ಮಾರುಕಟ್ಟೆ ಶೇಕ್: ಬಿಡುಗಡೆಗೆ ಸಜ್ಜಾದ ಹೊಸ ಟಾಟಾ ಪೆಟ್ರೋಲ್ ಎಸ್‌ಯುವಿಗಳು
ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ತನ್ನ ಪ್ರಮುಖ ಎಸ್‍ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿಯನ್ನು ಡೀಸೆಲ್ ಎಂಜಿನ್‌ಗಳೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಗ್ರಾಹಕರ ಬೇಡಿಕೆ ಪೆಟ್ರೋಲ್ ಎಸ್‍ಯುವಿ ಮಾದರಿಗಳಾಗಿತ್ತು. ಇದೀಗ ಗ್ರಾಹಕರ ಬೇಡೀಕೆಯನ್ನು ಪ್ಯೂರೈಸಲು ಟಾಟಾ ಕಂಪನಿಯು ಶೀಘ್ರದಲ್ಲೇ ಹ್ಯಾರಿಯರ್ ಮತ್ತು ಸಫಾರಿಯನ್ನು ಪೆಟ್ರೋಲ್ ಎಸ್‍ಯುವಿಗಳಾಗಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಬರಲಿರುವ ಎಲ್ಲಾ ಟಾಟಾ ಮೋಟಾರ್ಸ್ ಪೆಟ್ರೋಲ್ ಆವೃತ್ತಿಗಳಲ್ಲಿ ಬರಬಹುದು ಎಂದು ಹೇಳಲಾಗುತ್ತಿದೆ.
ಟಾಟಾ ಮೋಟಾರ್ಸ್ ಕಂಪನಿಯು ಕೊನೆಗೂ ಹ್ಯಾರಿಯರ್ ಮಿಡ್ ಎಸ್‍ಯುವಿಯನ್ನು ಪೆಟ್ರೋಲ್ ಮಾದರಿಯಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ನಿಖರವಾದ ಬಿಡುಗಡೆ ದಿನಾಂಕ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಈ ಎಸ್‍ಯುವಿ ಮಾದರಿಯು 2025 ರಲ್ಲಿ ನಡೆಯಬಹುದು ಎಂದು ಹೇಳಿಕೊಂಡಿದ್ದಾರೆ. ಈ ಟಾಟಾ ಕಂಪನಿಯು 1.5-ಲೀಟರ್ TGDi ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ.

ಈ ಎಂಜಿನ್ ಅನ್ನು ಟಾಟಾ 2023 ರಲ್ಲಿ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಿತು. ಈ ಹೊಸ ನಾಲ್ಕು ಸಿಲಿಂಡರ್ ಟರ್ಬೊ ಎಂಜಿನ್ 170 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಇದು 280 Nm ನ ಗರಿಷ್ಠ ಟಾರ್ಕ್ ಉತ್ಪಾದನೆಯನ್ನು ಸಹ ಉತ್ಪಾದಿಸಲು ಸಾಧ್ಯವಾಗುತ್ತದೆ. ಹೆಚ್ಚಾಗಿ, ಹ್ಯಾರಿಯರ್ ಪೆಟ್ರೋಲ್ ಹೊರಗಿನಿಂದ ಮತ್ತು ಒಳಗಿನಿಂದ ಡೀಸೆಲ್ ಮಾದರಿಯಂತೆಯೇ ಕಾಣುತ್ತದೆ.
ಟಾಟಾ ಹ್ಯಾರಿಯರ್ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ಇತರ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಟಾಟಾ ಸಫಾರಿ ಪೆಟ್ರೋಲ್‌ನ ಸ್ಫಾಟ್ ಟೆಸ್ಟ್ ಅನ್ನು ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷಿಸುತ್ತಿರುವುದು ಕಂಡುಬಂದಿದೆ. ಹೆಚ್ಚಾಗಿ, ಈ ಹೊಸ ಮಾದರಿಯು ಹ್ಯಾರಿಯರ್ ಪೆಟ್ರೋಲ್‌ನ ಅದೇ ಸಮಯದಲ್ಲಿ ಬಿಡುಗಡೆಯಾಗಲಿದೆ.

ಹ್ಯಾರಿಯರ್‌ನಂತೆ, ಸಫಾರಿ ಪೆಟ್ರೋಲ್ ಕೂಡ ಅದೇ 1.5-ಲೀಟರ್ TGDi ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ. ಈ ನಾಲ್ಕು ಸಿಲಿಂಡರ್ ಮೋಟಾರ್ ನಿಖರವಾಗಿ 170 bhp ಮತ್ತು 280 Nm ಟಾರ್ಕ್ ಅನ್ನು ಮಾಡುತ್ತದೆ. ಪ್ರಸ್ತುತ, ಟಾಟಾ ಸಫಾರಿ ಮತ್ತು ಹ್ಯಾರಿಯರ್ ಮಾರಾಟವು ಮಹೀಂದ್ರಾ ಸ್ಕಾರ್ಪಿಯೊ-ಎನ್ ಮತ್ತು ಎಕ್ಸ್‌ಯುವಿ 700 ಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ. ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡದಿರುವುದು ಇದಕ್ಕೆ ಒಂದು ದೊಡ್ಡ ಕಾರಣ.
ಹ್ಯಾರಿಯರ್ ಮತ್ತು ಸಫಾರಿ ಪೆಟ್ರೋಲ್ ಮಾದರಿಗಳ ಹೊರತಾಗಿ, ಕಂಪನಿಯು ಟಾಟಾ ಪಂಚ್ ಫೇಸ್‌ಲಿಫ್ಟ್‌ನಲ್ಲಿಯೂ ಕೆಲಸ ಮಾಡುತ್ತಿದೆ. ಕಂಪನಿಯು ಇತ್ತೀಚೆಗೆ ನವೀಕರಿಸಿದ ಮಾದರಿಯನ್ನು ಪರಿಚಯಿಸಿತು. ಹೊಸ ಮುಂಭಾಗದ ಫಾಸಿಕದೊಂದಿಗೆ ಹೊಸ ಫೇಸ್‌ಲಿಫ್ಟೆಡ್ ಮಾಡೆಲ್ ಬರಲಿದೆ. ಹೆಚ್ಚಾಗಿ, ಇದು ನವೀಕರಿಸಿದ ಒಳಾಂಗಣವನ್ನು ಸಹ ಪಡೆಯುತ್ತದೆ. ಪವರ್‌ಪ್ಲಾಂಟ್‌ಗೆ ಸಂಬಂಧಿಸಿದಂತೆ, ಇದು ಪ್ರಸ್ತುತ-ಜನರೇಷನ್ ಮಾದರಿಯ ಅದೇ ಎಂಜಿನ್ ಆಯ್ಕೆಯನ್ನು ಉಳಿಸಿಕೊಳ್ಳುತ್ತದೆ ಎಂದು ವರದಿಯಾಗಿದೆ.

ಟಾಟಾ ಮೋಟಾರ್ಸ್ ಈಗಾಗಲೇ ಸಿಯೆರಾ.ಇವಿ ಪ್ರೊಡಕ್ಷನ್ ಆವೃತ್ತಿಯನ್ನು ಪ್ರದರ್ಶಿಸಿದೆ. ಈ ಬಹು ನಿರೀಕ್ಷಿತ ಎಸ್‍ಯುವಿಯ ಪೆಟ್ರೋಲ್-ಚಾಲಿತ ಆವೃತ್ತಿಯು ಸಹ ಬರಲಿದೆ ಎಂದು ಕಂಪನಿಯು ದೃಢಪಡಿಸಿದೆ. ವರದಿಗಳ ಪ್ರಕಾರ, ಇದು 170 bhp ಮತ್ತು 280 Nm ಟಾರ್ಕ್ ಮಾಡುವ ಅದೇ ಹೊಸ 1.5-ಲೀಟರ್ TGDi ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications