ಆಕರ್ಷಕ ಕಾರಿಗೆ ಪೇಟೆಂಟ್‌ ದಾಖಲಿಸಿದ ವಿನ್‌ಫಾಸ್ಟ್: ಎಂಜಿ ಕಾಮೆಟ್‌ಗೆ ನಡುಕ ಶುರು! 201 ಕಿಮೀ ರೇಂಜ್‌

ಕಳೆದ ಕೆಲವಷ್ಟು ದಿನಗಳಿಂದ ಭಾರತೀಯ ಆಟೋಮೊಬೈಲ್‌ ರಂಗದಲ್ಲಿ ವಿನ್‌ಫಾಸ್ಟ್‌ ಎಂಬ ಹೆಸರು ಭಾರೀ ಸದ್ದು ಮಾಡುತ್ತಿದೆ. ವಿಯೆಟ್ನಾಂ ಮೂಲದ ಎಲೆಕ್ಟ್ರಿಕ್‌ ವಾಹನ ನಿರ್ಮಾಣ ಕಂಪನಿಯಾಗಿರುವ ವಿನ್‌ಫಾಸ್ಟ್‌, ಭಾರತಕ್ಕೆ ಟೆಸ್ಲಾ ಬರುವ ಮೊದಲೇ, ಕಾಲಿಟ್ಟಿದ್ದು ಈಗಾಗಲೇ ತಮಿಳುನಾಡಿನಲ್ಲಿ ತನ್ನ ವಾಹನ ನಿರ್ಮಾಣ ಘಟಕ ನಿರ್ಮಿಸಲು ಕೆಲಸವನ್ನೂ ಆರಂಭಿಸಿದೆ.

ಕೆಲವು ದಿನಗಳ ಹಿಂದೆಯಷ್ಟೇ ವಿನ್‌ಫಾಸ್ಟ್‌ ಭಾರತದಲ್ಲಿ ಕ್ಲಾರಾ ಎಸ್ ಎಂಬ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಅಭಿವೃದ್ದಿಪಡಿಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಇದೀಗ ಅದರ ಬೆನ್ನಲ್ಲೇ ವಿನ್‌ಫಾಸ್ಟ್‌ ಮತ್ತೊಮ್ಮೆ ಸುದ್ದಿಯಾಗಿದೆ. ಈ ಬಾರಿ ಸುದ್ದಿಯಾಗಿರುವುದು ವಿನ್‌ಫಾಸ್ಟ್‌ VF3 ಎಂಬ ಹೆಸರಿನ ಪೇಟೆಂಟ್‌ ಅನ್ನು ಭಾರತದಲ್ಲಿ ಫೈಲ್‌ ಮಾಡಿರುವುದರಿಂದ.

VinFast VF3 Patent Filed MG Comet Rival Is Here 201 Km Range

ವಿನ್‌ಫಾಸ್ಟ್‌ VF3 (VinFast VF3) ಎಂಬುವುದು ಸಣ್ಣ ಎಲೆಕ್ಟ್ರಿಕ್‌ ಕಾರಾಗಿರಲಿದ್ದು ಈ ಕಾರು ಸುಮಾರು 201 ಕಿಮೀ ರೇಂಜ್‌ ಸಹ ನೀಡಬಲ್ಲದು ಎನ್ನಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದು ಲಾಂಚ್‌ ಆದರೆ, ನಗರ ಪ್ರದೇಶಗಳಲ್ಲಿ ಚಲಿಸಲು ಇದೊಂದು ಉತ್ತಮ ಆಯ್ಕೆಯಾಗಿರಲಿದೆ ಎಂಬುದು ವಿನ್‌ಫಾಸ್ಟ್‌ ಕಂಪನಿಯ ಅಭಿಪ್ರಾಯ. ಮಾತ್ರವಲ್ಲದೇ ಸಣ್ಣ ಕಾರಾಗಿದ್ದರೂ ಒಂದೇ ಚಾರ್ಜ್‌ನಲ್ಲಿ ಈ ಕಾರು ಸುಮಾರು 201 ಕಿಮೀ ರೇಂಜ್‌ ನಿಡುತ್ತಿರುವುದು ಇದರ ಮಾರಾಟಕ್ಕೆ ಮತ್ತಷ್ಟು ಇಂಬು ನೀಡಲಿದೆ ಎಂದು ಹೇಳಲಾಗುತ್ತಿದೆ.

ವಿನ್‌ಫಾಸ್ಟ್‌ನ ಎಲೆಕ್ಟ್ರಿಕ್‌ ಕಾರುಗಳ ಲೈನ್‌ಅಪ್‌ ನೊಡಿದರೆ ಇದರಲ್ಲಿ VF3 ಜೊತೆಗೆ, VF7 ಮತ್ತು VF9 ಸಹ ಸೇರುತ್ತದೆ. ವಿನ್‌ಫಾಸ್ಟ್‌ ನಿಧಾನವಾಗಿ ಈ ಎಲ್ಲಾ ಕಾರುಗಳನ್ನು ಭಾರತಕ್ಕೆ ಪರಿಚಯಿಸಲಿದ್ದು, ಇವೆಲ್ಲಾ ಕಾರುಗಳನ್ನು ಭಾರತೀಯರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮಾತ್ರ ಕುತೂಹಲವಾಗಿ ಉಳಿದಿದೆ. ಇನ್ನು ಈಗಾಗಲೇ ಪೇಟೆಂಟ್‌ ದಾಖಲಿಸಿರುವ VF3 ಬಗ್ಗೆ ನೋಡುವುದಾದರೆ, ಇದು ಭಾರತೀಯ ಮಾರುಕಟ್ಟೆಗೆ ಲಾಂಚ್‌ ಆದ ನಂತರ ಈಗಿರುವ ಎಂಜಿ ಕಾಮೆಟ್‌ಗೆ ಪ್ರತಿಸ್ಪರ್ಧಿಯಾಗಲಿದೆ.

VinFast VF3 Patent Filed MG Comet Rival Is Here 201 Km Range

ವಿನ್‌ಫಾಸ್ಟ್‌ ಕಂಪನಿಯು 2017 ರಿಂದ ಎಲೆಕ್ಟ್ರಿಕ್‌ ಕಾರುಗಳನ್ನು ತಯಾರಿಸಲು ಆರಂಭಿಸಿದ್ದು ಜಾಗತಿಕವಾಗಿ ಹರಡಿಕೊಂಡಿರುವ ವಿಯೆಟ್ನಾಂ ದೇಶದ ಒಂದೇ ಒಂದು ಕಾರು ನಿರ್ಮಾಣ ಕಂಪನಿಯಾಗಿದೆ. ವಿನ್‌ಫಾಸ್ಟ್ ಕಂಪನಿಯು ಆರಂಭದಲ್ಲಿ ಬಿಎಂಡಬ್ಲ್ಯೂ ಕಂಪನಿಯ ಬೇಸ್‌ ಮಾಡೆಲ್‌ ಕಾರುಗಳು ಹಾಗೂ ಕೆಲವು ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ವಿಯೆಟ್ನಾಂ ನಲ್ಲಿ ಮಾರಾಟ ಮಾಡುತ್ತಿತ್ತು. ಆದರೆ ಕೆಲವೇ ಸಮಯಗಳಲ್ಲಿ ತಮ್ಮದೇ ಸ್ವಂತ ಎಲೆಕ್ಟ್ರಿಕ್‌ ಕಾರುಗಳನ್ನು ಸಹ ತಯಾರಿಸಲು ಆರಂಭ ಮಾಡಿತು.

ಕಂಪನಿಯು ಈಗಾಗಲೇ ತನ್ನ ಶೋ ರೂಮ್‌ಗಳನ್ನು ಯುಎಸ್‌, ಕೆನಡಾ ಮತ್ತು ಯೂರೋಪ್‌ ದೇಶಗಳಲ್ಲಿ ಸ್ಥಾಪಿಸಿದೆ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳು ವಿಪರೀತವಾಗಿ ಬೆಳವಣಿಗೆ ಆಗುತ್ತಿರುವುದರಿಂದ ಭಾರತದಲ್ಲೂ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ವಿನ್‌ಫಾಸ್ಟ್‌ ಕಾರು ತಯಾರಿಕಾ ಕಂಪನಿಯು ಸಿದ್ಧವಾಗಿದೆ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ತಿಳಿದು ಬರುತ್ತದೆ.

VinFast VF3 Patent Filed MG Comet Rival Is Here 201 Km Range

2025ರ ಮೇ ವೇಳೆಗೆ ಮೊದಲ ಎಲೆಕ್ಟ್ರಿಕ್ ಕಾರು ಹೊರತರುವ ನಿರೀಕ್ಷೆಯೊಂದಿಗೆ ನಿರ್ಮಾಣ ಚಟುವಟಿಕೆಗಳು ಪ್ರಾರಂಭವಾಗಿವೆ. ವಿನ್‌ಫಾಸ್ಟ್ ಭಾರತದಲ್ಲಿ ತನ್ನ ಮೊದಲ ಕೊಡುಗೆಯಾಗಿ VF e-34 ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಯೋಜಿಸಿದೆ, ನಂತರ ಮಾದರಿಗಳು VF6 ಮತ್ತು VF7 ಆಗಿದೆ. ವಿನ್‌ಫಾಸ್ಟ್‌ನ ಪ್ರವೇಶದೊಂದಿಗೆ, ತಮಿಳುನಾಡಿನಲ್ಲು ತನ್ನ ಸ್ಥಾನವನ್ನು ಹೆಚ್ಚಿಸಲು ಸಿದ್ಧವಾಗಿದೆ. ಇದು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮತ್ತು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ವ್ಯಾಪಕ ಅಳವಡಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 1, 2024, 16:09 [IST]
English summary
Vinfast vf3 patent filed mg comet rival is here 201 km range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+