2025ರ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಕಾರು ಬಿಡುಗಡೆ: ಫುಲ್ ಸೇಫ್ಟಿ, ಮನಮೋಹಕ ಫೀಚರ್ಸ್.. ಬೆಲೆ ಅಗ್ಗವೇ?

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಸದ್ಯ, ಈ ಕಾರನ್ನು ಒಂದಷ್ಟು ನವೀಕರಣಗೊಳಿಸಿ ಅದ್ದೂರಿಯಾಗಿಯೂ ಬಿಡುಗಡೆಗೊಳಿಸಲಾಗಿದೆ. ನೂತನ ಎಸ್‌ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಗರಿಷ್ಠ ಶ್ರೇಣಿ ರೂಪಾಂತಗಳಲ್ಲಿ (ಟಾಪ್ ಎಂಡ್ ವೇರಿಯೆಂಟ್) ಮಾತ್ರ ದೊರೆಯುತ್ತಿದ್ದ 6-ಏರ್‌ಬ್ಯಾಗ್‌ನ್ನು ಸ್ಟ್ಯಾಂಡರ್ಡ್ ಆಗಿ ಎಲ್ಲ ರೂಪಾಂತರಗಳಲ್ಲಿ ಕೊಡಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.

ವಿವಿಧ ನವೀಕರಣಗಳಿಗೆ ಪಡೆದುಕೊಂಡಿರುವ 2025ರ 'ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ' ಕಾರು, ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಇದು ರೂ.11.42 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ ವಿಶೇಷವಾಗಿ ಸುರಕ್ಷತೆಗೆ ಮಾನ್ಯತೆ ಕೊಟ್ಟಿರುವುದರಿಂದ 6-ಏರ್‌ಬ್ಯಾಗ್‌ನೊಂದಿಗೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

2025 Maruti Suzuki Grand Vitara Suv Launched Rs 11 42 Lakh Starting Price Details

ಬಹುಮುಖ್ಯವಾಗಿ ಈ ಗ್ರ್ಯಾಂಡ್ ವಿಟಾರಾ ಕಾರು ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಡಿಸ್ಕ್ ಬ್ರೇಕ್‌ಗಳು, 3-ಪಾಯಿಂಟ್ ಇಎಲ್ಆರ್ ಸೀಟ್ ಬೆಲ್ಟ್‌ಗಳು ಮತ್ತು ಐಎಸ್ಒಎಫ್ಐಎಕ್ಸ್ ಚೈಲ್ಡ್ ಸೀಟ್ ರೆಸ್ಟೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಕಂಪನಿಯು ಇದೇ ಗ್ರ್ಯಾಂಡ್ ವಿಟಾರಾ ಕಾರಿನ ಶಕ್ತಿಯುತವಾದ ನೂತನ ರೂಪಾಂತರವನ್ನು ಮಾರಾಟಕ್ಕೆ ತಂದಿದೆ. ಅದಕ್ಕೆ ಡೆಲ್ಟಾ ಪ್ಲಸ್ (Delta+) ಎಂದು ಹೆಸರಿಡಲಾಗಿದ್ದು, ರೂ.16.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದು ಜಿಟಾ ಪ್ಲಸ್ (Zeta+) ಹಾಗೂ ಆಲ್ಪಾ ಪ್ಲಸ್ (Alpha+) ಎಂಬ ಹೈಬ್ರಿಡ್ ರೂಪಾಂತರಗಳೊಂದಿಗೆ ಗ್ರಾಹಕರ ಖರೀದಿಗೆ ಲಭ್ಯವಿದೆ. ಅಲ್ಲದೆ, ಜಿಟಾ ಪ್ಲಸ್ (ಒ) ಮತ್ತು ಆಲ್ಪಾ ಪ್ಲಸ್ (ಒ) ಎಂಬ ಹೊಸ ರೂಪಾಂತರಗಳನ್ನು ಹೊರತರಲಾಗಿದೆ.

2025 Maruti Suzuki Grand Vitara Suv Launched Rs 11 42 Lakh Starting Price Details

ನೂತನ 2025ರ ಮಾರುತಿ ಗ್ರ್ಯಾಂಡ್ ವಿಟಾರಾ ಕಾರು ವಿನೂತನವಾಗಿರುವ 8-ವೇ ಡ್ರೈವರ್ ಪವರ್ಡ್ ಸೀಟ್, ಎಲ್ಇಡಿ ಕ್ಯಾಬಿನ್ ಲ್ಯಾಂಪ್‌ಗಳು, ಆಟೋ ಪ್ಯೂರಿಫೈ ಮತ್ತು 7-ಇಂಚಿನ ಅಲಾಯ್ ವೀಲ್‌ಗಳು ಸೇರಿದಂತೆ ಹತ್ತಾರು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದಿದೆ. ಇದರೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಪನೋರಮಿಕ್ ಸನ್‌ರೂಫ್ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇಯಂತಹ ಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿ ಪವರ್‌ಟ್ರೇನ್‌ನಲ್ಲಿಯೂ ಯಾವ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು 1.5-ಲೀಟರ್ ಮೈಲ್ಡ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್), 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಮತ್ತು 1.5-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ ಇ-ಸಿವಿಟಿ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. 19.38 ರಿಂದ 27.97 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

2025 Maruti Suzuki Grand Vitara Suv Launched Rs 11 42 Lakh Starting Price Details

ಈ ಮಾರುತಿ ಗ್ರ್ಯಾಂಡ್ ವಿಟಾರಾ ಕಾರಿನಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 373 ಲೀಟರ್ ಬೂಟ್ ಸ್ಪೇಸ್‌ನ್ನುಒಳಗೊಂಡಿದೆ. ನೂತನ ಎಸ್‌ಯುವಿಗೆ ಹ್ಯುಂಡೈ ಕ್ರೆಟಾ, ಹೋಂಡಾ ಎಲಿವೇಟ್, ಕಿಯಾ ಸೆಲ್ಟೋಸ್ ಹಾಗೂ ಎಂಜಿ ಆಸ್ಟರ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 8, 2025, 16:32 [IST]
English summary
2025 maruti suzuki grand vitara suv launched rs 11 42 lakh starting price details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+