ಇತ್ತೀಚೆಗಷ್ಟೆ ಬಿಡುಗಡೆಯಾದ ಹೊಸ 2025ರ ಚೀನಾ ಎಲೆಕ್ಟ್ರಿಕ್ ಸೆಡಾನ್ ವಿಶೇಷತೆಗಳು!

ವಿಶ್ವದಾದ್ಯಂತ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದ 'ಬಿವೈಡಿ ಸೀಲ್' ಮಾರ್ಚ್ 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ನವೀಕರಣಗಳನ್ನು ಪಡೆದುಕೊಂಡು 2025ರ ಸೀಲ್ ಎಲೆಕ್ಟ್ರಿಕ್ ಸೆಡಾನ್ ಆಗಿ ಬಿಡುಗಡೆಯಾಗಿದೆ. ಸದ್ಯ ಭಾರತದಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ಸೆಡಾನ್‌ಗಳ ಸಾಲಿನಲ್ಲಿ ಐಷಾರಾಮಿ ಬ್ರಾಂಡ್‌ಗಳಿಗೆ ಸೆಡ್ಡು ಹೊಡೆಯುವಂತಹ ಫೀಚರ್ಸ್‌ನೊಂದಿಗೆ ಈ ಕಾರು ಮತ್ತೊಮ್ಮೆ ಮಿಂಚುತ್ತಿದೆ. ಹೊಸ ಬಿವೈಡಿ ಸೀಲ್ ಇಂಟೀರಿಯರ್‌ನಲ್ಲಿ ಹೊಸ ಸಿಲ್ವರ್ ಕೋಟೆಡ್ ಡಿಮ್ಮಿಂಗ್ ರೂಫ್‌ನಂತಹ ಹಲವು ವಿಶೇಷತೆಗಳಿವೆ.

ಸೆಲ್ಫ್-ಡಿಸ್ಚಾರ್ಜ್ ದರವನ್ನು ಐದು ಪಟ್ಟು ಕಡಿಮೆ ಮಾಡಲಾಗಿದ್ದು, 2025ರ ಬಿವೈಡಿ ಸೀಲ್ ಕೇವಲ 3.8 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸೆಡಾನ್ ಲಿಥಿಯಂ ಐರನ್ ಫಾಸ್ಫೇಟ್ (ಎಲ್ಎಫ್‌ಟಿ) ಕಡಿಮೆ-ವೋಲ್ಟೇಜ್ ಬ್ಯಾಟರಿಯನ್ನು ಹೊಂದಿದ್ದು, ಸಾಮಾನ್ಯ ಬ್ಯಾಟರಿ ವ್ಯವಸ್ಥೆಗಳಿಗಿಂತ ಆರು ಪಟ್ಟು ಹಗುರವಾಗಿದೆ.

2025-byd-seal-electric-sedan-top-things

ಮೂರು ವಿಭಿನ್ನ ಬ್ಯಾಟರಿ ಪವರ್‌ ಆಯ್ಕೆಯಲ್ಲಿ ಲಭ್ಯವಿರುವ ಈ ಕಾರು, 61.44 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿರುವ ಡೈನಾಮಿಕ್ ರಿಯರ್ ವೀಲ್ ಡ್ರೈವ್ ವೇರಿಯೆಂಟ್ ಬೆಲೆಗಳು 41 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ. ಹೆಚ್ಚು ಪರ್ಫಾಮೆನ್ಸ್ ಬಯಸುವ ಉತ್ಸಾಹಿ ಚಾಲಕರಿಗಾಗಿ 'ಸೀಲ್ ಪರ್ಫಾಮೆನ್ಸ್ ಆಲ್ ವೀಲ್ ಡ್ರೈವ್' ವೇರಿಯೆಂಟ್ ಇದ್ದು, ಇದರ ಬೆಲೆಯು 53.15 ಲಕ್ಷ ರೂ.ಗಳಾಗಿದೆ.

ಟ್ವಿನ್ ಮೋಟರ್‌ಗಳನ್ನು ಒಂದೇ ದೊಡ್ಡ ಬ್ಯಾಟರಿ ಪ್ಯಾಕ್ ನೊಂದಿಗೆ ಸಂಯೋಜಿಸಿ ಉತ್ತಮ ಪರ್ಫಾಮೆನ್ಸ್ ಹೊರಹಾಕಿವಂತೆ ಈ ವೇರಿಯೆಂಟ್ ಅನ್ನು ನಿರ್ಮಿಸಲಾಗಿದೆ. ಲಾಂಗ್ ರೇಂಜ್ ಮತ್ತು ಹೆಚ್ಚಿನ ಫೀಚರ್‌ಗಳನ್ನು ಬಯಸುವವರಿಗೆ, 82.56 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಪ್ರೀಮಿಯಂ ರಿಯರ್ ವೀಲ್ ಡ್ರೈವ್ ಲಭ್ಯವಿದ್ದು, ಇದರ ಬೆಲೆಯು 45.70 ಲಕ್ಷ ರೂ. ಇದೆ.

2025-byd-seal-electric-sedan-top-things

ಈ ಕಾರಿನಲ್ಲಿ ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಬಿವೈಡಿಯ ಡೈಸಸ್-ಸಿ ಇಂಟೆಲಿಜೆಂಟ್ ಡ್ಯಾಂಪಿಂಗ್ ಸಿಸ್ಟಮ್ (ನಿರಂತರ ತೇವಾಂಶ ನಿಯಂತ್ರಣಕ್ಕೆ ಹೋಲುತ್ತದೆ) ನ ಸೆಲೆಕ್ಟಿವ್ ಡ್ಯಾಂಪರ್ಗಳನ್ನು ಅಳವಡಿಸಿಕೊಳ್ಳುವುದು ಪ್ರಮುಖ ಟೆಕ್ನಿಕಲ್ ಹೈಲೈಟ್‌ಗಳು ಆಗಿವೆ. ಎರಡೂ ತಂತ್ರಜ್ಞಾನಗಳು ಸುಧಾರಿತ ಸವಾರಿ ಗುಣಮಟ್ಟ ಮತ್ತು ನಿರ್ವಹಣೆಯನ್ನು ಅನುಮತಿಸುತ್ತವೆ.

ಎಲೆಕ್ಟ್ರಿಕ್ ಪವರ್ಡ್ ಸನ್ ಶೇಡ್ ಅನ್ನು ಸ್ಟ್ಯಾಂಡರ್ಡ್ ಆಗಿ ಎಲ್ಲಾ ವೇರಿಯೆಂಟ್‌ಗಳಲ್ಲಿ ನೀಡಲಾಗಿದೆ. ಹೊಸ ಬಿವೈಡಿ ಸೀಲ್ ಇಂಟೀರಿಯರ್‌ನಲ್ಲಿ ಹೊಸ ಸಿಲ್ವರ್ ಕೋಟೆಡ್ ಡಿಮ್ಮಿಂಗ್ ರೂಫ್ ಅನ್ನು ಪರಿಚಯಿಸಲಾಗಿದೆ. ಕ್ಲೈಮೆಟ್ ಕಂಟ್ರೋಲ್ ವ್ಯವಸ್ಥೆಗೆ ನವೀಕರಣಗಳಾಗಿ - ದೊಡ್ಡ ಕಂಪ್ರೆಸರ್ ಮತ್ತು ಹೊಸ ಶುದ್ಧೀಕರಣ ಮಾಡ್ಯೂಲ್ ಅನ್ನು ನೀಡಿರುವುದು ಇತರ ಮುಖ್ಯಾಂಶಗಳಾಗಿವೆ.

2025-byd-seal-electric-sedan-top-things

ಬ್ರಾಂಡ್‌ನ ಭಾರತೀಯ ಶ್ರೇಣಿಯಲ್ಲಿ ಪ್ರಸ್ತುತ ಅಟೋ 3 ಕ್ರಾಸ್ ಒವರ್, ಇಮ್ಯಾಕ್ಸ್ 7 ಎಂಪಿವಿ ಮತ್ತು ಇತ್ತೀಚೆಗೆ ಬಿಡುಗಡೆಯಾದ ಸೀಲಿಯನ್ 7 ಸೇರಿವೆ. ಇವೆಲ್ಲವು ಬಿವೈಡಿಗೆ ಭಾರತದಲ್ಲಿ ಭಾರೀ ಜನಪ್ರಿಯತೆ ತಂದುಕೊಟ್ಟಿವೆ. ಈಗಾಗಲೇ ಬಿಡುಗಡೆಯಾಗಿ ವಿಶ್ವದಾದ್ಯಂತ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದ 'ಬಿವೈಡಿ ಸೀಲ್' ಇದೀಗ ನವೀಕರಣಗಳನ್ನು ಪಡೆದುಕೊಂಡು 2025ರ ಸೀಲ್ ಎಲೆಕ್ಟ್ರಿಕ್ ಸೆಡಾನ್ ಆಗಿ ಬಿಡುಗಡೆಯಾಗಿರುವುದು ಕಂಪನಿಗೆ ಮತ್ತೊಂದು ಮೈಲಿಗಲ್ಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 29, 2025, 11:26 [IST]
English summary
2025 byd seal electric sedan top things
Read more on byd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+