ಭಾರತಕ್ಕೆ ಮರಳಲಿದೆ ಫೋಕ್ಸ್‌ವಾಗನ್ ಪೊಲೋ: ಕಳೆದು ಹೋಗಿದ್ದ ಮಾಣಿಕ್ಯ, ಮರಳಿ ಗೂಡಿಗೆ!
ಫೋಕ್ಸ್‌ವಾಗನ್ ಸಂಸ್ಥೆ ಭಾರತದಲ್ಲಿ ಬಿಡುಗಡೆ ಮಾಡಿದ ಕಾರುಗಳಲ್ಲಿ ಇಂದಿಗೂ ಜನರು ಕೊಂಡಾಡುವ ಹ್ಯಾಚ್‌ಬ್ಯಾಕ್ ಕಾರೊಂದಿದೆ. ಇದರ ಮಾರಾಟ ಭಾರತದಲ್ಲಿ ನಿಂತು ವರುಷಗಳೇ ಕಳೆದರೂ, ಇದರ ಸೆಕೆಂಡ್ ಹ್ಯಾಂಡ್ ಕಾರಿನ ಬೇಡಿಕೆ ಇಂದಿಗೂ ಸಹ ಎಳ್ಳಷ್ಟು ಕುಗ್ಗಿಲ್ಲ. ನಾವಿಲ್ಲಿ ಮಾತನಾಡುತ್ತಿರುವುದು ಫೋಕ್ಸ್‌ವಾಗನ್ ಕಂಪನಿಯ ಪೊಲೋ ಎಂಬ ಕಾರಿನ ಬಗ್ಗೆ.
ಫೋಕ್ಸ್‌ವಾಗನ್ ಪೊಲೋ ಪ್ರೀಯರಿಗೆ ಸಂತಸದ ಸುದ್ದಿಯೊಂದನ್ನು ನಾವು ತಂದಿದ್ದೇವೆ. ಮಾಹಿತಿಗಳ ಪ್ರಕಾರ ಫೋಕ್ಸ್‌ವಾಗನ್ ಪೊಲೋ ಸದ್ಯದಲ್ಲೇ ಭಾರತಕ್ಕೆ ರೀ ಎಂಟ್ರಿ ಕೊಡಲಿದೆ ಎಂದು ತಿಳಿದು ಬಂದಿದೆ. 2010 ರಲ್ಲಿ ಪೋಕ್ಸ್‌ವಾಗನ್ ಭಾರತದಲ್ಲಿ ಪೊಲೋ ಹ್ಯಾಚ್‌ಬಾಕ್ ಕಾರನ್ನು ಲಾಂಚ್ ಮಾಡಿತ್ತು. ಭಾರತಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ಪೊಲೋ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಸಾಲಿಗೆ ಸೇರಿಕೊಂಡಿತು.

ಈ ಕಾರಿನ ಗಾತ್ರ, ಇದರ ವೇಗ, ಅದ್ಭುತ ಪರ್ಫಾಮನ್ಸ್‌ಗೆ ಮನಸೋತ ಭಾರತೀಯರು ಈ ಕಾರನ್ನು ಬಹುಬೇಗ ತಮ್ಮ ಮಡಿಲಿಗೆ ಸೇರಿಸಿಕೊಂಡಿದ್ದರು. ಆದರೆ ಕೆಲವೊಂದು ಕಾರಣಗಳಿಂದಾಗಿ ಫೋಕ್ಸ್‌ವಾಗನ್ ಸಂಸ್ಥೆ (Volkswagen Polo) 2022 ರಲ್ಲಿ ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿದ್ದರು. ಆದರೆ ಇದೀಗ ಮತ್ತೆ ಭಾರತೀಯ ಮಾರುಕಟ್ಟೆಗೆ ಪೊಲೋ ಕಾಳಿಡಲಿದೆ.
ಇನ್ನು ಭಾರತಕ್ಕೆ ಈ ಕಾರು ಎಸ್‌ಯುವಿ ಅಥವಾ ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಫೋಕ್ಸ್‌ವಾಗನ್ ಸಂಸ್ಥೆಯ ವಾರ್ಷಿಕ ಬ್ರಾಂಡ್ ಮೀಟಿಂಗ್ ೨೦೨೪ ರಲ್ಲಿ ಫೋಕ್ಸ್‌ವಾಗನ್ ಸಂಸ್ಥೆಯ ಬ್ರಾಂಡ್ ಡೈರೆಕ್ಟರ್ ಆದ ಆಶಿಶ್ ಗುಪ್ತಾ ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಪೊಲೋ ಮಾದರಿಯ ಮರು ಆಗಮನವನ್ನು ಖಚಿತ ಪಡಿಸಿದ್ದಾರೆ.

ಕೆಲವು ವಾರಗಳ ಹಿಂದೆ ಬ್ರೆಜಿಲಿಯನ್ ಮಾರುಕಟ್ಟೆಯಲ್ಲಿ ಹೆಚ್ಚು ಅಗ್ರೇಸಿವ್ ಆದ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ (Volkswagen Polo Track) ಕಾರನ್ನು ಕಂಪನಿ ಬಿಡುಗಡೆ ಮಾಡಿತ್ತು. ಹೊಸ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ 'ಕ್ರಾಸ್ ಪೋಲೊ' ರೀತಿಯಲ್ಲಿ ಸಂಪೂರ್ಣವಾಗಿ ಹಾರ್ಡ್‌ಕೋರ್‌ಗೆ ಹೋಗದಿದ್ದರೂ, ಹೊಸ ಪೋಲೊ ಒರಟಾದ ರಸ್ತೆಗಳಲ್ಲಿ ಉತ್ತಮ ಪರ್ಫಾಮೆನ್ಸ್ ಅನ್ನು ನೀಡುವಲ್ಲಿ ಸಮರ್ಥವಾಗಿದೆ.
ಇನ್ನು ಈ ಪೊಲೊ ಟ್ರ್ಯಾಕ್ ಅನ್ನು ಬ್ರೆಜಿಲ್‌ನಲ್ಲಿನ ಕೃಷಿಭೂಮಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಫೋಕ್ಸ್‌ವ್ಯಾಗನ್ ಹೇಳಿಕೊಂಡಿದೆ. ಕಂಪನಿಯು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಇತರ ನವೀಕರಣಗಳೊಂದಿಗೆ ದೇಶದಲ್ಲಿ ತನ್ನ ಎಂಟ್ರಿ ಲೆವೆಲ್ ಒರಟಾದ ಕೊಡುಗೆಯಾಗಿ ಹೊಸ ಪೋಲೋ ಟ್ರ್ಯಾಕ್‌ನೊಂದಿಗೆ ರೈತರನ್ನು ಗುರಿಯಾಗಿಸಿಕೊಂಡಿದೆ.

ಬ್ರೆಜಿಲ್‌ನಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ ಕಾರಿನಲ್ಲಿ 1.0-ಲೀಟರ್ ಎಂಜಿನ್ ಅನ್ನು ನೀಡಿದ್ದು, ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಬ್ರೆಜಿಲ್‌ನಲ್ಲಿನ ಸ್ಟ್ಯಾಂಡರ್ಡ್ ಹ್ಯಾಚ್‌ಬ್ಯಾಕ್‌ನಲ್ಲಿ ಪೋಲೊ ರೋಬಸ್ಟ್ ಸ್ವಲ್ಪ ಎತ್ತರದ ಸಸ್ಪೆಕ್ಷನ್ ಅನ್ನು ಪಡೆಯುತ್ತದೆ. ಇದು ವಿನೈಲ್ ಸೀಟ್‌ಗಳನ್ನು ಸಹ ಪಡೆಯುತ್ತದೆ. ಇದು ಹೊಲಗಳಿಂದ ಮಾರುಕಟ್ಟೆಗೆ ಉತ್ಪನ್ನಗಳನ್ನು ಸಾಗಿಸಿದ ನಂತರ ತೊಳೆಯಲು ಸುಲಭವಾಗಿದೆ.
ಈ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ ಕಾರಿನಲ್ಲಿ 1.0-ಲೀಟರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ. ಈ ಎಂಜಿನ್ 84 bhp ಮತ್ತು 101 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








