ಈ ಕಾರಿಗೆ D Boss ದರ್ಶನ್ ಕೊಟ್ಟಿದ್ದು 70 ಲಕ್ಷ: ಆದರೆ ನಿಜವಾದ ಬೆಲೆ ಕೇವಲ 25 ಲಕ್ಷ... ಇಲ್ಲಿದೆ ಅಸಲಿ ಮಾಹಿತಿ!
ಕನ್ನಡದ ಚಿತ್ರರಂಗದ ಕಣ್ಮಣಿ ಎಂದೇ ಖ್ಯಾತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಕ್ರೇಜ್ ಎಲ್ಲರಿಗೂ ಗೊತ್ತು. ಅವರ ಬಳಿ ಸಾಕಷ್ಟು ಲಕ್ಷುರಿ ದುಬಾರಿ ಕಾರುಗಳಿದ್ದು ಆಗಾಗ ಒಂದೊಂದು ಕಾರಲ್ಲಿ ಕಂಡು ಬರುತ್ತಿರುತ್ತಾರೆ. ಇವರ ಬಳಿಯಿರುವ ದುಬಾರಿ ಕಾರುಗಳಲ್ಲಿ ಜೀಪ್ ಕಂಪನಿಯ ರಾಂಗ್ಲರ್ ಸಹ ಒಂದು. ಕೊಡಗು ಅಥವಾ ಇನ್ನಾವುದೋ ಆಫ್‌ರೋಡ್ ಪ್ರದೇಶಗಳಿಗೆ ಭೇಟಿ ಕೊಟುವಾಗ ದರ್ಶನ್ ಅವರು ಹೆಚ್ಚಾಗಿ ಪ್ರಯಾಣ ಮಾಡುವುದು ಈ ಕಾರಿನಲ್ಲಿಯೇ. ಇದಕ್ಕೆ ಕಾರಣ ಏನೆಂದರೆ ಜೀಪ್ ರಾಂಗ್ಲರ್ ಒಂದು ಪಕ್ಕಾ ಆಫ್‌ರೋಡ್ ವಾಹನ.
ಇತ್ತೀಚೆಗಷ್ಟೇ ಜೀಪ್, ಭಾರತದಲ್ಲಿ ರಾಂಗ್ಲರ್‌ನ ಫೇಸ್‌ಲಿಫ್ಟ್ ಮಾದರಿಯನ್ನು ಸಹ ಮಾರುಕಟ್ಟೆಗೆ ತಂದಿತ್ತು. ಕಳೆದ ಬಾರಿಯ ಜೀಪ್ ರಾಂಗ್ಲರ್‌ಗಿಂತ ಹೆಚ್ಚು ಪೀಚರ್ ಮತ್ತು ಒಂದಷ್ಟು ಅಪ್‌ಡೇಟ್‌ಗಳನ್ನು ಜೀಪ್ ಕಂಪನಿಯು ಈ ಕಾರಿನಲ್ಲಿ ತಂದಿತ್ತು. ದರ್ಶನ್ ಅವರ ಈ ಕಾರಿನ ಬೆಲೆ ಭಾರತದಲ್ಲಿ ಸುಮಾರು 67.65 ಲಕ್ಷ ರೂ ಎಕ್ಸ್ ಶೋ ರೂಮ್ ಬೆಲೆಯಿಂದ ಆರಂಭವಾಗುತ್ತದೆ.

ಅಂದರೆ ಈ ಕಾರಿನ ಬೇಸ್ ವೇರಿಯಂಟ್ ಅನ್ನು ಪಡೆಯಬೇಕೆಂದರೂ ಕಡಿಮೆ ಎಂದರೂ ಸುಮಾರು 70 ಲಕ್ಷ ರೂಗಳನ್ನು ನೀವು ಭಾರತದಲ್ಲಿ ನೀಡಬೇಕಾಗುತ್ತದೆ. ಆದರೆ ಅಮೇರಿಕಾದಲ್ಲಿ, ಈ ಕಾರಿನ ಬೆಲೆ ಭಾರತೀಯ ಕರೆನ್ಸಿಯಲ್ಲಿ ನೋಡುವುದಾದರೆ ಸುಮಾರು 25 ರಿಂದ 30 ಲಕ್ಷ ರೂಪಾಯಿಗಳು ಅಷ್ಟೇ.
ಹೌದು, ನಂಬಲು ಕಷ್ಟವಾದರೂ ಇದು ಕಟು ಸತ್ಯ. ಅಮೇರಿಕನ್ ಬ್ರಾಂಡ್ ಆಗಿರುವ ಜೀಪ್, ಭಾರತಕ್ಕೆ ಈ ಕಾರನ್ನು (Jeep Wrangler Facelift) ಎಕ್ಸ್‌ಪೋರ್ಟ್ ಮಾಡುತ್ತಿರುವುದರಿಂದ ಭಾರತಕ್ಕೆ ಬರುವಾಗ ಈ ಕಾರಿನ ಬೆಲೆ ಸುಮಾರು 70 ಲಕ್ಷ ರೂಗಳಾಗುತ್ತವೆ. ಈ ಕಾರನ್ನು ಭಾರತಕ್ಕೆ ತರುವಾಗ 100% ಡ್ಯೂಟಿ ಚಾರ್ಜ್, 28% ಜಿಎಸ್‌ಟಿ ಹಾಗೂ ರೋಡ್ ಟ್ಯಾಕ್ಸ್‌ಗಳನ್ನು ಕೊಡಬೇಕಾಗುತ್ತದೆ.

ಈ ಕಾರಿನ ಇತರ ವಿಷಯಗಳನ್ನು ನೋಡುವುದಾದರೆ, ಹೊಸ ಜೀಪ್ ರಾಂಗ್ಲರ್‌ನಲ್ಲಿ 2.0-ಲೀಟರ್ ಟರ್ಬೋ ಪೆಟ್ರೋಲ್ ಫಿಯಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಭಾರತದಲ್ಲಿ ಲಭ್ಯವಿರುವ ರಾಂಗ್ಲರ್‌ಗೆ ೮ ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್ ಆಯ್ಕೆಯಾಗಿ ಲಬ್ಯವಾಗಲಿದೆ. ಈ ಎಂಜಿನ್ ಸಹಾಯದಿಂದ ಜೀಪ್ ರಾಂಗ್ಲರ್ ಸುಮಾರು 270bhp ಮತ್ತು 400Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಫೋರ್ ವ್ಹೀಲ್ ಟ್ರೈವ್ ಬೆಂಬಲಿತವಾಗಿದೆ.
ಇನ್ನು ಇಷ್ಟೆಲ್ಲಾ ಪವರ್ ಮತ್ತು ಪರ್ಫಾಮೆನ್ಸ್ ಜೊತೆಗೆ ಈ ಕಾರಿನಲ್ಲಿ ಇದೀಗ ಹೊಸ ಆಫ್‌ರೋಡ್ ಮೋಡ್‌ಗಳು ಸಹ ಲಭ್ಯವಿದೆ. ಇದರ ಸಹಾಯದಿಂದ ನಾವು ಓಡಿಸುವ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಮೋಡ್ ಆಯ್ಕೆ ಮಾಡಿ, ಡ್ರೈವ್ ಅನ್ನು ಆನಂದಿಸಬಹುದಾಗಿದ್ದು, ಇದು ಚಾಲಕನಿಗೆ ಸಾಕಷ್ಟು ಸಹಾಯ ಮಾಡುತ್ತದೆ.

ಜೀಪ್ ರಾಂಗ್ಲರ್‌ನಲ್ಲಿ (2024 Jeep Wrangler) ಈ ಹಿಂದಿನ ಮಾದರಿಗೆ ಏನು ಬದಲಾಗಿದೆ ಮತ್ತು ಬದಲಾಗಿಲ್ಲ ಎಂದು ನೊಡುವುದಾದರೆ, ಈ ಕಾರಿನ ಹೊರಾಂಗಣ ವಿಭಾಗದಲ್ಲಿ ಸಣ್ಣ ಪುಟ್ಟ ಬದಲಾವಣೆಯಷ್ಟೇ ಆಗಿದೆ. ಹೊಸ ಅಪ್‌ಡೇಟೆಟ್ ಗ್ರಿಲ್, 17 ಮತ್ತು 18 ಇಂಚ್ ಅಯ್ಕೆಯಲ್ಲಿನ ಅಲಾಯ್ ವ್ಹೀಲ್‌ಗಳು, ಮತ್ತು ನೀವು ಆಯ್ದುಕೊಳ್ಳುವ ಆಯ್ಕೆಯ ಆಧಾರದ ಮೇಲೆ ಗೊರಿಲ್ಲಾ ಗ್ಲಾಸ್ ವಿಂಡ್ ಶೀಲ್ಡ್‌ಗಳು ಈ ಕಾರಿನಲ್ಲಿ ಹೊಸದಾಗಿ ಲಭ್ಯವಿದೆ.
ಈ ಕಾರಿನ ಗ್ರಿಲ್ ನೋಡುವುದಾದರೆ, ಕಳೆದ ಬಾರಿಯ ವಿನ್ಯಾಸವನ್ನು ಹೋಲುತ್ತದೆಯಾದರೂ, ಇದೀಗ ಈ ಗ್ರಿಲ್ ಸಂಪೂರ್ಣ ಕಪ್ಪು ಬಣ್ಣದಲ್ಲಿ ಫಿನಿಶಿಂಗ್ ಅನ್ನುಹೊಂದಿದೆ. ಇದರಲ್ಲಿಯೇ ಫ್ರಂಟ್ ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ. ಉಳಿದಂತೆ ಕಳೆದ ಬಾರಿಯ ರಾಂಗ್ಲರ್ ವಿನ್ಯಾಸವನ್ನೇ ಹೋಲುತ್ತಿದ್ದು, ಹೆಚ್ಚಾಗಿ ಬದಲಾವಣೆಗಳನ್ನು ಮಾಡಲಾಗಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications