2024ರಲ್ಲಿ ಭಾರತದಲ್ಲಿ ಬಿಡುಗಡೆಗೊಂಡ ಜರ್ಬದಸ್ತ್ ಸೆಡಾನ್ ಕಾರುಗಳು
ವಿಶ್ವದಲ್ಲಿಯೇ ಭಾರತ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಹತ್ತಾರು ಕಂಪನಿಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಹಾಗೂ ಎಂಪಿವಿಗಳನ್ನು ಮಾರಾಟ ಮಾಡುತ್ತಿವೆ. ಅದರಲ್ಲೂ ಟಾಟಾ, ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಸೇರಿದಂತೆ ವಿವಿಧ ಕಾರು ತಯಾರಕರಿಗೆ ಈ ವರ್ಷ ಹೆಚ್ಚು ಮಹತ್ವದಾಗಿದೆ. ಈ ವರ್ಷದ ಹಲವು ಜನಪ್ರಿಯ ಕಾರುಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದರಲ್ಲಿ ಭಾರತದಲ್ಲಿ ಈ ವರ್ಷ ಬಿಡುಗಡೆಗೊಂಡ ಪ್ರಮುಖ ಸೆಡಾನ್ ಕಾರುಗಳ ( (sedan cars) ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಹೋಂಡಾ ಅಮೇಜ್: ಹೋಂಡಾ ಕಾರ್ಸ್ ಇಂಡಿಯಾ (Honda Cars India) ತನ್ನ ಮೂರನೇ ತಲೆಮಾರಿನ ಅಮೇಜ್ ಕಾರನ್ನು ಈ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಲೆವೆಲ್-2 ADAS ಮತ್ತು ಆಕರ್ಷಕ ವಿನ್ಯಾಸದಲ್ಲಿ ಬಂದಿದೆ. ಹೋಂಡಾ ಅಮೇಜ್ ಸೆಡಾನ್ ಎಲ್ಲಾ ರೂಪಾಂತರಗಳು 1.2-ಲೀಟರ್ ನ್ಯಾಚುರಲಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿದೆ. 90 ಪವರ್ ಮತ್ತು 110 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಈ ಕಾರು 18.65 ರಿಂದ 19.46 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಹೋಂಡಾ ಅಮೇಜ್ VX ವೆರಿಯೆಂಟ್ ಲೇನ್‌ವಾಚ್ ಕ್ಯಾಮೆರಾ, ರಿಯರ್ ಡಿಫಾಗರ್ ಮತ್ತು ರಿಯರ್‌ವ್ಯೂ ಕ್ಯಾಮೆರಾವನ್ನು ಒಳಗೊಂಡಿವೆ. ಈ ಸೇರ್ಪಡೆಗಳು ವಾಹನದ ಒಟ್ಟಾರೆ ಸುರಕ್ಷತಾ ಪ್ರೊಫೈಲ್ ಅನ್ನು ಹೆಚ್ಚಿಸುತ್ತವೆ, ಇದು ಸೌಕರ್ಯದ ಜೊತೆಗೆ ಭದ್ರತೆಗೆ ಆದ್ಯತೆ ನೀಡುವವರಿಗೆ ಆಕರ್ಷಕ ಆಯ್ಕೆಯಾಗಿದೆ.
ಮಾರುತಿ ಸುಜುಕಿ ಡಿಜೈರ್: ಈ ಹೊಸ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್ ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸ ಒಳಗೊಂಡಿದೆ. ಕೆಲವೇ ದಿನಗಳ ಹಿಂದೆ ಈ ಕಾರನ್ನು ಅನಾವರಣಗೊಳಿಸಲಾಗಿದ್ದು, ವಿನ್ಯಾಸ ಸಂಬಂಧ ಹಲವಾರು ವಿಚಾರಗಳು ಬಹಿರಂಗಗೊಂಡಿವೆ. ನೂತನ ಕಾರು, ಮಧ್ಯಮ ವರ್ಗದ ಜನರನ್ನು ತನ್ನತ್ತ ಆಕರ್ಷಿಸುವ ಸಲುವಾಗಿ ಪ್ರೀಮಿಯಂ ಲುಕ್‌ನ್ನು ನೀಡಲಾಗಿದೆ.

ಮಾರುತಿ ಸುಜುಕಿ ಡಿಜೈರ್ ಸೆಡಾನ್ ಕಾರು, ಸ್ವಿಫ್ಟ್‌ನಂತೆ 1.2-ಲೀಟರ್ 3-ಸಿಲಿಂಡರ್ ಜಡ್-ಸೀರೀಸ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 80 ಬಿಹೆಚ್‍ಪಿ ಪವರ್ ಮತ್ತು 112 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿರಲಿದೆ ಎನ್ನಲಾಗಿದೆ.
ಬಿವೈಡಿ ಸೀಲ್: ಬಿವೈಡಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಬಹುನಿರೀಕ್ಷಿತ ಹೊಸ ಬಿವೈಡಿ ಸೀಲ್ (BYD Seal) ಎಲೆಕ್ಟ್ರಿಕ್ ಕಾರನ್ನು ಈ ಹೊಸ ಬಿಡುಗಡೆಗೊಳಿಸಿ ಹೊಸ ಸಂಚಲನ ಮೂಡಿಸಿದೆ. ಬಿವೈಡಿ ಸೀಲ್ ದೇಶಾದ್ಯಂತ ಸೀಲ್‌ಗಾಗಿ 1,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ದಾಖಲಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಈ ಪ್ರೀಮಿಯಂ ಕಾರು ಭರ್ಜರಿ ಬುಕ್ಕಿಂಗ್ ಪಡೆದುಕೊಂಡಿದೆ.
ಬಿವೈಡಿ ಎಲೆಕ್ಟ್ರಿಕ್ ಸೆಡಾನ್ ರೇರ್-ವ್ಹೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ರೂಪಾಂತರಗಳಲ್ಲಿ ಲಭ್ಯವಿದೆ. ಸೆಡಾನ್ ಅನ್ನು ಎರಡು-ಹಿಂಭಾಗದ ವೀಲ್ ಡ್ರೈವ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಈ ಕಾರಿನ ಬೇಸ್ ಡೈನಾಮಿಕ್ ರೂಪಾಂತರವು 201 bhp ಮತ್ತು 310 Nm ಟಾರ್ಕ್ ಅನ್ನು ಉತ್ಪಾದಿಸಿದರೆ, ಪ್ರೀಮಿಯಂ ಟ್ರಿಮ್‌ನಲ್ಲಿ ಹೆಚ್ಚು 308 bhp ಪವರ್ ಮತ್ತು 360 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಟೊಯೊಟಾ ಕ್ಯಾಮ್ರಿ: ಜನಪ್ರಿಯ ಟೊಯೊಟಾ ತನ್ನ ಹೊಸ ತಲೆಮಾರಿನ ಟೊಯೊಟಾ ಕ್ಯಾಮ್ರಿ (Toyota Camry) ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.48 ಲಕ್ಷವಾಗಿದೆ. ಟೊಯೊಟಾ ಕ್ಯಾಮ್ರಿ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಸಿ-ಕ್ಲಾಸ್ ಲಿಮೋಸಿನ್ ಮತ್ತು ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.
ಒಂಬತ್ತನೇ ತಲೆಮಾರಿನ ಟೊಯೊಟಾ ಕ್ಯಾಮ್ರಿ ಕಾರು TNGA-K ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದ್ದು, ಇದು ಗುರುತ್ವಾಕರ್ಷಣೆಯ ಕೇಂದ್ರ ಮತ್ತು ಸೀಟ್ ಸ್ಥಾನವನ್ನು ಕಡಿಮೆ ಮಾಡುವ ಮೂಲಕ ಸ್ಥಿರತೆ ಮತ್ತು ಡ್ರೈವಿಂಗ್ ಡೈನಾಮಿಕ್ಸ್ ಅನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಈ ಪ್ರೀಮಿಯಂ ಟೊಯೊಟಾ ಕಾರಿನ ಸುರಕ್ಷತಾ ವೈಶಿಷ್ಟ್ಯಗಳಲ್ಲಿ 9 ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿವೆ.


Click it and Unblock the Notifications








