ಭಾರತದಲ್ಲಿ ದುಬಾರಿ ಬೆಲೆಗೆ ಹೊಸ 2025ರ ಚೀನಾ ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ
ಚೀನಾ ಮೂಲದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಬಿವೈಡಿ ಹೊಸ ಕಾರನ್ನು ಭಾರತದಲ್ಲಿ ಇಂದು ಬಿಡುಗಡೆ ಮಾಡಿದೆ. ಈಗಾಗಲೇ ಬಿಡುಗಡೆಯಾಗಿ ವಿಶ್ವದಾದ್ಯಂತ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದ 'ಬಿವೈಡಿ ಸೀಲ್' ಇದೀಗ ನವೀಕರಣಗಳನ್ನು ಪಡೆದುಕೊಂಡು 2025ರ ಸೀಲ್ ಎಲೆಕ್ಟ್ರಿಕ್ ಸೆಡಾನ್ ಆಗಿ ಬಿಡುಗಡೆಯಾಗಿದೆ. ಸದ್ಯ ಭಾರತದಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ಸೆಡಾನ್‌ಗಳ ಸಾಲಿನಲ್ಲಿ ಐಷಾರಾಮಿ ಬ್ರಾಂಡ್‌ಗಳಿಗೆ ಸೆಡ್ಡು ಹೊಡೆಯುವಂತಹ ಫೀಚರ್ಸ್‌ನೊಂದಿಗೆ ಈ ಕಾರು ಮತ್ತೊಮ್ಮೆ ಮಿಂಚುತ್ತಿದೆ. ಹೊಸ ಬಿವೈಡಿ ಸೀಲ್ ಸಂಪೂರ್ಣ ವಿವರಗಳು ಇಲ್ಲಿವೆ.
ಮೂರು ವಿಭಿನ್ನ ಬ್ಯಾಟರಿ ಪವರ್ ಆಯ್ಕೆಯಲ್ಲಿ ಲಭ್ಯವಿರುವ ಈ ಕಾರು, 61.44 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿರುವ ಡೈನಾಮಿಕ್ ರಿಯರ್ ವೀಲ್ ಡ್ರೈವ್ ವೇರಿಯೆಂಟ್ ಬೆಲೆಗಳು 41 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ. ಲಾಂಗ್ ರೇಂಜ್ ಮತ್ತು ಹೆಚ್ಚಿನ ಫೀಚರ್‌ಗಳನ್ನು ಬಯಸುವವರಿಗೆ, 82.56 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಪ್ರೀಮಿಯಂ ರಿಯರ್ ವೀಲ್ ಡ್ರೈವ್ ಲಭ್ಯವಿದ್ದು, ಇದರ ಬೆಲೆಯು 45.70 ಲಕ್ಷ ರೂ. ಇದೆ.

ಹೆಚ್ಚು ಪರ್ಫಾಮೆನ್ಸ್ ಬಯಸುವ ಉತ್ಸಾಹಿ ಚಾಲಕರಿಗಾಗಿ 'ಸೀಲ್ ಪರ್ಫಾಮೆನ್ಸ್ ಆಲ್ ವೀಲ್ ಡ್ರೈವ್' ವೇರಿಯೆಂಟ್ ಇದ್ದು, ಇದರ ಬೆಲೆಯು 53.15 ಲಕ್ಷ ರೂ.ಗಳಾಗಿದೆ. ಟ್ವಿನ್ ಮೋಟರ್‌ಗಳನ್ನು ಒಂದೇ ದೊಡ್ಡ ಬ್ಯಾಟರಿ ಪ್ಯಾಕ್ ನೊಂದಿಗೆ ಸಂಯೋಜಿಸಿ ಉತ್ತಮ ಪರ್ಫಾಮೆನ್ಸ್ ಹೊರಹಾಕಿವಂತೆ ಈ ವೇರಿಯೆಂಟ್ ಅನ್ನು ನಿರ್ಮಿಸಲಾಗಿದೆ.
ಈ ಕಾರಿನಲ್ಲಿ ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಬಿವೈಡಿಯ ಡೈಸಸ್-ಸಿ ಇಂಟೆಲಿಜೆಂಟ್ ಡ್ಯಾಂಪಿಂಗ್ ಸಿಸ್ಟಮ್ (ನಿರಂತರ ತೇವಾಂಶ ನಿಯಂತ್ರಣಕ್ಕೆ ಹೋಲುತ್ತದೆ) ನ ಸೆಲೆಕ್ಟಿವ್ ಡ್ಯಾಂಪರ್ಗಳನ್ನು ಅಳವಡಿಸಿಕೊಳ್ಳುವುದು ಪ್ರಮುಖ ಟೆಕ್ನಿಕಲ್ ಹೈಲೈಟ್‌ಗಳು ಆಗಿವೆ. ಎರಡೂ ತಂತ್ರಜ್ಞಾನಗಳು ಸುಧಾರಿತ ಸವಾರಿ ಗುಣಮಟ್ಟ ಮತ್ತು ನಿರ್ವಹಣೆಯನ್ನು ಅನುಮತಿಸುತ್ತವೆ.

ಹೊಸ ಬಿವೈಡಿ ಸೀಲ್ ಇಂಟೀರಿಯರ್‌ನಲ್ಲಿ ಹೊಸ ಸಿಲ್ವರ್ ಕೋಟೆಡ್ ಡಿಮ್ಮಿಂಗ್ ರೂಫ್ ಅನ್ನು ಪರಿಚಯಿಸಲಾಗಿದೆ. ಎಲೆಕ್ಟ್ರಿಕ್ ಪವರ್ಡ್ ಸನ್ ಶೇಡ್ ಅನ್ನು ಸ್ಟ್ಯಾಂಡರ್ಡ್ ಆಗಿ ಎಲ್ಲಾ ವೇರಿಯೆಂಟ್‌ಗಳಲ್ಲಿ ನೀಡಲಾಗಿದೆ. ಕ್ಲೈಮೆಟ್ ಕಂಟ್ರೋಲ್ ವ್ಯವಸ್ಥೆಗೆ ನವೀಕರಣಗಳಾಗಿ - ದೊಡ್ಡ ಕಂಪ್ರೆಸರ್ ಮತ್ತು ಹೊಸ ಶುದ್ಧೀಕರಣ ಮಾಡ್ಯೂಲ್ ಅನ್ನು ನೀಡಿರುವುದು ಇತರ ಮುಖ್ಯಾಂಶಗಳಾಗಿವೆ.
ಈ ಸೆಡಾನ್ ಲಿಥಿಯಂ ಐರನ್ ಫಾಸ್ಫೇಟ್ (ಎಲ್ಎಫ್‌ಟಿ) ಕಡಿಮೆ-ವೋಲ್ಟೇಜ್ ಬ್ಯಾಟರಿಯನ್ನು ಹೊಂದಿದ್ದು, ಸಾಮಾನ್ಯ ಬ್ಯಾಟರಿ ವ್ಯವಸ್ಥೆಗಳಿಗಿಂತ ಆರು ಪಟ್ಟು ಹಗುರವಾಗಿದೆ. ಸೆಲ್ಫ್-ಡಿಸ್ಚಾರ್ಜ್ ದರವನ್ನು ಐದು ಪಟ್ಟು ಕಡಿಮೆ ನೀಡುತ್ತದೆ. 2025ರ ಬಿವೈಡಿ ಸೀಲ್ ಕೇವಲ 3.8 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನುಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರ್ಚ್ 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ, ಸೀಲ್ ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಲ್ಪಟ್ಟಿದೆ. ಬ್ರಾಂಡ್‌ನ ಭಾರತೀಯ ಶ್ರೇಣಿಯಲ್ಲಿ ಪ್ರಸ್ತುತ ಅಟೋ 3 ಕ್ರಾಸ್ ಒವರ್, ಇಮ್ಯಾಕ್ಸ್ 7 ಎಂಪಿವಿ ಮತ್ತು ಇತ್ತೀಚೆಗೆ ಬಿಡುಗಡೆಯಾದ ಸೀಲಿಯನ್ 7 ಸೇರಿವೆ. ಇವೆಲ್ಲವು ಬಿವೈಡಿಗೆ ಭಾರತದಲ್ಲಿ ಭಾರೀ ಜನಪ್ರಿಯತೆ ತಂದುಕೊಟ್ಟಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








