Toyota EV: ಮೊದಲ ಟೊಯೋಟಾ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಯಾವಾಗ?

ಟೊಯೋಟಾ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಕಳೆದ ವರ್ಷದ ಕೊನೆಯಲ್ಲಿ ಟೊಯೋಟಾ ತನ್ನ ಮಿಡ್‌ ಸೈಜ್ ಎಲೆಕ್ಟ್ರಿಕ್ ಎಸ್‌ಯುವಿಯ ಕಾನ್ಸೆಪ್ಟ್ ಮಾಡಲ್ ಅನ್ನು ಬಹಿರಂಗಪಡಿಸಿತ್ತು. ಇದೀಗ ಈ ಇವಿ 2025ರ ದ್ವೀತಿಯಾರ್ಧದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಟೊಯೋಟಾ - ಮಾರುತಿ ಸುಜುಕಿ ಬ್ರಾಂಡ್‌ಗಳ ಪಾಲುದಾರಿಕೆಯಲ್ಲಿ ಹಲವು ಕಾರುಗಳು ಬಂದಿರುವುದು ಎಲ್ಲರಿಗೂ ತಿಳಿದೆ ಇದೆ. ಹಾಗೆಯೇ ಈಗ ಎಲೆಕ್ಟ್ರಿಕ್ ಕಾರುಗಳು ಕೂಡ ಒಂದೇ ಪ್ಲಾಟ್‌ಫಾರ್ಮ್ ಹಂಚಿಕೊಳ್ಳಲಿವೆ. ಮೂಲಗಳ ಪ್ರಕಾರ ಇದು ಬಹುತೇಕ ಮಾರುತಿ ಸುಜುಕಿಯ ಹೊಸ ಎಲೆಕ್ಟ್ರಿಕ್ ಕಾರಿನಂತೆ ಅದೇ ಡಿಸೈನ್ ಹಾಗೂ ತಾಂತ್ರಿಕ ವಿಶೇಷತೆಗಳಿಗೆ ಹತ್ತಿರವಾಗಿರಲಿದೆ.

when-will-the-first-toyota-electric-suv-be-launched

ಮಾರುತಿ ಸುಜುಕಿಯ ಹೊಸ ಎಲೆಕ್ಟ್ರಿಕ್ ಕಾರು ಮಾರ್ಚ್ 2025ರ ವೇಳೆಗೆ ಬಿಡುಗಡೆಯಾಗಲಿದೆ. ಇದಾದ 6 ತಿಂಗಳ ಬಳಿಕ ಟೊಯೋಟಾ ತನ್ನ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ ಎಂದು ಮೂಲಗಳು ಹೇಳುತ್ತಿವೆ. ಅಲ್ಲಿಗೆ 2025ರ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಟೊಯೋಟಾ ಇವಿ ಬರುವುದು ಖಚಿತ ಎನ್ನಲಾಗುತ್ತಿದೆ.

ಹೇಗಿರಲಿದೆ ಮೊದಲ ಟೊಯೋಟಾ ಇವಿ: ಟೊಯೋಟಾ ಹೊಸ ಎಲೆಕ್ಟ್ರಿಕ್ ಎಸ್‌ಯುವಿ 1,820 ಎಂಎಂ ಅಗಲ, 4,300 ಎಂಎಂ ಉದ್ದ ಮತ್ತು 1,620 ಎಂಎಂ ಎತ್ತರವಿರಲಿದೆ. ಮಾರುತಿ ಸುಜುಕಿಯ ಇವಿ ಮೊದಲ ಇವಿ ಕಾರು ಕೂಡ ಇದೇ ಆಯಾಮಗಳೊಂದಿಗೆ ಬರಲಿದ್ದು, ಟೊಯೋಟಾ ಇವಿ ಎರಡೂ ಮಾದರಿಗಳು ಒಂದೇ ರೀತಿಯ 2,700 ಎಂಎಂ ವ್ಹೀಲ್ ಬೇಸ್ ಅನ್ನು ಪಡೆಯುವ ನಿರೀಕ್ಷೆಯಿದೆ.

when-will-the-first-toyota-electric-suv-be-launched

ಹೊಸ ಮುಂಬರುವ ಟೊಯೋಟಾ ಇವಿಗೆ ಎರಡು ಬ್ಯಾಟರಿ ಆಯ್ಕೆಗಳಿರಲಿದ್ದು, ಸುಮಾರು 550 ಕಿ.ಮೀ ರೇಂಜ್ ನೀಡುವ 60 ಕಿಲೋವ್ಯಾಟ್ ಬ್ಯಾಟರಿ ಹಾಗೂ 400 ಕಿ.ಮೀ ರೇಂಜ್ ನೀಡುವ ಸಣ್ಣ 48 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಎಂಟ್ರಿ ಲೆವೆಲ್ ರೂಪಾಂತರವನ್ನು ಸಹ ನಿರೀಕ್ಷಿಸಲಾಗಿದೆ. ಈ ಎಸ್ ಯುವಿ ಕೆಲವು ಮಾರುಕಟ್ಟೆಗಳಲ್ಲಿ ಎಫ್‌ಡಬ್ಲ್ಯುಡಿ ಮತ್ತು ಡ್ಯುಯಲ್ ಮೋಟಾರ್ ಎಡಬ್ಲ್ಯುಡಿ ಆಯ್ಕೆಗಳನ್ನು ಹೊಂದಿರುತ್ತದೆ ಎಂದು ಟೊಯೊಟಾ ಹೇಳಿದೆ.

ಬಾಹ್ಯ ಡಿಸೈನ್: ಇದು ಅತ್ಯಾಧುನಿಕ ಡಿಸೈನ್ ಎಲಿಮೆಂಟ್‌ಗಳನ್ನು ಹೊಂದಿರಲಿದ್ದು, ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್‌, ಆಕರ್ಷಕವಾದ ಮುಂಭಾಗದ ಬಂಪರ್, ಫೇರ್ಡ್ ವ್ಹೀಲ್ ಆರ್ಚ್‌ಗಳೊಂದಿಗೆ ರಗಡ್ ಎಸ್‌ಯುವಿ ಲುಕ್‌ನೊಂದಿಗೆ ಬರಲಿದೆ. ಇನ್ನು ಹಿಂಭಾಗದ ವಿಷಯಕ್ಕೆ ಬಂದರೆ ಇದು ಬಹುತೇಕ ಮಾರುತಿ ಇವಿನಂತೆ ಇರಲಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.

when-will-the-first-toyota-electric-suv-be-launched

ಇಂಟೀರಿಯರ್ ಬಗ್ಗೆ ಬಹಿರಂಗಪಡಿಸದಿದ್ದರೂ, ಮಾರುತಿ ಪ್ರತಿರೂಪದಂತೆ, ಇದು ಸೌಕರ್ಯ, ಸುರಕ್ಷತಾ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದ ವಿಸ್ತಾರವಾದ ಪಟ್ಟಿಯೊಂದಿಗೆ ಐಷಾರಾಮಿ ಒಳಾಂಗಣವನ್ನು ಹೊಂದಿರುತ್ತದೆ. ಬಿಡುಗಡೆಯಾದ ನಂತರ, ಟೊಯೊಟಾದ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ ಹ್ಯುಂಡೈ ಕ್ರೆಟಾ ಇವಿ, ಟಾಟಾ ಕರ್ವ್ ಇವಿ ಮತ್ತು ಮಾರುತಿ ಇವಿಎಕ್ಸ್ ಜೊತೆ ಪೈಪೋಟಿ ಇರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ಹೊಸ ಕಾರು, ಹೊಸ ಬೈಕ್ ಕುರಿತ ನವೀಕೃತ ಸುದ್ದಿಗಳನ್ನು ತ್ವರಿತವಾಗಿ ಓದುಗರಿಗೆ ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, March 17, 2024, 10:30 [IST]
English summary
When will the first toyota electric suv be launched
Read more on ಟೊಯೋಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+