ಕೇವಲ 11 ಲಕ್ಷಕ್ಕೆ 421km ರೇಂಜ್: ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರೆಂದರೆ ಎದುರಾಳಿಗಳಿಗೆ ಸಿಂಹಸ್ವಪ್ನ!
ಸದ್ಯಕ್ಕೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಸಿಕ್ಕಾಪಟ್ಟೆ ಬೆಳೆಯುತ್ತಿರುವ ಈ ಕಾಲದಲ್ಲಿ ಹಲವರು ಎಲೆಕ್ಟ್ರಿಕ್ ಕಾರುಗಳತ್ತ ಮುಖ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇದೇ ಸಮಯದಲ್ಲಿ ಹೊಸದಾಗಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡುವವರು ಎದುರಿಸುವ ಬಹುದೊಡ್ಡ ಪ್ರಶ್ನೆ ಎಂದರೆ ಯಾವ ಕಾರನ್ನು ಖರೀದಿಸಬೇಕು ಎಂಬುದು. ಮಾರುಕಟ್ಟೆಯಲ್ಲಿ ಇದೀಗ ಬಹುತೇಕ ಕಾರು ನಿರ್ಮಾಣ ಕಂಪನಿಗಳು ಎಲೆಕ್ಟ್ರಿಕ್ ಕಾರು ಮಾದರಿಯನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದೆ. ಇಂದು ನಾವು ನಿಮಗೆ ಕಡಿಮೆ ಬಜೆಟ್‌ನಲ್ಲಿ ಖರೀದಿದ ಮಾಡಬಹುದಾದ ಒಂದು ಉತ್ತಮ ಎಲೆಕ್ಟ್ರಿಕ್ ಕಾರಿನ ಕುರಿತಾಗಿ ಮಾಹಿತಿ ನೀಡುತ್ತಿದ್ದೇವೆ.
ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ತನ್ನ ಹೊಚ್ಚ ಹೊಸ ಮೈಕ್ರೋ ಎಸ್‌ಯುವಿಯಾದ ಟಾಟಾ ಪಂಚ್ ಎಲೆಕ್ಟ್ರಿಕ್ ಅನ್ನು ಬಿಡುಗಡೆ ಮಾಡಿತ್ತು. ನಾವಿದನ್ನು ಈಗಾಗಲೇ ರಿವ್ಯೂವ್ ಮಾಡಿದ್ದು, ಇಂದಿನ ಈ ಲೇಖನದಲ್ಲಿ ಯಾಕೆ ನೀವು ಎಲೆಕ್ಟ್ರಿಕ್ ಕಾರು ಕೊಳ್ಳುವಾಗ ಪಂಚ್ ಇವಿಯನ್ನು ಸಹ ಗಮನಿಸಬೇಕು ಎಂಬುದನ್ನು ನಿಮಗೆ ತಿಳಿಸಲಿದ್ದೇವೆ.

ಡಿಸೈನ್: ಮೊದಲ ನೋಟದಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ (TATA Punch EV) ಅನ್ನು ನೋಡಿದರೆ ಥೇಟ್ ಟಾಟಾ ಪಂಚ್ ಐಸಿಇ ಎಂಜಿನ್ ಕಾರಿನಂತೆಯೇ ಕಾಣುತ್ತದೆ. ಹವದು, ಇದರ ಗಾತ್ರ ಮತ್ತು ಇತರ ಬಹುತೇಕ ಡಿಸೈನ್ ವಿನ್ಯಾಸಗಳು ಆ ಕಾರಿನಂತೆಯೇ ಇದ್ದು ಪೆಟ್ರೋಲ್ ಬದಲಾಗಿ ಇದು ಎಲೆಕ್ಟ್ರಿಕ್‌ನಲ್ಲಿ ಲಭ್ಯವಿರುವುದೇ ಪ್ರಮುಖವಾದ ಬದಲಾವಣೆ. ಆದರೆ ಇದರಲ್ಲಿ ಆ ಕಾರಿಗಿಂತಲೂ ಹಲವು ಫೀಚರ್‌ಗಳನ್ನು ಸೇರಿಸಲಾಗಿದ್ದು ಇದು ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಎರಡು ಮಾತಿಲ್ಲ.
ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್‌ನಲ್ಲಿ ಸಂಪೂರ್ಣ ಎಲ್‌ಇಡಿ ಲೈಟಿಂಗ್ ಸೆಟ್‌ಅಪ್ ಅನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿನ ಗ್ರಿಲ್ ಸಂಪೂರ್ಣ ಮುಚ್ಚಿದ್ದು ಇದರಲ್ಲಿಯೇ 360 ಡಿಗ್ರೀ ಕ್ಯಾಮೆರಾವನ್ನು ಸಹ ಇರಿಸಲಾಗಿದೆ. ಇದು ಮಾತ್ರವಲ್ಲದೇ ಕಾರಿನ ಗ್ರಿಲ್‌ನಲ್ಲಿಯೇ ನಿಮಗೆ ಚಾರ್ಜಿಂಗ್ ಸಾಕೆಟ್ ಸಹ ದೊರಕಿದ್ದು, ಇದು ಈ ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಇಂಬು ನಿಡುತ್ತದೆ ಎನ್ನಬಹುದು.

ಫೀಚರ್: ಕಾರಿನ ಒಳಭಾಗದಲ್ಲಿ ಗಮನಿಸಿದರೆ ಎಲ್ಲಾ ಸೀಟ್‌ಗಳಲ್ಲಿಯೂ ಅಂಡರ್ ಥೈ ಸಪೋರ್ಟ್ ಮತ್ತು ಲೆಗ್‌ರೂಮ್, ಹೆಡ್ ರೂಮ್ ಸಾಕಷ್ಟಿದೆ. 10.25 ಇಂಚ್‌ನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ನೀಡಿದ್ದು, ಇದರಲ್ಲಿ ಕಾರಿನ ಕುರಿತಾದ ಎಲ್ಲಾ ಮಾಹಿತಿಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.
ಬ್ಯಾಟರಿ: ಕಾರಿಲ್ಲಿ ಆರು ಏರ್ ಬ್ಯಾಗ್‌ಗಳು ಸಹ ಸಿಗುತ್ತದೆ. ಇದರ ಜೊತೆಗೆ ಎಬಿಎಸ್ ಮತ್ತು ಇಬಿಡಿ, ಡಿಸ್ಕ್ ಬ್ರೇಕ್‌ಗಳು, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ವ್ಯೂವ್ ಮಿರರ್‌ಗಳು ಲಭ್ಯವಿದೆ. ಟಾಟಾ ಮೋಟಾರ್ಸ್ ಈ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಅನ್ನು ಹೊಸ ಒಂದು ಪ್ಲಾಟ್ ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದ್ದು, ಇದರ ಇತರ ಕಂಪನಿಗಳಿಗೆ ಪ್ರಭಲ ಪ್ರತಿಸ್ಪರ್ಧಿಯಾಗುವುದರಲ್ಲಿ ಎರಡು ಮಾತಿಲ್ಲ.

ಟಾಟಾ ಪಂಚ್ ಇವಿ ಬ್ಯಾಟರಿ ಮತ್ತು ಪವರ್: ಟಾಟಾ ಮೋಟಾರ್ಸ್ ಈ ಕಾರಿಗೆ ಎರಡು ವೇರಿಯಂಟ್ ಅನ್ನು ನೀಡಿದ್ದಾರೆ. ಒಂದು ಟಾಟಾ ಪಂಚ್ ಇವಿ ಮತ್ತು ಇನ್ನೊಂದು ಟಾಟಾ ಪಂಚ್ ಇವಿ ಲಾಂಗ್ ರೇಂಜ್. ಟಾಟಾ ಪಂಚ್ ಇವಿ ವೇರಿಯಂಟ್‌ನಲ್ಲಿ 25kWh ಬ್ಯಾಟರಿ ಪ್ಯಾಕ್ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 315km ಕಿಮೀ ರೇಂಜ್ ನೀಡುವುದರ ಜೊತೆಗೆ 80.46bhp/ 114Nm ಪವರ್ ಅನ್ನು ಸಹ ಉತ್ಪಾದಿಸುತ್ತದೆ.
ಟಾಟಾ ಪಂಚ್ ಇವಿಯ ಮತ್ತೊಂದು ವೇರಿಯಂಟ್ ಆದ ಲಾಂಗ್ ರೇಂಜ್ ನಲ್ಲಿ 35kWh ಬ್ಯಾಟರಿ ಪ್ಯಾಕ್ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 421km ಕಿಮೀ ರೇಂಜ್ ನೀಡುವುದರ ಜೊತೆಗೆ120.7bhp ಮತ್ತು 190Nm ಪವರ್ ಅನ್ನು ಸಹ ಉತ್ಪಾದಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.
ಸುಮಾರು 10.99 lakh (ex-showroom) ಇಂದು ಆರಂಭವಾಗುವ ಈ ಕಾರು ಇವಿ ಕ್ಷೇತ್ರದಲ್ಲಿ ಟಾಟಾಗೆ ಹೊಸ ಮೈಲುಗಲ್ಲು ಸ್ಥಾಪಿಸುವಲ್ಲಿ ಸಹಕಾರಿಯಾಗದೇ ಇರದು ಎಂಬುದು ನಮ್ಮ ಅಭಿಪ್ರಾಯ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ.


Click it and Unblock the Notifications