂಡಿರುವ ಮುಂಭಾಗದ ಬಾಕ್ಸಿ ವಿನ್ಯಾಸವನ್ನು ನೀಡಲಾಗಿದೆ.

ಸೈಡ್‌ನಲ್ಲಿ ಮೆಟಲ್ ಫಿನಿಶ್ ವಿಂಡೋ ಸಿಲ್‌ಗಳು ಮತ್ತು ಹೊಸ ಡ್ಯುಯಲ್ - ಟೋನ್ ಅಲಾಯ್ ವೀಲ್‌ಗಳೊಂದಿಗೆ ಡಿಸೈನ್ ಮಾಡಲಾಗಿದೆ. ಫಾಗ್ ಲ್ಯಾಂಪ್ ಅನ್ನು ಶೈನಿ ಬ್ಲಾಕ್ ಬೆಜೆಲ್ ಒಳಗೆ ಇರಿಸಲಾಗಿದ್ದು, ಗ್ರಿಲ್ ಮತ್ತು ಏರ್ ಡ್ಯಾಮ್ ಅನ್ನು ಫ್ಲಾಟ್ ಸ್ಲಾಟ್‌ಗಳೊಂದಿಗೆ ಬ್ಲಾಕ್-ಔಟ್ ಅಸೆಂಬ್ಲಿಯೊಳಗೆ ಇರಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications