ಹೊಸ ದಾಖಲೆ ಬರೆದ ಶಿಯೋಮಿ ಎಲೆಕ್ಟ್ರಿಕ್ ಕಾರು: ಭಾರತಕ್ಕೆ ಸ್ಮಾರ್ಟ್‌ಫೋನ್‌ಗಳಂತೆ ಅಗ್ಗದ ಬೆಲೆಯಲ್ಲಿ ಬರುತ್ತಾ?

ಶಿಯೋಮಿ (Xiaomi) ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಚೀನಾದ ದೈತ್ಯ ಬ್ರ್ಯಾಂಡ್ ಆಗಿದೆ. ಶಿಯೋಮಿ ಬ್ರ್ಯಾಂಡ್ ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಕಡಿಮೆ ಬೆಲೆಗೆ ಫೀಚರ್-ರಿಚ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಜನಪ್ರಿಯತೆಗಳಿಸಿದೆ. ಕೆಲವು ತಿಂಗಳ ಹಿಂದೆ, ಕಂಪನಿಯು ಕೇವಲ ಸ್ಮಾರ್ಟ್‌ಫೋನ್ ತಯಾರಿಕೆಯ ಜೊತೆ ದೊಡ್ಡ ಸಾಮರ್ಥ್ಯವನ್ನು ಹೊಂದಿರುವ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ಕಾಲಿಟ್ಟಿತು. ಇದೀಗ ಶಿಯೋಮಿ ಕಂಪನಿಯ ಮೊದಲ ಕಾರ್ ಆದ ಶಿಯೋಮಿ SU7 (Xiaomi SU7) ಎಲೆಕ್ಟ್ರಿಕ್ ಕಾರು ಹೊಸ ಮೈಲಿಗಲ್ಲನ್ನು ಸಾಧಿಸಿದೆ.

SU7 ಜಾಗತಿಕ ಮಾರುಕಟ್ಟೆಯಲ್ಲಿ ಶಿಯೋಮಿ ಮಾರಾಟ ಮಾಡುವ ಏಕೈಕ ಎಲೆಕ್ಟ್ರಿಕ್ ವಾಹನವಾಗಿದೆ. ಇದು ಎಲೆಕ್ಟ್ರಿಕ್ ಸೆಡಾನ್ ಆಗಿದೆ. ಕಳೆದ ವರ್ಷ ಬಿಡುಗಡೆಯಾದ ಈ ಕಾರು 230 ದಿನಗಳಲ್ಲಿ 1 ಲಕ್ಷ ಯುನಿಟ್‌ಗಳ ಮೈಲಿಗಲ್ಲನ್ನು ದಾಟಿದೆ ಎಂದು ಶಿಯೋಮಿ ಘೋಷಿಸಿತು. SU7 ಬಿಡುಗಡೆಯಾದ ನಂತರ ಕೇವಲ 27 ನಿಮಿಷಗಳಲ್ಲಿ 50000 ಆರ್ಡರ್‌ಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು.

Xiaomi SU7

2024ರ ಆರಂಭದಲ್ಲಿ 60,000 ಎಲೆಕ್ಟ್ರಿಕ್ ಸೆಡಾನ್ ಯುನಿಟ್ ಗಳನ್ನು ಉತ್ಪಾದಿಸುವುದು ಕಂಪನಿಯ ಯೋಜನೆಯಾಗಿತ್ತು. ಆದರೆ SU7 ಇವಿಯ ಬೇಡಿಕೆಯು ಉತ್ಪಾದನೆಯನ್ನು ಹೆಚ್ಚಿಸಿದರು. ಈ ವರ್ಷ ಜುಲೈ ತಿಂಗಳ ವೇಳೆಗೆ ಉತ್ಪಾದನೆಯನ್ನು ಹೆಚ್ಚಾಗಿದೆ. 2025ರ ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಉತ್ಪಾದನೆಯು 120,000 ಯುನಿಟ್ ಗಳನ್ನು ದಾಟುವ ನಿರೀಕ್ಷೆಯಿದೆ. ಈ ತಿಂಗಳ ಅಂತ್ಯದ ವೇಳೆಗೆ ಇದು 1 ಲಕ್ಷ ಯೂನಿಟ್‌ಗಳ ವಿತರಣೆಯ ಗಡಿಯನ್ನು ದಾಟುವ ನಿರೀಕ್ಷೆಯಿದೆ.

ಶಿಯೋಮಿ SU7 (Xiaomi SU7) ಎಲೆಕ್ಟ್ರಿಕ್ ಸೆಡಾನ್ ಬೆಲೆಯು 2,15,900 ಯುವಾನ್‌ನಿಂದ ಪ್ರಾರಂಭವಾಗುತ್ತದೆ. ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ಸುಮಾರು 25.34 ಲಕ್ಷ ರೂ. ಆಗಿದೆ. ಈ ಎಲೆಕ್ಟ್ರಿಕ್ ಸೆಡಾನ್ ಒಂಬತ್ತು ಬಣ್ಣ ಆಯ್ಕೆಗಳು ಮತ್ತು ಮೂರು ರೂಪಾಂತರಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಹೊಸ ಎಲೆಕ್ಟ್ರಿಕ್ ಸೆಡಾನ್ ಯಂಗ್ ಮತ್ತು ಸ್ಪೋರ್ಟಿನೆಸ್‌ನ ಈ ಮಿಶ್ರಣವು ಕಡಿಮೆ-ಸ್ಲಂಗ್ ವಿನ್ಯಾಸ ಮತ್ತು ಕೂಪ್ ತರಹದ ರೂಫ್‌ಲೈನ್‌ನಿಂದ ಮತ್ತಷ್ಟು ಆಕರ್ಷಕವಾಗಿಸಿದೆ.

ಶಿಯೋಮಿ SU7 ಅಡಾಪ್ಟಿವ್ LED ಹೆಡ್‌ಲೈಟ್‌ಗಳೊಂದಿಗೆ 400-ಮೀಟರ್ ಥ್ರೋ ಹೊಂದಿದ್ದು, ರಾತ್ರಿಯಲ್ಲಿ ಉತ್ತಮ ಗೋಚರತೆಯನ್ನು ನೀಡುತ್ತದೆ. ಗೋಚರತೆಯ ಬಗ್ಗೆ ಹೇಳುವುದಾದರೆ, ಮಾದರಿಯು ದೊಡ್ಡ 56-ಇಂಚಿನ ಹೆಡ್ಸ್-ಅಪ್ ಡಿಸ್ ಪ್ಲೇಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 16.1-ಇಂಚಿನ 3K ಟಚ್‌ಸ್ಕ್ರೀನ್‌ ನಿಂದ ಇಂಚುಗಳಷ್ಟು ಗಾತ್ರದ ದೊಡ್ಡ ಇನ್ಫೋಟೈನ್‌ಮೆಂಟ್ ಯುನಿಟ್ ಅನ್ನು ಹೊಂದಿದೆ.

ಜೊತೆಗ, ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 2 ಶಿಯೋಮಿ ಪಾಡ್ 6S Pro ಟ್ಯಾಬ್ಲೆಟ್‌ಗಳನ್ನು ಒಳಗೊಂಡಿವೆ. ಇದರೊಂದಿಗೆ ಹೆಡ್-ಅಪ್ ಡಿಸ್ಪ್ಲೇ ಮತ್ತು ಹಿಂದಿನ ಸೀಟಿನ ಪ್ರಯಾಣಿಕರಿಗೆ ಎರಡು ಟಚ್‌ಸ್ಕ್ರೀನ್‌ಗಳು ಸಹ ಇವೆ. ಕಂಪನಿಯ ಸ್ವಾಮ್ಯದ 'ಹೈಪರ್‌ಓಎಸ್' ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಶಿಯೋಮಿ ತನ್ನ ಮೊಬೈಲ್ ಫೋನ್‌ಗಳಿಗೆ ಹೆಸರುವಾಸಿಯಾಗಿದೆ, ಅದರಂತೆ, ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಮೀಸಲಾದ ಫೋನ್ ಹೋಲ್ಡರ್ ಅನ್ನು ನೀಡುವ ಮೂಲಕ ಇದಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದೆ.

ಇದು ಸ್ಟ್ಯಾಂಡರ್ಡ್ 50W ಚಾರ್ಜಿಂಗ್ ಪ್ಯಾಡ್‌ಗೆ ಹೆಚ್ಚುವರಿಯಾಗಿದೆ. ಇದಕ್ಕಾಗಿ ಡೋರ್ ಪ್ಯಾಡ್‌ನಲ್ಲಿ ವಿಶೇಷ ಪಾಕೆಟ್‌ಗಳನ್ನು ಸಹ ಒಳಗೊಂಡಿದೆ. ಸುರಕ್ಷತೆಯ ಮುಂಭಾಗದಲ್ಲಿ, Xiaomi SU7 ಅನ್ನು ಏಳು ಏರ್‌ಬ್ಯಾಗ್‌ಗಳು ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಸಜ್ಜುಗೊಳಿಸಿದೆ, ಇದು ಲಿಡಾರ್ ಮತ್ತು ಹೈ-ಡೆಫಿನಿಷನ್ ಕ್ಯಾಮೆರಾಗಳನ್ನು ಬಳಸುತ್ತದೆ. ಅನಾವರಣದ ಸಮಯದಲ್ಲಿ SU7 ನ ಸಂಪೂರ್ಣ ಆಟೋಮ್ಯಾಟಿಕ್ ವ್ಯಾಲೆಟ್ ಪಾರ್ಕಿಂಗ್ ಸಾಮರ್ಥ್ಯಗಳನ್ನು ಪ್ರದರ್ಶಿಸುವ ವೀಡಿಯೊವನ್ನು ಶಿಯೋಮಿ ಹಂಚಿಕೊಂಡಿದೆ.

ಶಿಯೋಮಿ SU7 ಮ್ಯಾಕ್ಸ್ ಎಲೆಕ್ಟ್ರಿಕ್ ಮಾದರಿಯು ಡ್ಯುಯಲ್-ಮೋಟಾರ್ ಸೆಟಪ್ ಅನ್ನು ಹೊಂದಿದೆ, ಇದು ಗರಿಷ್ಠ 664 bhp ಮತ್ತು 838 Nm ಟಾರ್ಕ್ ಅನ್ನು ಸಂಚಿತವಾಗಿ ಅಭಿವೃದ್ಧಿಪಡಿಸುತ್ತದೆ. ಈ ಶಿಯೋಮಿ SU7 ಮ್ಯಾಕ್ಸ್ ಎಲೆಕ್ಟ್ರಿಕ್ ಕಾರು 2.78 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರು 10.67 ಸೆಕೆಂಡುಗಳಲ್ಲಿ 0-200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು ಭಾರತಕ್ಕೂ ಬರಬಹುದು ಎಂದು ಹೇಳಲಾಗುತ್ತಿದೆ.

Article Published On: Thursday, November 14, 2024, 13:33 [IST]
English summary
Xiaomi su7 electric car crosses 1 lakh production milestone details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+