ಭಾರತದಲ್ಲಿ ಈ ಕಾರಿಗೆ ಲಕ್ಷಗಟ್ಟಲೆ ಡಿಸ್ಕೌಂಟ್‌: ಪ್ರೀಮಿಯಂ ಕಾರಿಗ್ಯಾಕೆ ಇಷ್ಟು ದೊಡ್ಡ ಆಫರ್‌!

ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಖ್ಯಾತ ಕಾರು ನಿರ್ಮಾಣ ಕಂಪನಿಗಳಲ್ಲಿ ಫೋಕ್ಸ್‌ವಾಗನ್ ಸಹ ಒಂದು. ಭಾರತದಲ್ಲಿ ಪೊಲೋ ಜಿಟಿಯಂತಹ ವಾಹನಗಳನ್ನು ರಸ್ತೆಗಿಳಿಸಿ ಕ್ರಾಂತಿ ಮಾಡಿದ್ದ ಕಂಪನಿ ಫೋಕ್ಸ್‌ವಾಗನ್‌. ಇವರ ಪ್ರಸಿದ್ದ ಕಾರುಗಳಲ್ಲಿ ವರ್ಟಸ್‌ ಸಹ ಒಂದು. ಇದೀಗ ಈ ಕಾರಿಗೆ ಕಂಪನಿ ಭಾರೀ ಆಫರ್‌ ನೀಡುತ್ತಿದ್ದು, ಖರೀದಿಸಲು ಇದು ಸುಸಮಯ.

ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ವರ್ಟಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. 2024ರ ಮಾರ್ಚ್ ತಿಂಗಳಿನಲ್ಲಿ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. ಕಳೆದ ತಿಂಗಳಿನಲ್ಲಿ ಫೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್‌ನ 1,847 ಯುನಿಟ್‌ಗಳನ್ನು ಮಾರಾಟವಾಗಿವೆ. ಕಳೆದ ವರ್ಷದ ಅದೇ ತಿಂಗಳಿನಲ್ಲಿ ಫೋಕ್ಸ್‌ವ್ಯಾಗನ್ ವರ್ಟಸ್ (Volkswagen Virtus) ಮಾದರಿಯ 1,792 ಯುನಿಟ್‌ಗಳು ಮಾರಾಟವಾಗಿವೆ.

Volkswagen Virtus

ಇದೀಗ ಪೋಕ್ಸ್‌ವಾಗನ್ ತನ್ನ ವರ್ಟಸ್ (Volkswagen Virtus) ಕಾರಿಗೆ ಭ್ಜರಿ ಡಿಸ್ಕೌಂಟ್‌ ಅನ್ನು ನೀಡುತ್ತಿದ್ದು, ಮಾಹಿತಿಗಳ ಪ್ರಕಾರ ಈ ಕಾರಿಗೆ ಸುಮಾರು 1.40 ಲಕ್ಷ ರೂಗಳ ವರೆಗೆ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಇದು ನೀವು ಯಾವ ವೇರಿಯಂಟ್‌ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅದಕ್ಕೆ ಅನುಸಾರವಾಗಿ ಡಿಸ್ಕೌಂಟ್‌ ಸಹ ಬದಲಾಗಲಿದೆ ಎಂದು ತಿಳಿದು ಬಂದಿದೆ. ಈ ಡಿಸ್ಕೌಂಟ್‌ನಲ್ಲಿ ಸುಮಾರು 90000 ರೂಗಳ ಕ್ಯಾಶ್‌ ಡಿಸ್ಕೌಂಟ್‌ ಸಹ ಒಳಗೊಂಡಿದೆ.

ಇದು ಮಾತ್ರವಲ್ಲದೇ ಮೇ ತಿಂಗಳಿಗಾಗಿ ಫೋಕ್ಸ್‌ವಾಗನ್‌ ಇನ್ನೂ ಸಹ ಹಲವಾರು ಉಡುಗೊರೆಗಳನ್ನು ಸಿದ್ದಗೊಳಿಸಿದ್ದು ಇದರಲ್ಲಿ ಹಲವು ಕಾರು ಮಾದರಿಗಳಿಗೂ ಆಫರ್‌ಗಳನ್ನು ಘೋಷಿಸಿದೆ. ಇನ್ನು ಈ ವರ್ಟಸ್‌ ಕಾರು ಭಾರತೀಯ ಮಾರುಕಟ್ಟೆಯಲ್ಲಿ ವರ್ನಾ, ಸಿಯಾಜ್‌, ಹೋಂಡಾ ಸಿಟಿ ಕಾರುಗಳಿಗೆ ಭರ್ಜರಿ ಕಾಂಪಿಟೇಷನ್‌ ಅನ್ನು ನೀಡುತ್ತಿದೆ.

Volkswagen Virtus

ಇನ್ನು ಭಾರತದಲ್ಲಿರುವ ಈ ಫೋಕ್ಸ್‌ವಾಗನ್ ಕಾರಿನ ಬಗ್ಗೆ ನೋಡುವುದಾದರೆ, ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನ ಉತ್ಪಾದನೆಯು ಪುಣೆಯಲ್ಲಿರುವ ಕಂಪನಿಯ ಚಕನ್ ಸ್ಥಾವರದಲ್ಲಿ ನಡೆಯುತ್ತಿದೆ. ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ನಂತರ ಭಾರತ 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್‌ನ ಎರಡನೇ ಮಾದರಿಯಾಗಿದೆ. ಫೋಕ್ಸ್‌ವ್ಯಾಗನ್ ವರ್ಟಸ್ ಪೆಟ್ರೋಲ್-ಮಾತ್ರ ಸೆಡಾನ್ ಆಗಿದ್ದು, ಈ ಕಾರಿನಲ್ಲಿ 1.0-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಎಂಜಿನ್‌ಗಳನ್ನು ಹೊಂದಿವೆ.

ಇದರಲ್ಲಿ 1.0 ಲೀಟರ್ TSI ಪೆಟ್ರೋಲ್ ಎಂಜಿನ್ 114 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಯ್ಕೆಯ 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಅನ್ನು ಪಡೆಯುತ್ತದೆ. ಇದರೊಂದಿಗೆ 1.5 ಲೀಟರ್ TSI ಪೆಟ್ರೋಲ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ, ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ವೆಂಟೊಗೆ ಬದಲಿಯಾಗಿ ಕಾಂಪ್ಯಾಕ್ಟ್ ಸೆಡಾನ್ ಅನ್ನು ವಿಶೇಷವಾಗಿ ಭಾರತೀಯ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಮುಂಭಾಗ ಮಸ್ಕಲರ್ ಲುಕ್ ಅನ್ನು ಹೂಂದಿದೆ. ಈ ಹೊಸ ಸೆಡಾನ್ ಸ್ಲ್ಯಾಟ್ ಗ್ರಿಲ್, ಸುತ್ತಲೂ ಕ್ರೋಮ್ ಗಾರ್ನಿಶ್ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 11, 2024, 11:57 [IST]
English summary
Volkswagen virtus gets upto rs 1 40 lakh rupees discount in may
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+