ದುಬಾರಿ ಕಾರಿನಲ್ಲಿ ಫುಲ್ ರೌಂಡ್ಸ್: ಸೋಷಿಯಲ್ ಮೀಡಿಯ ಷೇಕ್ ಮಾಡಿದ ಯೋಗ ಗುರು!
ಪತಂಜಲಿ ಉತ್ಪನ್ನಗಳು ಯಾರಿಗೆ ಗೊತ್ತಿಲ್ಲ ಹೇಳಿ? ಈ ಪತಾಂಜಲಿ ಬ್ರಾಂಡ್ ಹೆಚ್ಚಾಗಿ ಜನಪ್ರಿಯವಾಗಿದ್ದು ಬಾಬಾ ರಾಮದೇವ್ (Baba Ramdev) ಅವರಿಂದ. ರಾಮಕೃಷ್ಣ ಯಾದವ್ ಎಂದು ಕರೆಯಲ್ಪಡುವ ರಾಮ್‌ದೇವ್ ಬಾಬಾ, ಭಾರತದ ಅತ್ಯಂತ ಜನಪ್ರಿಯ ಯೋಗ ಗುರುಗಳಲ್ಲಿ ಒಬ್ಬರಾಗಿದ್ದಾರೆ. ಇವರು ಇತ್ತೀಚೆಗೆ ತಮ್ಮ ಆಶ್ರಮದಲ್ಲಿ ಹೊಸ ಮಹೀಂದ್ರಾ ಥಾರ್ ರೋಕ್ಸ್ (Mahindra Thar Roxx) ಓಡಿಸುತ್ತಾ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಮ್ಮ ಆಶ್ರಮದ ಕಾಂಪೌಂಡ್ ಒಳಗೆ ಕಾರನ್ನು ಉತ್ಸಾಹದಿಂದ ಓಡಿಸುತ್ತಿರುವುದನ್ನು ಕಾಣಬಹುದು.
ಕಾರು ಯಾರದು?: ಬಾಬಾ ರಾಮ್‌ದೇವ್ ಈ ಮಹೀಂದ್ರಾ ಥಾರ್ ರೋಕ್ಸ್ ಖರೀದಿಸಿದ್ದಾರೆಯೇ? ಇಲ್ಲ ಇದು ಅವರದ್ದಲ್ಲ, ಬದಲಾಗಿ ಅವರ ತಂಡದ ಸದಸ್ಯರೊಬ್ಬರು ಖರೀದಿಸಿ ತಂದಾಗ ಅವರು ಅದನ್ನು ಟೆಸ್ಟ್ ಡ್ರೈವ್ ಮಾಡುತ್ತಿದ್ದರು. ಈ ಕಾರನ್ನು ಇತ್ತೀಚೆಗಷ್ಟೇ ಮಹೀಂದ್ರಾ ಕಂಪನಿ ಬಿಡುಗಡೆ ಮಾಡಿದೆ. ಮಹೀಂದ್ರಾ ತನ್ನ 3-ಡೋರ್ ಆವೃತ್ತಿಯನ್ನು ಅಪ್‌ಡೇಟ್ ಮಾಡಿ ಹೊಸ 5-ಡೋರ್ ಥಾರ್ ರಾಕ್ಸ್ ಪರಿಚಯಿಸಿದೆ.

ಬಾಬಾ ಬಳಿ ಲ್ಯಾಂಡ್ ರೋವರ್ ಡಿಫೆಂಡರ್ 130: ಬಾಬಾ ರಾಮ್‌ದೇವ್ ಅವರು, ಲ್ಯಾಂಡ್ ರೋವರ್ ಡಿಫೆಂಡರ್ 130 ಹೊಂದಿದ್ದಾರೆ. 1.5 ಕೋಟಿ ರೂ. ಬೆಲೆಯ ಈ ಕಾರನ್ನು ಕಳೆದ ವರ್ಷ ಜುಲೈನಲ್ಲಿ ಖರೀದಿಸಿದ್ದರು. ಈ ಕಾರನ್ನು ಆಗಾಗ್ಗೆ ಓಡಿಸುವ ಹಲವು ವಿಡಿಯೋಗಳು ವೈರಲ್ ಆಗಿದ್ದವು. ಈ ಎಸ್‌ಯುವಿ 3.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 394 ಬಿಹೆಚ್ ಪವರ್ ಮತ್ತು 550 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಮಹೀಂದ್ರಾ ಎಕ್ಸ್‌ಯುವಿ 700 ಕೂಡ ಇದೆ: ಲ್ಯಾಂಡ್ ರೋವರ್ ಡಿಫೆಂಡರ್ 130 ಕಾರನ್ನು ಖರೀದಿಸುವ ಮೊದಲು ಬಾಬಾ ರಾಮದೇವ್, ಮಹೀಂದ್ರಾ ಎಕ್ಸ್‌ಯುವಿ 700 ಖರೀದಿಸಿದ್ದರು. ಅವರು ಈ ಎಸ್‌ಯುವಿಯನ್ನು ಸಹ ಓಡಿಸುತ್ತಾ ಈಗಾಗಲೇ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಈ ಕಾರು ಈಗ ಆಶ್ರಮದಲ್ಲಿದ್ದು, ಸಣ್ಣ ಪುಟ್ಟ ಕೆಲಸ-ಕಾರ್ಯಗಳಿಗೆ ಬಳಸಲಾಗುತ್ತದೆ.

ಬಾಬಾ ರಾಮದೇವ್ ಅವರ ಹೀರೋ ಇಂಪಲ್ಸ್ ರೈಡ್: ಐಷಾರಾಮಿ ಎಸ್‌ಯುವಿಗಳನ್ನು ಓಡಿಸುವುದರ ಹೊರತಾಗಿ, ಬಾಬಾ ರಾಮ್‌ದೇವ್ ಮೋಟಾರ್ ಸೈಕಲ್ ಓಡಿಸುವುದನ್ನು ಸಹ ಇಷ್ಟಪಡುತ್ತಾರೆ. ಮೋಟಾರ್‌ಸೈಕಲ್ ರೈಡ್ ಹಾಗೂ ಸೈಕಲ್ ರೈಡ್‌ಗಳನ್ನು ಹೋಗುವ ಹಲವು ವಿಡಿಯೋಗಳು ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಗ್‌ನಲ್ಲಿವೆ. ಅದರಲ್ಲೊಂದು ಹೀರೋ ಇಂಪಲ್ಸ್ ಮೋಟಾರ್‌ಸೈಕಲ್ ಸವಾರಿ ಹೆಚ್ಚು ವೈರಲ್ ಆಗಿತ್ತು.
ಈ ಸಣ್ಣ ವೀಡಿಯೊದಲ್ಲಿ, ಬಾಬಾ ರಾಮ್‌ದೇವ್ ಈ ಬೈಕ್ ಅನ್ನು ಆಕ್ರಮಣಕಾರಿಯಾಗಿ ಓಡಿಸುತ್ತಿರುವುದನ್ನು ಕಾಣಬಹುದು. ಒಮ್ಮೆ, ಬಾಬಾ ರಾಮ್‌ದೇವ್ ಅವರು ಸದ್ಗುರು ಅವರೊಂದಿಗೆ ಮೋಟಾರ್‌ಸೈಕಲ್ ಸವಾರಿ ಮಾಡುತ್ತಿರುವುದು ಕೂಡ ವೈರಲ್ ಆಗಿತ್ತು. ಇಬ್ಬರೂ ಈಶಾ ಫೌಂಡೇಶನ್ ಕಾಂಪೌಂಡ್‌ನಲ್ಲಿ ಡುಕಾಟಿ ಸ್ಕ್ರಾಂಬ್ಲರ್‌ನಲ್ಲಿ ಸವಾರಿ ಮಾಡುತ್ತಿರುವುದು ಸಹ ವೈರಲ್ ಆಗಿತ್ತು.
ಹಾಗೆಯೇ ಈ ಹಿಂದೆ ಬಾಬಾ ರಾಮ್‌ದೇವ್ ಹಲವು ಟ್ರೋಲ್‌ಗಳಿಗೂ ಗುರಿಯಾಗಿದ್ದರು. ಇವುಗಳಲ್ಲಿ ಮುಖ್ಯವಾಗಿ ಸೈಕಲ್ ತುಳಿಯುತ್ತಾ ಬಂದು ಬೀಳುವ ವಿಡಿಯೋ ಸೋಷಿಯಲ್ ಮೀಡಿಯಾವನ್ನು ಷೇಕ್ ಮಾಡಿತ್ತು. ಫುಲ್ ಜೋಷ್‌ನಲ್ಲಿ ಬಂದು ಏಕಾಏಕಿ ಕೆಳಗೆ ಬಿದ್ದು ಗಾಯಗೊಳ್ಳುವ ವಿಡಿಯೋವನ್ನು ದೇಶದ ಯುವಜನತೆ ತುಂಬಾ ಟ್ರೋಲ್ ಮಾಡಿತ್ತು. ರಾಮ್‌ದೇವ್ ಬಾಬಾರ ಇಂತಹ ವಿಡಿಯೋಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications