ಈಗ ಫ್ರಾಂಕ್ಸ್‌ ವೆಲೋಸಿಟಿ ಎಡಿಷನ್‌ ಎಲ್ಲಾ ಮಾದರಿಯಲ್ಲೂ ಲಭ್ಯ: ಮಾರುತಿಯ ಮಾಸ್ಟರ್‌ ಪ್ಲಾನ್‌ ಯಾಕೆ ಗೊತ್ತಾ?

ಮಾರುತಿ ಸುಜುಕಿಯ ಕ್ರಾಸ್‌ಓವರ್‌ ಎಸ್‌ಯುವಿ ಫ್ರಾಂಕ್ಸ್‌ನ ಬೇಡಿಕೆ ದಿಜ ಕಳೆದಂತೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಸಾಕಷ್ಟು ಕೂಲ್‌ ಲುಕ್‌ ಮತ್ತು ಉತ್ತಮ ಫೀಚರ್‌ ಹೊಂದಿರುವ ಈ ಕಾರು ದಿನ ಕಳೆದಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಇದರ ಡಿಸೈನ್‌ ಮತ್ತು ಪರ್ಫಾಮೆನ್ಸ್‌ ಅಂದರೆ ತಪ್ಪಾಗಲಾರದು. ಇನ್ನು ಇದೀಗ ಈ ಕಾರಿಗೆ ಮಾರುತಿ ಸುಜುಕಿ ಹೊಸ ಬಿಗ್‌ ಅಪ್‌ಡೇಟ್ ಒಂದನ್ನು ಕೊಟ್ಟಿದ್ದು, ಇದು ಈ ಕಾರಿನ ಮಾರಾಟವನ್ನು ಮತ್ತಷ್ಟು ಅಧಿಕ ಗೊಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ನಮ್ಮ ಅಭಿಪ್ರಾಯ.

ಕೆಲವು ತಿಂಗಳ ಹಿಂದೆಯಷ್ಟೇ ಮಾರುತಿ ಸುಜುಕಿ ಕಂಪನಿಯು ತನ್ನ ಕ್ರಾಸ್‌ ಓವರ್‌ ಎಸ್‌ಯುವಿ ಫ್ರಾಂಕ್ಸ್‌ಗೆ ವೆಲೋಸಿಟಿ ಎಡಿಷನ್‌ ಎಂಬ ಅಪ್‌ಡೇಟ್‌ ಅನ್ನು ಕೊಟ್ಟಿತ್ತು. ಈ ಸಂಧರ್ಭದಲ್ಲಿ ವೆಲೋಸಿಟಿ ಎಡಿಷನ್‌ ಅನ್ನು 1.0 ಲೀಟರ್‌ ಟರ್ಬೋ ಪೆಟ್ರೋಲ್‌ ಎಂಜಿನ್‌ ಆಯ್ಕೆಗೆ ಮಾತ್ರ ಕೊಡಲಾಗಿತ್ತು.

Velocity edition is now available in All variants of Maruti Suzuki Fronx

ಆದರೆ ಇದೀಗ ಕಂಪನಿಯು ಈ ಎಡಿಷನ್ ಅನ್ನು ಎಲ್ಲಾ ವೇರಿಯಂಟ್‌ಗೂ ಕೊಡುತ್ತಿದೆ. ಅಂದರೆ ನೀವು ಈ ಕಾರನ್ನು ಕೊಳ್ಳುವಾಗ ವೆಲೋಸಿಟಿ ಎಡಿಷನ್‌ ಅನ್ನು 1.0 ಟರ್ಬೋ ಪೆಟ್ರೋಲ್‌ ಎಂಜಿನ್ ಅಥವಾ 1.2 ಲೀಟರ್‌ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್, ಈ ಎರಡರಲ್ಲಿ ಯಾವುದರ ಜೊತೆಗೆ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ನೀವು 45,000 ರೂಗಳನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.

ಈ ವೆಲೋಸಿಟಿ ಎಡಿಷನ್‌ನಲ್ಲಿ ಏನೇನಿರಲಿದೆ ಎಂದು ನೋಡುವುದಾದರೆ, ವರ್‌ಟ್ರೇನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆಯನ್ನು ಹೊಂದಿಲ್ಲ. ಆದರೆ, ಹೊರ ಮತ್ತು ಒಳಭಾಗದ ವಿನ್ಯಾಸದಲ್ಲಿ ಕೆಲವೊಂದು ನವೀಕರಣವನ್ನು ಪಡೆದುಕೊಂಡಿದೆ. ಅಂದರೆ ಇದರ (Maruti Suzuki Fronx) ಹೊರಾಂಗಣದ ಡಿಸೈನ್ ಮತ್ತು ಇನ್ನಿತರ ವಿಷಯಗಳು ಅದೇ ರೀತಿ ಇರಲಿದೆ.

Velocity edition is now available in All variants of Maruti Suzuki Fronx

ಆದರೆ ಇದರ ಒಳಭಾಗದಲ್ಲಿ ಹೊಸದಾದ ಗ್ರೇ & ಬ್ಲ್ಯಾಕ್ ಸ್ಟೈಲಿಂಗ್ ಕಿಟ್, ಡೋರ್ ವೈಸರ್ಸ್, ಒಆರ್‌ವಿಎಂ ಕವರ್ಸ್, ಹೆಡ್‌ಲ್ಯಾಂಪ್ ಗಾರ್ನಿಶ್, ಬಾಡಿ ಸೈಡ್ ಮೋಲ್ಡಿಂಗ್, ಇಲ್ಯುಮಿನೇಟೆಡ್ ಡೋರ್ ಸಿಲ್ ಗಾರ್ಡ್ಸ್, ಸ್ಪಾಯ್ಲರ್ ಎಕ್ಸ್‌ಟೆಂಡರ್, ವೀಲ್ ಆರ್ಚ್ ಗಾರ್ನಿಶ್, ಫ್ರಂಟ್ ಗ್ರಿಲ್ ಗಾರ್ನಿಶ್ ಮತ್ತು ಇಂಟೀರಿಯರ್ ಸ್ಟೈಲಿಂಗ್ ಕಿಟ್ ಅನ್ನು ಹೊಂದಿದೆ.

ಇನ್ನು ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ, ರೂ.7.51 ಲಕ್ಷದಿಂದ ರೂ.13.04 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು, 3 ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100 ಪಿಎಸ್ ಪವರ್ (ಶಕ್ತಿ),148 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್/ 6- ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

Velocity edition is now available in All variants of Maruti Suzuki Fronx

ಮತ್ತೊಂದು 1.2-ಲೀಟರ್ ಡುಯಲ್ಜೆಟ್ ಪೆಟ್ರೋಲ್ ಎಂಜಿನ್ 90 ಪಿಎಸ್ ಪವರ್, 113 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ವೀಡ್ ಮ್ಯಾನುವಲ್/ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಸಿಎನ್‌ಜಿ ಕಿಟ್ ಪಡೆದಿರುವ ಕಾರು, 1.2-ಲೀಟರ್ ಎಂಜಿನ್ ಹೊಂದಿದ್ದು, 77.5 ಪಿಎಸ್ ಪವರ್, 98.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ.

ಮಾರುತಿ ಸುಜುಕಿ ಫ್ರಾಂಕ್ಸ್, 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 5 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದು. ಈ ಕಾರು, 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆಟೋ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 22, 2024, 10:35 [IST]
English summary
Velocity edition is now available in all variants of maruti suzuki fronx
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+