Volkswagen ID.4: ಭಾರತದಲ್ಲಿ ಮೊದಲ ಬಾರಿಗೆ ಪೋಕ್ಸ್‌ವ್ಯಾಗನ್ ಐಡಿ.4 ಎಲೆಕ್ಟ್ರಿಕ್ ಕಾರು ಪ್ರದರ್ಶನ.. ವಿಶೇಷತೆಗಳೇನು?

ಜರ್ಮನಿ ಮೂಲದ ಪೋಕ್ಸ್‌ವ್ಯಾಗನ್ (Volkswagen) ಭಾರತದಲ್ಲಿ ನವೀನ ವೈಶಿಷ್ಟ್ಯದ ಕಾರುಗಳನ್ನು ಮಾರಾಟಗೊಳಿಸುವ ಮೂಲಕ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ರಾಜಸ್ಥಾನದ ಜೈಪುರದಲ್ಲಿ ಗುರುವಾರ ನಡೆದ ಕಂಪನಿಯ ವಾರ್ಷಿಕ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಐಡಿ.4 (ID.4) ಎಲೆಕ್ಟ್ರಿಕ್ ಕಾರನ್ನು ಅದ್ದೂರಿಯಾಗಿ ಪ್ರದರ್ಶನ ಮಾಡಲಾಗಿದೆ.

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಈ ಫೋಕ್ಸ್‌ವ್ಯಾಗನ್ ಐಡಿ.4 (Volkswagen ID.4) ಎಲೆಕ್ಟ್ರಿಕ್ ಕಾರು, ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, ಮುಂಭಾಗ (ಫ್ರಂಟ್) ಆಕರ್ಷಕ ಗ್ರಿಲ್ ಹಾಗೂ ಹೆಡ್‌ಲೈಟ್‌ಗಳನ್ನು ಪಡೆದಿದೆ. ಹಿಂಭಾಗದ ವಿನ್ಯಾಸವು ಉತ್ತಮವಾಗಿದೆ. ರೂಪಾಂತರಗಳನ್ನು ಅವಲಂಭಿಸಿ, 9 ಅಥವಾ 20 ಇಂಚಿನ ವೀಲ್ಸ್ ಆಯ್ಕೆಯಲ್ಲಿ ಲಭ್ಯವಿದೆ.

Volkswagen ID 4 New Electric Car Showcased In India Details

ವಿವಿಧ ರೂಪಾಂತರ ಆಯ್ಕೆಯಲ್ಲಿ ದೊರೆಯುವ ಈ ಫೋಕ್ಸ್‌ವ್ಯಾಗನ್ ಐಡಿ.4 ಎಲೆಕ್ಟ್ರಿಕ್ ಕಾರು, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಎಲ್ಇಡಿ ಲೈಟಿಂಗ್, ಹೀಟೆಡ್ ಸೀಟ್ಸ್, 3 - ಜೋನ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಸನ್‌ರೂಫ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ನ್ಯಾವಿಗೇಷನ್‌ ಮತ್ತು 12-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಈ ಫೋಕ್ಸ್‌ವ್ಯಾಗನ್ ಐಡಿ.4 (Volkswagen ID.4) ಕಾರು, ಸಿಂಗಲ್ ಮೋಟಾರ್ ಹಾಗೂ ಡುಯಲ್ ಮೋಟಾರ್ ಆಯ್ಕೆಯನ್ನು ಹೊಂದಿದೆ. ಚಿಕ್ಕದಾದ 58 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಮತ್ತು ಸಿಂಗಲ್ ಮೋಟಾರ್ ಹೊಂದಿರುವ ಮಾದರಿಯು 201 ಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಉತ್ಪಾದಿಸುತ್ತದೆ. ದೊಡ್ಡದಾದ 77 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಪಡೆದಿರುವ ರೂಪಾಂತರವು 330 ಹೆಚ್‌ಪಿ ಪವರ್ ಹೊರ ಹಾಕುತ್ತದೆ.

Volkswagen ID 4 New Electric Car Showcased In India Details

ದೊಡ್ಡ ಗಾತ್ರದ ಬ್ಯಾಟರಿ - AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿರುವ ಆವೃತ್ತಿಯು ಭರ್ತಿ ಚಾರ್ಜ್ ನಲ್ಲಿ 410 ಕಿ.ಮೀ ಮತ್ತು RWD (ರೇರ್ ವೀಲ್ ಡ್ರೈವ್) ಮಾದರಿಯು 442 ಕಿ.ಮೀ ಕ್ರಮಿಸುತ್ತದೆ. ಚಿಕ್ಕ ಗಾತ್ರದ ಬ್ಯಾಟರಿ ಹೊಂದಿರುವ ರೂಪಾಂತರವು ಸಂಪೂರ್ಣ ಚಾರ್ಜ್ ನಲ್ಲಿ 336 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ.

ಈ ಕಾರು ಕೇವಲ 5.8 ಸೆಕೆಂಡುಗಳಲ್ಲಿ 0 ಯಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಇದರ ಬ್ಯಾಟರಿ ಪ್ಯಾಕ್ 10 ರಿಂದ 80% ಚಾರ್ಜ್ ಆಗಲು 36 ನಿಮಿಷ ತೆಗೆದುಕೊಳ್ಳುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಐಡಿ.4ಗೆ ಹ್ಯುಂಡೈ ಐಯೊನಿಕ್ 5, ಕಿಯಾ ಇವಿ6 ಮತ್ತು ವೋಲ್ವೋ ಎಲೆಕ್ಟ್ರಿಕ್ ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಲಿವೆ ಎಂದು ಅಂದಾಜಿಸಲಾಗಿದೆ.

Volkswagen ID 4 New Electric Car Showcased In India Details

ಫೋಕ್ಸ್‌ವ್ಯಾಗನ್ ಐಡಿ.4 ಎಲೆಕ್ಟ್ರಿಕ್ ಕಾರು, ಮುಂಬರುವ ಕೆಲವೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರೂ.45 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಹೇಳಲಾಗಿದೆ. ಈ ಕಾರಿನೊಟ್ಟಿಗೆ ಟೈಗುನ್ ಜಿಟಿ ಪ್ಲಸ್ ಸ್ಪೋರ್ಟ್ ಮತ್ತು ಜಿಟಿ ಲೈನ್ ರೂಪಾಂತರಗಳನ್ನು ಅನಾವರಣ ಮಾಡಲಾಗಿದೆ. ಇವುಗಳು ಕೂಡ ಒಂದಕ್ಕೊಂದು ಮೀರಿಸುವ ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 21, 2024, 14:38 [IST]
English summary
Volkswagen id4 new electric car showcased in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+