Hyundai: ನಿನ್ನೆಯಷ್ಟೆ ಹೊಸ ಹ್ಯುಂಡೈ ವೆನ್ಯೂ ಬಿಡುಗಡೆ: ಕೇವಲ 7.8 ಲಕ್ಷಕ್ಕೆ ಕಾಂಪ್ಯಾಕ್ಟ್ SUV
ಹುಂಡೈ ಕಂಪನಿಯು ಭಾರತದಲ್ಲಿ ಕೊನೆಗೂ ತನ್ನ ಬಹುನಿರೀಕ್ಷಿತ ಹುಂಡೈ ವೆನ್ಯೂ (Hyundai Venue) ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಈಗ ಬೇಸ್ ವೇರಿಯೆಂಟ್ ಅನ್ನು ರೂ. 7,89,900 (ಎಕ್ಸ್-ಶೋರೂಂ) ಆರಂಭಿಕ ಬೆಲೆಗಳೊಂದಿಗೆ, ಹೊಚ್ಚ ಹೊಸ ಹುಂಡೈ ವೆನ್ಯೂವನ್ನು ಖರೀದಿಸಬಹುದಾಗಿದೆ. ಬಹು ಪವರ್‌ಟ್ರೇನ್ ಆಯ್ಕೆ, ಸಾಕಷ್ಟು ಹೊಸ ಫೀಚರ್ಸ್, ರಗಡ್ ಡಿಸೈನ್‌ನೊಂದಿಗೆ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ರೋಮಾಂಚಕಾರಿ ಪರ್ಫಾಮೆನ್ಸ್ ನೀಡುವುದಾಗಿ ಹ್ಯುಂಡೈ ಹೇಳಿದೆ. ಈ ಕಾರಿನ ಕುರಿತ ಟಾಪ್ ಹೈಲೆಟ್‌ಗಳು ಇಲ್ಲಿವೆ.
ಎಂಜಿನ್ ವಿಶೇಷತೆಗಳು: ಹೊಸ ಹ್ಯುಂಡೈ ವೆನ್ಯೂನಲ್ಲಿ ಕಪ್ಪಾ 1.2 l MPi ಪೆಟ್ರೋಲ್, ಕಪ್ಪಾ 1.0 l ಟರ್ಬೊ GDi ಪೆಟ್ರೋಲ್ ಮತ್ತು U2 1.5 l CRDi ಡೀಸೆಲ್ ಎಂಬ ಮೂರು ಪವರ್‌ಟ್ರೇನ್ ಆಯ್ಕೆಗಳನ್ನು ನೀಡಲಾಗಿದೆ. U2 1.5 ಲೀಟರ್ CRDi ಡೀಸೆಲ್ ಎಂಜಿನ್ ರಾಜಿ ಇಲ್ಲದೆ ಕಾರ್ಯಕ್ಷಮತೆಯನ್ನು ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಕಪ್ಪಾ 1.2 ಲೀಟರ್ MPi ಪೆಟ್ರೋಲ್ ದೈನಂದಿನ ಚಾಲನೆಗೆ ನಯವಾದ, ವಿಶ್ವಾಸಾರ್ಹ ಮತ್ತು ಪರಿಪೂರ್ಣ ಪವರ್‌ಟ್ರೇನ್ ಆಗಿದ್ದು, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಕಪ್ಪಾ 1.0 ಲೀಟರ್ ಟರ್ಬೊ GDi ಪೆಟ್ರೋಲ್ ಎಂಜಿನ್ ಹೆಚ್ಚು ಶಕ್ತಿಶಾಲಿ ಅನುಭವವನ್ನು ಬಯಸುವವರಿಗೆ ಸೂಕ್ತವಾಗಿದೆ. 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಐಡಲ್ ಸ್ಟಾಪ್ ಮತ್ತು ಗೋ (ISG) ಹೊಂದಿರುವ ಸುಧಾರಿತ 7 ಸ್ಪೀಡ್ DCT ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.
ಆಧುನಿಕ ಫೀಚರ್ಸ್: ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಧ್ವನಿ ಸಕ್ರಿಯಗೊಳಿಸಿದ ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್, ಬೋಸ್ ಪ್ರೀಮಿಯಂ ಸೌಂಡ್ 8 ಸ್ಪೀಕರ್ ಸಿಸ್ಟಮ್, ಮುಂದಿನ ಸಾಲಿನ ವೆಂಟಿಲೇಟೆಡ್ ಸೀಟುಗಳು, ಸರೌಂಡ್ ವ್ಯೂ ಮಾನಿಟರ್ (SVM), ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್ (BVM), ಓವರ್-ದಿ-ಏರ್ (OTA) ನವೀಕರಣ, 70 ಹುಂಡೈ ಬ್ಲೂ ಲಿಂಕ್ ಕನೆಕ್ಟ್ ನಂತಹ ಆಧುನಿಕ ಫಿಚರ್ಸ್ ನೀಡಲಾಗಿದೆ.

ಸುರಕ್ಷತೆ: ಹೊಸ ಹುಂಡೈ ವೆನ್ಯೂನಲ್ಲಿ ಎಲ್ಲಾ 4-ಡಿಸ್ಕ್ ಬ್ರೇಕ್‌ಗಳು, 6 ಏರ್‌ಬ್ಯಾಗ್‌ಗಳು, ಎಲ್ಲಾ ಸೀಟುಗಳಿಗೆ ರಿಮೈಂಡರ್‌ನೊಂದಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ರೋಲ್‌ಓವರ್ ಸೆನ್ಸರ್, ಟೈರ್ ಒತ್ತಡ ಮೇಲ್ವಿಚಾರಣಾ ವ್ಯವಸ್ಥೆ (tpms) - ಹೈಲೈನ್, ಟೆಲಿಮ್ಯಾಟಿಕ್ಸ್ ಸ್ವಿಚ್‌ಗಳೊಂದಿಗೆ ಎಲೆಕ್ಟ್ರೋ ಕ್ರೋಮಿಕ್ ಮಿರರ್ (ECM) ನೀಡುವ ಮೂಲಕ ಈಗ ಹೊಸ ವೆನ್ಯೂ ಅತ್ಯಂತ ಸುರಕ್ಷಿತ ವಾಹನಗಳಲ್ಲಿ ಒಂದಾಗಿದೆ.
ಇದು ಮಾತ್ರವಲ್ಲದೆ ಎಲ್ಲಾ ವೇರಿಯೆಂಟ್‌ಗಳಲ್ಲಿ 33 ಸುರಕ್ಷತಾ ವೈಶಿಷ್ಟ್ಯಗಳನ್ನು ಪ್ರಮಾಣಿತವಾಗಿ ಒಳಗೊಂಡಂತೆ 65 ಕ್ಕೂ ಹೆಚ್ಚು ಸುಧಾರಿತ ಸೇಫ್ಟಿ ಫೀಚರ್ಸ್ ನೀಡಲಾಗಿದೆ. ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸರೌಂಡ್ ವ್ಯೂ ಮಾನಿಟರ್ (SVM), ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ESC), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ನೀಡಲಾಗಿದೆ.

ಬಾಹ್ಯ ವಿನ್ಯಾಸ: ಟ್ವಿನ್ ಹಾರ್ನ್ LED DRLಗಳು, ಹಾರಿಜಾನ್ LED ಪೊಸಿಷನಲ್ ಲ್ಯಾಂಪ್, ಕ್ವಾಡ್ ಬೀಮ್ LED ಹೆಡ್‌ಲ್ಯಾಂಪ್‌ಗಳು, ಹಿಂಭಾಗದ ಹಾರಿಜಾನ್ LED ಟೈಲ್ ಲ್ಯಾಂಪ್‌ಗಳು, ಡಾರ್ಕ್ ಕ್ರೋಮ್ ರೇಡಿಯೇಟರ್ ಗ್ರಿಲ್, ಸಿಗ್ನೇಚರ್ C-ಪಿಲ್ಲರ್ ಡಿಸೈನ್ ಹೊಂದಿದೆ. 3995 ಮಿ.ಮೀ ಉದ್ದ, 1800 ಮಿ.ಮೀ ಅಗಲ, 1665 ಮಿ.ಮೀ ಎತ್ತರ ಹಾಗೂ 2520 ಮಿ.ಮೀ ವೀಲ್‌ಬೇಸ್ ಹೊಂದಿದೆ.
ಸ್ಟೈಲಿಶ್ ಇಂಟೀರಿಯರ್: ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಬ್ಬರಿಗೂ ವಿಶಾಲವಾದ ಸ್ಥಳಾವಕಾಶವನ್ನು ನೀಡುತ್ತದೆ. 12.3 ಇಂಚಿನ ಎರಡು ಕರ್ವ್ ಪನೋರಮಿಕ್ ಡಿಸ್ಪ್ಲೇಗಳು, ಹಿಂಭಾಗದ ವಿಂಡೋ ಸನ್‌ಶೇಡ್, VENUE ಬ್ರ್ಯಾಂಡಿಂಗ್‌ನೊಂದಿಗೆ ಡ್ಯುಯಲ್ ಟೋನ್ ಲೆದರ್ ಸೀಟುಗಳನ್ನು ಒದಗಿಸಲಾಗಿದೆ. ಒಟ್ಟಾರೆ ಸ್ಟೈಲಿಶ್ ಮತ್ತು ವಿಶಾಲವಾದ ಒಳಾಂಗಣವನ್ನು ಹೊಂದಿದ್ದು, ಆಧುನಿಕ ವಿನ್ಯಾಸ ಮತ್ತು ಪ್ರೀಮಿಯಂ ವಸ್ತುಗಳ ಮಿಶ್ರಣವನ್ನು ಪಡೆದಿದೆ.
ಇವಿಷ್ಟೆ ಅಲ್ಲದೆ ಟೆರಾಝೋ-ಟೆಕ್ಸ್ಚರ್ಡ್ ಕ್ರ್ಯಾಶ್ ಪ್ಯಾಡ್ ಫಿನಿಶ್, ಪ್ರೀಮಿಯಂ ಲೆದರ್ ಆರ್ಮ್‌ರೆಸ್ಟ್, ಡಿ-ಕಟ್ ಸ್ಟೀರಿಂಗ್ ವೀಲ್, ಸುತ್ತುವರಿದ ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಕಾಫಿ ಟೇಬಲ್ ಸೆಂಟರ್ ಕನ್ಸೋಲ್, ಕ್ರ್ಯಾಶ್ ಪ್ಯಾಡ್‌ನಲ್ಲಿ ಆಂಬಿಯೆಂಟ್ ಲೈಟಿಂಗ್ (ಮೂನ್ ವೈಟ್), ಎಲೆಕ್ಟ್ರಿಕ್ 4-ವೇ ಡ್ರೈವರ್ ಸೀಟ್, 2-ಸ್ಟೆಪ್ ಒರಗುವ ಹಿಂಭಾಗದ ಸೀಟುಗಳು, ಹಿಂಭಾಗದ AC ವೆಂಟ್‌ಗಳನ್ನು ನೀಡಲಾಗಿದೆ.


Click it and Unblock the Notifications








